More

    ದೂರದೃಷ್ಟಿಯ ಯೋಜನೆಗಳೊಂದಿಗೆ ಬೆಂಗಳೂರು ರೂಪಿಸಿದವರು : ಸುರೇಶ್ ಬೈಲು ಬಣ್ಣನೆ

    ಕಡಬ: ಕಾಡುಗಳಿಂದ ಆವೃತವಾಗಿದ್ದ ಬೆಂಗಳೂರನ್ನು ದೂರದೃಷ್ಟಿಯ ಆಲೋಚನೆಯೊಂದಿಗೆ ಮಾದರಿಯಾಗಿ ನಾಡಪ್ರಭು ಕೆಂಪೇ ಗೌಡರು ನಿರ್ಮಾಣ ಮಾಡಿದ್ದಾರೆ. ಅವರ ಯೋಚನೆ, ಯೋಜನೆಗಳಿಂದ ನಾಡು ಬೆಳೆಯುತ್ತಿರುವುದರಿಂದ ಇಡೀ ವಿಶ್ವವೇ ಬೆಂಗಳೂರಿನತ್ತ ನೋಡುವಂತಾಗಿದೆ ಎಂದು ಒಕ್ಕಲಿಗ ಸೇವಾ ಸಂಘದ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಬೈಲು ಹೇಳಿದರು.

    ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ, ಗುರುವಾರ ಕಡಬ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿತ ನಾಡ ಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಉದ್ಘಾಟಿಸಿದರು. ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮಾಜಿ ಸದಸ್ಯ ಪಿ.ಪಿ ವರ್ಗಿಸ್, ಒಕ್ಕಲಿಗ ಸೇವಾ ಸಂಘದ ಸ್ಥಾಪಕ ಸಂಚಾಲಕ ಜನಾರ್ದನ ಗೌಡ, ಪ್ರಮುಖರಾದ ತಮ್ಮಯ್ಯ ಗೌಡ, ಒಬಲೇಶ್, ಸೀತಾರಾಮ ಗೌಡ, ಪೂರ್ಣೇಶ್ ಗೌಡ ಬಾಬ್ಲಬೆಟ್ಟು, ವೀಣಾ ಮಹೇಶ್, ವಾಸುದೇವ ಗೌಡ ಕೋಲ್ಪೆ ಮೊದಲಾದವರು ಇದ್ದರು.

    ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರನ್ನು, ವಿವಿಧ ಸ್ಪರ್ಧೆಗಳ ವಿಜೇತರನ್ನು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ಪುರುಷೋತ್ತಮ ಕಾಪಾರು ಅವರನ್ನು ಸನ್ಮಾನಿಸಲಾಯಿತು. ಕಡಬ ತಾಲೂಕು ಪಂಚಾಯಿತಿ ಉಪನಿರ್ದೇಶಕ ಚೆನ್ನಪ್ಪ ಕಜೆಮೂಲೆ ಸ್ವಾಗತಿಸಿದರು. ಕಡಬ ತಾಲೂಕು ಕಚೇರಿ ಉಪತಹಸೀಲ್ದಾರ ಮನೋಹರ್ ಕೆ.ಟಿ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts