More

    ನಾಡ ಕಚೇರಿಗೆ ಬಾರದ ಅಧಿಕಾರಿಗಳು

    ಕವಿತಾಳ: ಹಾಲಾಪುರದಲ್ಲಿ ನಾಡ ಕಾರ್ಯಾಲಯದ ಸಿಬ್ಬಂದಿ ಸಮರ್ಪಕವಾಗಿ ಆಗಮಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುವಂತಾಗಿದೆ.

    ಹಾಲಾಪುರ ಹೋಬಳಿ ವ್ಯಾಪ್ತಿಯಲ್ಲಿ 23 ಗ್ರಾಮಗಳಿದ್ದು, ಈ ಗ್ರಾಮಗಳ ಜನರು ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಕ್ಕಾಗಿ ಹಾಲಾಪುರದಲ್ಲಿರುವ ನಾಡ ಕಚೇರಿಗೆ ಬರುತ್ತಾರೆ. ಆದರೆ, ಕಚೇರಿಯಲ್ಲಿ ಅಧಿಕಾರಿಗಳು ಇರುವುದಿಲ್ಲವಾದ್ದರಿಂದ ಕಾದು ಕುಳಿತುಕೊಳ್ಳುವಂತಾಗಿದೆ. ಅಧಿಕಾರಿಗಳು ಬಂದರೂ ಕೆಲಸವಾಗದೆ ಊರಿಗೆ ಹಿಂದಿರುಗುತ್ತಾರೆ.

    ನಾಡ ತಹಸೀಲ್ದಾರ್ ಆಗಿ ಸುನೀಲ್ ಕುಮಾರ, ಕಂದಾಯ ನಿರೀಕ್ಷಕರಾಗಿ ಅರಳಪ್ಪ, ಗ್ರಾಮ ಲೆಕ್ಕಾಧಿಕಾರಿಗಳಾಗಿ ಕೃಷ್ಣಪ್ಪ, ಬಸವರಾಜ, ಗಂಗಪ್ಪ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಕಚೇರಿಗೆ ಆಗಮಿಸಿದ್ದ ಕಡಬೂರು ಗ್ರಾಮದ ಹನುಮಂತ ಮಾತನಾಡಿ, ನಮ್ಮ ಹೊಲಕ್ಕೆ ಸಂಬಂಧಿಸಿದ ಕೆಲಸಕ್ಕಾಗಿ ನಾಡ ಕಾರ್ಯಾಲಯಕ್ಕೆ ಬಂದಿದ್ದು, ಕಚೇರಿಯಲ್ಲಿ ಯಾರೂ ಇಲ್ಲದಿರುವುದರಿಂದ ಊರಿಗೆ ವಾಪಸ್ ಹೋಗುವಂತಾಗಿದೆ ಎಂದರು. ಮಹಿಳೆಯರು, ಅಂಗವಿಕಲರು ಕೂಡ ಕಚೇರಿಗೆ ಬಂದು ಅಧಿಕಾರಿಗಳು ಇಲ್ಲದಿರುವುದನ್ನು ಕಂಡು ಹಿಂದಿರುಗುತ್ತಿದ್ದಾರೆ.

    ಈ ಕುರಿತು ಮಾತನಾಡಿದ ಗ್ರಾಪಂ ಸದಸ್ಯ ಚಂದಪ್ಪ ದೊಡ್ಡಮನಿ, ಮಲ್ಲಪ್ಪ ರೇವಣಗಿ, ರಾಮಣ್ಣ ಜಂಗಮರಹಳ್ಳಿ, ನಾಗಮ್ಮ ಕಡಬೂರು, ನಾಡ ಕಚೇರಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಚೇರಿಗೆ ಬಂದು ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts