More

    ಸಾವರ್ಕರ್, ಗೋಡ್ಸೆಗಿಂತ ಮಹಿಷ ಕೆಟ್ಟವನಾ?; ಪುಷ್ಪಾರ್ಚನೆಗೆ ಸೀಮಿತವಾದ ಮಹಿಷ ದಸರಾ

    ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ನಿರ್ಬಂಧ ಹಿನ್ನೆಲೆಯಲ್ಲಿ ಅಶೋಕಪುರಂ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ಪಾರ್ಕ್ ನಲ್ಲಿ ಆಚರಣೆ ಮಾಡಲಾಗಿದೆ. ಮಹಿಷ ದಸರಾ ಹೋರಾಟ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೆರವಣಿಗೆಗೆ ಪೋಲೀಸರ ಅನುಮತಿ ನಿರಾಕರಣೆ ಹಿನ್ನೆಲೆ, ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಗಿದೆ.

    ಮಹಿಷ ದಸರಾ ಆಚರಣೆ ಮಾಡಬಾರದು ಎಂದು ಚಾಮುಂಡಿ ಏನಾದ್ರು ಕಂಪ್ಲೇಂಟ್ ಕೊಟ್ರಿದ್ರ.?

    ಸಾವರ್ಕರ್ ಫೋಟೋ ಹಾಕಿ ಗಣೇಶನ ಮೆರವಣಿಗೆ ಮಾಡುತ್ತಾರೆ. ಗೋಡ್ಸೆ ಫೋಟೋ ಇಟ್ಟು ಮೆರವಣಿಗೆ ಮಾಡುತ್ತಾರೆ. ಮಹಿಷ ಅವರಿಗಿಂತ ಕೆಟ್ಟವನಾ? ತಾಕತ್ ಇದ್ರೆ ಅವರ ಮೇಲೆ ಕ್ರಮ ವಹಿಸಬೇಕಿತ್ತು. ಮಹಿಷ ದಸರಾ ಆಚರಣೆ ಮಾಡಬಾರದು ಎಂದು ಚಾಮುಂಡಿ ಏನಾದ್ರು ಕಂಪ್ಲೀಟ್ ಕೊಟ್ರಿದ್ರ.? ಎಂದು ಮಹಿಷಾ ದಸರಾ ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹೇಳಿಕೆ ನೀಡಿದ್ದಾರೆ.

    ಮಹಿಸೂರು ಎಂದು ಹಿಂದಿನ ರಾಜರು ಪತ್ರಗಳಲ್ಲಿ ನಮೂದು ಮಾಡುತ್ತಿದ್ದರು. ಚಾಮುಂಡಿ ಕಾಲ್ಪನಿಕ ವ್ಯಕ್ತಿ. ಜನರಿಗೆ ಪುರಾಣದ ಕಥೆ ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಕಾಲ್ಪನಿಕ ವ್ಯಕ್ತಿ, ಜೀವಂತ ವ್ಯಕ್ತಿಯನ್ನು ಹೇಗೆ ಕೊಲ್ಲಲು ಸಾಧ್ಯ? ಸುರ ಅಂದರೆ ಶೋಕಿ ಮಾಡಿ ಕಾಲ ಕಳೆಯುವವರು. ಅಸುರ ಅಂದರೆ ಅ+ಸುರ, ಪ್ರಾಣವನ್ನು ಯಾರು ರಕ್ಷಿಸುತ್ತಾರೋ ಅವರು ಅಸುರ. ಸುರ’ನಲ್ಲದವನು ಅಸುರ ಎಂದು ಹೇಳಿದ್ದಾರೆ.

    ಮೈಸೂರಿನ ಉಸ್ತುವಾರಿ ಸಚಿವರಿಗೆ ಇಲ್ಲಿನ ಬಗ್ಗೆ ಏನು ಗೊತ್ತಿದೆ? ಇಲ್ಲಿನ ಸಂಸದ ಮೋದಿ ಬಗ್ಗೆ ಪುಸ್ತಕ ಬರೆದು ಅಧಿಕಾರ ಗಿಟ್ಟಿಸಿಕೊಳ್ಳುತ್ತಾರೆ. ಸಂಸದ ಚಾಮುಂಡಿ ಕುರಿತ ಪುಸ್ತಕ ಓದಲಿ. ಮಹಿಷ ದಸರಾ ಸಿದ್ದತೆ ವೇಳೆ ಸಂಸದ ಪೊಲೀಸ್ ಅಧಿಕಾರಿಯನ್ನು ಷಂಡ ಎನ್ನುತ್ತಾನೆ. ಬರುವ ವರ್ಷ ಬಿಜೆಪಿ ಅಧಿಕಾರಕ್ಕೆ ಬರಬಾರದು. ಬೇರೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅದ್ದೂರಿ ಮಹಿಷ ದಸರಾ ಆಚರಣೆ ಮಾಡುತ್ತೇವೆ ಎಂದು ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹೇಳಿಕೆ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಹಿರಿಯ ಸಾಹಿತಿ ಪ್ರೊ.ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts