More

    ಮುಡಾ ಗೋಲ್ಮಾಲ್ ನಾಲ್ವರ ಎತ್ತಂಗಡಿ

    ಸಮಗ್ರ ತನಿಖೆಗೆ ಅಧಿಕಾರಿಗಳ ನೇಮಕ | 50:50 ಅನುಪಾತದಡಿ ಹಂಚಿದ್ದ ಸೈಟ್ ರದ್ದು

    ವಿಜಯವಾಣಿ ಸುದ್ದಿಜಾಲ ಮೈಸೂರು

    ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಬೆಳಕಿಗೆ ಬಂದಿರುವ 4 ಸಾವಿರ ಕೋಟಿ ರೂ.ಗಳ ಬ್ರಹ್ಮಾಂಡ ಭ್ರಷ್ಟಾಚಾರ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿರುವಂತೆಯೇ ಸಿದ್ದರಾಮಯ್ಯ ಸರ್ಕಾರ ಎಚ್ಚೆತ್ತಿದೆ. ಅಕ್ರಮದಲ್ಲಿ ದೊಡ್ಡವರ ‘ಕೈ’ವಾಡ ಇರುವ ಕುರಿತು ವಿಜಯವಾಣಿ ವಿಶೇಷ ವರದಿ ಮೂಲಕ ಬೆಳಕು ಚೆಲ್ಲಿದ ಬೆನ್ನಲ್ಲೇ ದಿಢೀರ್ ಮೈಸೂರಿಗೆ ದೌಡಾಯಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ. ಜತೆಗೆ 50: 50 ಅನುಪಾತದ ಅಡಿ ಹಂಚಿಕೆ ಮಾಡಿದ್ದ ನಿವೇಶನಗಳನ್ನು ರದ್ದುಪಡಿಸಿ, ನಾಲ್ವರ ವರ್ಗಾವಣೆಗೆ ಮೌಖಿಕ ಆದೇಶ ನೀಡಿದ್ದಾರೆ.

    ಸೋಮವಾರ ಮೈಸೂರಿಗೆ ಆಗಮಿಸಿದ ಸಚಿವ ಬೈರತಿ ಮುಡಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿದರು. ಮುಡಾ ಆಯುಕ್ತ ಜಿ.ಟಿ. ದಿನೇ್ಕá-ಮಾರ್ ಅವರಿಂದ ಮಾಹಿತಿ ಪಡೆದá-ಕೊಂಡರು.ಅಕ್ರಮದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮುಡಾ ಆಯá-ಕ್ತರು, ಕಾರ್ಯರ್ದ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೇರಿ ಇತರ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಲು ಆದೇಶಿಸಿದರು. ಇನ್ನು ಹಗರಣದ ಸಮಗ್ರ ತನಿಖೆಗೆ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, 4 ವಾರದಲ್ಲಿ ವರದಿ ಸಲ್ಲಿಸಬೇಕು. ಮುಡಾದಲ್ಲಿ ಸೈಟ್ ಹಂಚಿಕೆ ಸಂಬಂಧಿತ ಯಾವುದೇ ಪ್ರಕ್ರಿಯೆಳು ನಡೆಸಬಾರದು. ಮುಂದಿನ ಒಂದು ತಿಂಗಳು ಸಭೆ ಕೂಡ ನಡೆಸದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಧಿಕಾರಿಗಳ ದೌಡು: ಸಚಿವರ ಭೇಟಿ ಹಿನ್ನಲೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ, ಮೈಸೂರು ನಗರಪಾಲಿಕೆ ಆಯá-ಕ್ತ ಅಶಾದ್ ಉರ್ ರೆಹಮಾನ್ ಷರೀಫ್ ಸಭೆಯಲ್ಲಿ ಭಾಗಿಯಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಮುಡಾ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸ್ಪಂದನೆ ಕೇಂದ್ರ ಹೊರತುಪಡಿಸಿ ಮುಡಾ ಕಚೇರಿ ಒಳಗೆ ಪ್ರವೇಶಿಸಲು ಸಾರ್ವಜನಿಕರಿಗೆ ನಿರ್ಬಂಧಿಸಲಾಗಿತ್ತು. 50:50 ಅನುಪಾತದ ನೆಪದಲ್ಲಿ ನಡೆದಿರುವ ಬಹುಕೋಟಿ ರೂ. ಹಗರಣದ ಬಗ್ಗೆ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಸರ್ಕಾರದ ಮá-ಖ್ಯ ಕಾರ್ಯರ್ದಗೆ ದೂರು ನೀಡಿದ್ದರು. ಸುಮಾರು 4 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಗರಣವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸá-ವಂತೆ ಒತ್ತಾಯಿಸಿದ್ದಾರೆ.

    ಮಾಹಿತಿ ಕೋರಿ ಪತ್ರ: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮುಡಾ ಅಕ್ರಮ ಸಂಬಂಧ 2020ರ ಜನವರಿಯಿಂದ 2024ರ ಜೂನ್ ಅಂತ್ಯದವರೆಗೂ ನೋಂದಣಿ ಆಗಿರುವ ನಿವೇಶನಗಳ ಸಮಗ್ರ ವಿವರ ಕೇಳಿ ಜಿಲ್ಲಾ ನೋಂದಣಾಧಿಕಾರಿ, ಮುಡಾ ನೋಂದಣಾಧಿಕಾರಿಗೆ ಪತ್ರ ಬರೆದಿದ್ದಾರೆ.

    ಸಿಎಂ ಪತ್ನಿ ಹೆಸರಲ್ಲೂ ಅಕ್ರಮ? : ಮುಡಾ ಭ್ರಷ್ಟಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರು ಕೇಳಿಬಂದಿದೆ. ನಂ.206, 16ನೇ ಕ್ರಾಸ್, ವಿಜಯನಗರ ಹೆಸರಿನಲ್ಲಿ ನಿಯಮಬಾಹಿರವಾಗಿ ನಿವೇಶನ ವರ್ಗಾವಣೆ ಆಗಿದೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರು ತಾಲೂಕು ಕೆಸರೆ ಸರ್ವೆ ಸಂಖ್ಯೆ 464ರ 3.16 ಎಕರೆ ಜಮೀನನ್ನು ಮುಡಾ ವಶಪಡಿಸಿಕೊಂಡ ಬಳಿಕ ಭೂ ಸ್ವಾಧೀನದಿಂದ ಕೈ ಬಿಟ್ಟಿದೆ. ಆದರೂ ಆ ಜಾಗದಲ್ಲಿಯೇ ದೇವನೂರು ಬಡಾವಣೆ ಹೆಸರಿನಲ್ಲಿ ಅಭಿವೃದ್ಧಿಪಡಿಸಿ 50: 50ರ ಅನá-ಪಾತದಲ್ಲಿ 38,284 ಚದರ ಅಡಿ ಅಳತೆಯ ಅಭಿವೃದ್ಧಿಪಡಿಸಿದ ನಿವೇಶನವನ್ನು ಪರಿಹಾರ ರೂಪದಲ್ಲಿ ನೀಡá-ವಂತೆ 2021ರ ಡಿ.30 ರಂದು ಮುಡಾ ಆಯá-ಕ್ತರು ಆದೇಶ ಹೊರಡಿಸಿದ್ದಾರೆ. ಜಮೀನು ಕಳೆದá-ಕೊಂಡ ಈ ಬಡಾವಣೆಯಲ್ಲಿಯೇ ನಿವೇಶನಗಳು ಖಾಲಿ ಇದ್ದರೂ ಪರ್ಯಾಯವಾಗಿ ಅತ್ಯಂತ ಬೆಲೆ ಬಾಳá-ವ ವಿಜಯನಗರ ಬಡಾವಣೆಗಳಲ್ಲಿ ನಿವೇಶನ ನೀಡಿರá-ವುದು ಮುಖ್ಯಮಂತ್ರಿ ಕುಟುಂಬಕ್ಕೆ ಲಾಭ ಮಾಡಿಕೊಡá-ವ ಉದ್ದೇಶ ಇದಾಗಿದೆ ಎಂದು ದೂರಿದರು.

    ತನಿಖಾ ತಂಡ ರಚನೆ: 50:50ರ ಅನುಪಾತದಡಿ ನಿವೇಶನ ಹಂಚಿಕೆಯಲ್ಲಿನ ಹಗರಣ ಕುರಿತು ತನಿಖೆ ನಡೆಸಲು ರಚಿಸಲಾಗಿರುವ ವಿಶೇಷ ತನಿಖಾ ತಂಡದಲ್ಲಿ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳಾದ ವೆಂಕಟಾಚಲಪತಿ, ಕವಳಗಿ ಇದ್ದಾರೆ.

    ಯಾರ ಎತ್ತಂಗಡಿ?

    . ದಿನೇಶ್​ ಕುಮಾರ್​, ಆಯುಕ್ತ

    . ಶೇಖರ್, ಕಾರ್ಯರ್ದ

    . ಶ್ರೀನಿವಾಸ್, ಎಇಇ

    . ಸಂಪತ್​ಕುಮಾರ್, ಎಇಇ

    ಕಣ್ಣೊರೆಸುವ ತಂತ್ರ: ಮುಡಾದಲ್ಲಿ ಸಾವಿರಾರು ಕೋಟಿ ರೂ.ಗಳ ಅಕ್ರಮ ನಡೆದಿದ್ದು, ದೊಡ್ಡವರ ಕೈವಾಡ ಇರುವ ಆರೋಪ ಕೇಳಿಬಂದಿದೆ. ನಾಲ್ವರು ಅಧಿಕಾರಿಗಳಿಗೆ ಅಮಾನತು ಶಿಕ್ಷೆ ಬದಲು ಎತ್ತಂಗಡಿ ಮಾಡಿರುವ ಸರ್ಕಾರದ ನಡೆ ಕಣ್ಣೊರೆಸುವ ತಂತ್ರ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಸಚಿವರು ಹೇಳಿದ್ದೇನು?

    . 50:50 ಅನುಪಾತದ ಸೈಟ್ ಹಂಚಿಕೆ ರದ್ದು

    . 2020ರಲ್ಲಿ 50:50 ಅನುಪಾತ ಜಾರಿಗೆ

    . ನಿವೇಶನ ನೀಡಲು ಸಂಪುಟ ಸಮ್ಮತಿ ಬೇಕು

    . ಆದರೆ ಮುಡಾದಲ್ಲಿ ನಿಯಮ ಉಲ್ಲಂಘನೆ

    . ಸಂಪುಟ ಸಮ್ಮತಿ ಪಡೆಯದೆ ಸೈಟ್ ಹಂಚಿಕೆ

    . ನಿಯಮ ಉಲ್ಲಂಘಿಸಿ ಸೈಟ್ ಹಂಚಿಕೆ ಆಗಿದೆ

    . ಎಷ್ಟು ಅಕ್ರಮವಾಗಿದೆ ಎಂಬುದು ಇನ್ನೂ ತಿಳಿದಿಲ್ಲ

    . ತಿಳಿದುಕೊಳ್ಳುವುದಕ್ಕಾಗಿಯೇ ತನಿಖೆಗೆ ಆದೇಶ

    . ನಮ್ಮ ಅವಧಿಯಲ್ಲಿ ಅಕ್ರಮಕ್ಕೆ ಅವಕಾಶ ಕೊಟ್ಟಿಲ್ಲ

    . ಬಿಜೆಪಿ ಅವಧಿಯಲ್ಲಿ ಈ ನಿಯಮ ಜಾರಿ ಆಗಿದೆ

    ಮುಡಾದಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದಿದ್ದರೂ ಅಧಿಕಾರಿಗಳನ್ನು ಶಿಕ್ಷಿಸದೆ ಕೇವಲ ವರ್ಗಾವಣೆ ಮಾಡಲು ಸಚಿವರು ಆದೇಶಿಸಿದ್ದಾರೆ. ವರ್ಗಾವಣೆ ಶಿಕ್ಷೆ ಅಲ್ಲ. ಆದ್ದರಿದ ಪ್ರಕರಣವನ್ನು ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ವಹಿಸಬೇಕು.

    ಟಿ.ಎಸ್.ಶ್ರೀವತ್ಸ ಶಾಸಕ, ಕೆ.ಆರ್.ಕ್ಷೇತ್ರ

    ಯತೀಂದ್ರ ಪಾತ್ರ ಕಂಡಿಲ್ಲ

    ಮá-ಡಾ ಹಗರಣದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಅವರ ಪಾತ್ರ ಇರುವುದು ಈ ಕ್ಷಣದವರೆಗೂ ಕಂಡು ಬಂದಿಲ್ಲ. ಎಂಎಲ್​ಸಿ ಎಚ್.ವಿಶ್ವನಾಥ್ ನಮಗಿಂತ ಹಿರಿಯರು. ಅವರ ಬಳಿ ಯಾವುದಾದರು ಸಾಕ್ಷಿ, ದಾಖಲೆ ಇದ್ದರೆ ಅದರ ಮೂಲಕ ಆರೋಪ ಮಾಡಬೇಕು. ದಾಖಲೆಯೇ ಇಲ್ಲದೆ ಆರೋಪ ಮಾಡá-ವುದು ಸರಿಯಲ್ಲ. ನಿವೇಶನ ಕೊಡಿಸá-ವಂತೆ ವಿಶ್ವನಾಥ್ ಅವರೇ ನನ್ನ ಬಳಿ ಬಂದಿದ್ದನ್ನು ನೆನಪು ಮಾಡಿಕೊಳ್ಳಲಿ. ಪೆನ್​ಡ್ರೖೆವ್ ಸಂಸ್ಕೃತಿ ನಮ್ಮದಲ್ಲ.

    | ಬೈರತಿ ಸುರೇಶ್ ನಗರಾಭಿವೃದ್ಧಿ ಸಚಿವ

    ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಅವ್ಯವಹಾರ ಆರಂಭಗೊಂಡಿದೆ. ನ್ಯಾಯಯá-ತವಾಗಿ ತನಿಖೆ ನಡೆಯಲು ಪ್ರಭಾವಿಗಳು ಬಿಡುತ್ತಿಲ್ಲ. ಮುಡಾದಲ್ಲಿ ಆಗಿರುವ ಅವ್ಯವಹಾರ ಬಯಲಿಗೆಳೆಯಲು ವಿಶೇಷ ತನಿಖೆಗೆ ನೀಡಬೇಕು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರಾಜೀನಾಮೆ ನೀಡಬೇಕು. ಮುಡಾ ಆಸ್ತಿ ಮತ್ತು ನಿವೇಶನಗಳು ಉಳಿಯಬೇಕಾದರೆ ಜಿಲ್ಲಾಧಿಕಾರಿಗಳ ಸುಪರ್ದಿಗೆ ವಹಿಸಬೇಕು.

    ಆರ್.ರಘು ಕೌಟಿಲ್ಯ, ರಾಜ್ಯಾಧ್ಯಕ್ಷ, ಬಿಜೆಪಿ ಒಬಿಸಿ ಮೋರ್ಚಾ

    ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಿಂದೂ ಹೇಳಿಕೆಗೆ ಸಿಎಂ ಯೋಗಿ ಆದಿತ್ಯನಾಥ್ ಆಕ್ಷೇಪ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts