More

    ಗೋಳಿಗರಡಿ ಕ್ಷೇತ್ರಕ್ಕೆ ಸಂಸದ ಕೋಟ ಭೇಟಿ

    ಕೋಟ: ಸಾಸ್ತಾನ ಗೋಳಿಗರಡಿ ಶ್ರೀ ಬ್ರಹ್ಮಬೈದರ್ಕಳ ಪಂಜುರ್ಲಿ ಪರಿವಾರ ದೈವಸ್ಥಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಂಸದರಿಗೆ ದೈವಸ್ಥಾನದ ಮುಖ್ಯಸ್ಥ ಜಿ.ವಿಠ್ಠಲ ಪೂಜಾರಿ ಶಾಲು ಹೊದೆಸಿ ಪ್ರಸಾದ ವಿತರಿಸಿದರು.

    ಪಾಂಡೇಶ್ವರ ಗ್ರಾ.ಪಂ ಅಧ್ಯಕ್ಷೆ ಸುಶೀಲ ಪೂಜಾರಿ, ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, ಮಹಿಳಾ ಘಟಕದ ಕಾರ್ಯದರ್ಶಿ ಲೀಲಾವತಿ ಗಂಗಾಧರ, ಸಾಸ್ತಾನ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಗೋವಿಂದ ಪೂಜಾರಿ, ಸಿಇಒ ವಿಜಯ್ ಪೂಜಾರಿ, ದೈವಸ್ಥಾನದ ಪಾತ್ರಿ ಶಂಕರ ಪೂಜಾರಿ, ಬಿಜೆಪಿ ಮುಖಂಡ ಐರೋಡಿ ವಿಠ್ಠಲ ಪೂಜಾರಿ,ಉದ್ಯಮಿ ಪಂಜು ಪೂಜಾರಿ ಬೆಂಗಳೂರು, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಶಿಕ್ಷಕ ನರೇಂದ್ರ ಕುಮಾರ್ ಕೋಟ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts