More

    ಲೋಕಸಭೆ ಚುನಾವಣೆ ಮುಗಿದ ಮೇಲೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಎಂದು ಹೇಳಲಾಗಿತ್ತು ಎಂದ ಕೆ.ಎನ್.ರಾಜಣ್ಣ

    ಬೆಂಗಳೂರು:
    ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಪರೋಕ್ಷವಾಗಿ ಬ್ಯಾಟಿಂಗ್ ಮಾಡಿದ್ದಾರೆ.
    ಲೋಕಸಭೆ ಚುನಾವಣೆ ಆಗುವ ತನಕ ಮಾತ್ರ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಇರುತ್ತಾರೆ ಎಂದು ಹೈಕಮಾಂಡ್ ನಾಯಕರು ಹೇಳಿದ್ದರು. ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಅದನ್ನು ನೆನಪು ಮಾಡಿಕೊಡಲು ಇಷ್ಟಪಡುತ್ತೇನೆ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲ ಸಮುದಾಯದವರೂ ಅಧ್ಯಕ್ಷರಾಗಲು ಅರ್ಹರು. ಲಿಂಗಾಯತ ನಾಯಕರು ಅಧ್ಯಕ್ಷ ಸ್ಥಾನ ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ.

    ಡಿಸಿಎಂ ಹುದ್ದೆ ಕೇಳಿದ್ದು ತಪ್ಪೇನಿಲ್ಲ
    ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವಾಗ ಹೈಕಮಾಂಡ್ ಏನು ಹೇಳಿತ್ತು? ಹೇಳಿ?
    ಡಿಸಿಎಂ ಹುದ್ದೆಗಳನ್ನು ಕೇಳುವುದರಲ್ಲಿ ತಪ್ಪೇನಿದೆ? ಈಗಲೂ ಈ ಬಗ್ಗೆ ನನ್ನ ನಿಲುವಿಗೆ ಬದ್ದನಿದ್ದೇನೆ ಎಂದರು.
    ಹೆಚ್ಚುವರಿ ಡಿಸಿಎಂ ವಿಚಾರದಲ್ಲಿ ಶಿವಗಂಗಾ ಬಸವರಾಜ, ಬಾಲಕೃಷ್ಣ ಹೇಳಿಕೆಗಳಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
    ಡಿ ಕೆ ಶಿವಕುಮಾರ್ ಅವರು ಸಿಎಂ ಹುದ್ದೆ ಕೇಳುವುದು ತಪ್ಪಲ್ಲ. ಯಾರು ಏನೇ ಹೇಳಿದರೂ ಕೂಡ ತೀರ್ಮಾನ ಮಾಡುವುದು ಹೈಕಮಾಂಡ್. ಹೆಚ್ಚುವರಿ ಡಿಸಿಎಂ ಬಗ್ಗೆ ನಾನು ಹಿಂದೆಯೂ ಒತ್ತಾಯ ಮಾಡಿದ್ದೆ. ಈಗಲೂ ಮಾಡ್ತೇನೆ, ಮುಂದೆಯೂ ಮಾಡ್ತೇನೆ. ಅದರಲ್ಲಿ ವಾಪಸ್ ಹೋಗುವುದೇನೂ ಇಲ್ಲ ಎಂದರು.
    ಸಿದ್ದರಾಮಯ್ಯ ಅವರನ್ನೂ ಸಿಎಂ ಮಾಡಿದ್ದು ಯಾರು? ಹೈಕಮಾಂಡ್ ತಾನೇ? ಈ ಬಗ್ಗೆಯೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದರು.

    ಹಾಲಿನ ದರ ಹೆಚ್ಚಿಸಿಲ್ಲ
    ಹಾಲಿನ ದರ ಬಗ್ಗೆ ಸಿಎಂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಮತ್ತೆ ನಾನು ಹೇಳುವುದು ಸರಿಯಲ್ಲ. ಎಲ್ಲಿ ಹೆಚ್ಚಾಗಿದೆ ಹಾಲಿನ ದರ? 50 ಎಂಎಲ್ ಹೆಚ್ಚಿಸಿದ್ದು ಅದಕ್ಕೆ ತಕ್ಕ ಹಾಗೆ ದರ ಏರಿಕೆ ಮಾಡಲಾಗಿದೆ ಅಷ್ಟೆ ಎಂದರು.
    ರೈತರಿಗೇ ನೇರವಾಗಿ ಹಣ ಹೋಗಬೇಕು ಎಂಬುದು ನಮ್ಮ ಉದ್ದೇಶ. ಎಲ್ಲಾ ಹಾಲು ಒಕ್ಕೂಟಗಳು ಈ ಹಣವನ್ನು ರೈತರಿಗೆ ಪಾಸ್ ಆನ್ ಮಾಡಬೇಕು ಎಂದರು.
    ಹೆಚ್ಚು ಹಾಲು ಉತ್ಪಾದನೆ ಆಗುತ್ತಿದೆ. ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದ ರೈತರೂ ಕೂಡ ಇದೀಗ ನಮ್ಮಲ್ಲಿಯೇ ಹಾಲು ಹಾಕುತ್ತಿದ್ದಾರೆ.

    ನೋಂದಣಿಗೆ ಅವಕಾಶ
    ಕೊಬ್ಬರಿ ಖರೀದಿ ವಿಷಯದಲ್ಲಿ ಈಗಾಗಲೇ ಸಾವಿರಾರು ಮಂದಿ ನೊಂದಾವಣಿ ಮಾಡಿದ್ದಾರೆ. ನೋಂದಣಿ ಮಾಡದ ರೈತರಿಗೂ ಇನ್ನುಮುಂದೆ ಅವಕಾಶ ಮಾಡಿಕೊಡುತ್ತೇವೆ. ಯಾರಾದರೂ ಹೆಚ್ಚಿನ ಹಣ ರೈತರಿಗೆ ಕೊಡದೇ ಇದ್ದರೆ ಅಂತವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts