More

    ನೈತಿಕ ಪೊಲೀಸ್ ಗಿರಿ ತೋರಿದರೆ ಕ್ರಮ

    ಬಣಕಲ್: ವರ್ತಕರು ಪ್ರವಾಸಿಗರ ಜತೆ ಸೌಜನ್ಯದಿಂದ ವರ್ತಿಸಬೇಕು. ಆಗ ಮಾತ್ರ ವ್ಯಾಪಾರ ವೃದ್ಧಿಯಾಗುತ್ತದೆ ಎಂದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಡಿ.ವಿ.ರೇಣುಕಾ ಹೇಳಿದರು.
    ತರುವೆ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಹೊಟೇಲ್, ಅಂಗಡಿ, ವರ್ತಕರೇ ಪ್ರವಾಸಿಗರಿಗೆ ಸೂಚಿಸಬೇಕು. ಪ್ರವಾಸಿಗರು ಉಡಾೆ ಉತ್ತರ ಕೊಟ್ಟು ಅಸಹಕಾರ ತೋರಿದಾಗ ಪೊಲೀಸರ ಗಮನಕ್ಕೆ ತರಬೇಕು. ನೀವೇ ನೈತಿಕ ಪೊಲೀಸ್ ಗಿರಿ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
    ಪಾದಚಾರಿ ರಸ್ತೆಯಲ್ಲಿ ಯಾವುದೇ ಅಂಗಡಿಗಳನ್ನು ಹಾಕಬಾರದು. ಕಸದ ಬುಟ್ಟಿಗಳನ್ನು ಮಾತ್ರ ಇಡಬೇಕು. ಕೊಟ್ಟಿಗೆಹಾರದಲ್ಲಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10.20ಕ್ಕೆ ಮಾತ್ರ ವಹಿವಾಟು ನಡೆಸಬೇಕು. ಚಾರ್ಮಾಡಿ ಘಾಟ್‌ನಲ್ಲಿ ಯಾರೂ ಅಂಗಡಿಗಳನ್ನು ಇಟ್ಟು ಸಂಚಾರಕ್ಕೆ ಅಡಚಣೆ ಮಾಡಬಾರದು. ಬೀಡಾಡಿ ದನಗಳ ಬಗ್ಗೆ ದನದ ಮಾಲೀಕರು ಎಚ್ಚರ ವಹಿಸಬೇಕು. ಆಟೋ ಚಾಲಕರು ವಾಹನದ ದಾಖಲೆಗಳನ್ನು ಸರಿಯಾಗಿ ಇಟ್ಟು ಕೊಂಡು ವಾಹನಚಲಾಯಿಸಬೇಕು. ಜುಲೈನಿಂದ ಕಾನೂನು ಪಾಲನೆಗೆ ಹೊಸ ನೀತಿಗಳು ಜಾರಿಯಾಗಲಿವೆ. ಇದಕ್ಕೆ ಜನರ ಸಹಕಾರ ಮುಖ್ಯ ಎಂದರು.
    ಕೊಟ್ಟಿಗೆಹಾರ ಪೇಟೆಯಲ್ಲಿ ಪ್ರವಾಸಿಗರು ವಾಹನಗಳನ್ನು ನಿಯಮ ಉಲ್ಲಂಸಿ ರಸ್ತೆಯ ಬಿಳಿ ಪಟ್ಟಿಯಿಂದ ಹೊರಗಡೆ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ವರ್ತಕ ಎ.ಬಿ.ಕೃಷ್ಣ್ಣಮೂರ್ತಿ ಪೊಲೀಸರ ಗಮನಕ್ಕೆ ತಂದರು. ಕೆಲವು ಪ್ರವಾಸಿಗರು ವಾಹನಗಳನ್ನು ಗಂಟೆ ಗಟ್ಟಲೇ ನಿಲ್ಲಿಸುತ್ತಿರುವದರಿಂದ ವ್ಯಾಪಾರಕ್ಕೆ ಅಡಚಣೆಯಾಗುತ್ತಿದೆ ಎಂದು ರಮೇಶ್ ಬಾಳೂರು, ದೇವೇಂದ್ರ ಹೇಳಿದರು.
    ನಿಯಮ ಉಲ್ಲಂಘನೆ ಮಾಡಿ ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಅಂತಹ ವಾಹನಗಳ ಚಕ್ರಗಳಿಗೆ ಟ್ರಾಫಿಕ್ ಲಾಕ್ ಮಾಡಿ ಎಂದು ಚಾಲಕ ಅಬ್ದುಲ್‌ರೆಹಮಾನ್ ಒತ್ತಾಯಿಸಿದರು. ಕಸವನ್ನು ವಾಹನದಲ್ಲಿ ಮುಚ್ಚಿ ಸಾಗಿಸಬೇಕು ಎಂದು ಆಟೋ ಚಾಲಕ ಗಣೇಶ್ ಗ್ರಾಪಂ ಗಮನಕ್ಕೆ ತಂದರು.
    ವರ್ತಕರ ಸಂಘದ ಗೌರವ ಕಾರ್ಯದರ್ಶಿ ವೇಣುಗೋಪಾಲ್ ಪೈ, ಗ್ರಾಪಂ ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಎ.ಎನ್.ರಘು, ಸುಶೀಲ, ಸ್ವರೂಪ, ಪೊಲೀಸ್ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಟಿ.ಕೆ.ಶಶಿ, ಅಪರಾಧ ವಿಭಾಗದ ಜಗದೀಶ್, ಸಿಬ್ಬಂದಿ ಸಂತೋಷ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts