More

    ರೇಷ್ಮೆ ಉದ್ಯಮಕ್ಕೆ ಕರೊನಾ ಕರಿನೆರಳು

    ಕೆ.ಕೆಂಚಪ್ಪ ಮೊಳಕಾಲ್ಮೂರು: ರೇಷ್ಮೆ ಸೀರೆ ನೇಯ್ಗೆ ಮತ್ತು ಮಾರಾಟಕ್ಕೆ ಕರೊನಾದಿಂದ ಗರ ಬಡಿದಿದ್ದು, 15 ದಿನದಲ್ಲಿ ಆರೇಳು ಕೋಟಿ ರೂ. ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

    ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿರುವ ಮೊಳಕಾಲ್ಮೂರು ರೇಷ್ಮೆ ಸೀರೆ ಉದ್ಯಮ ಕರೊನಾದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

    ಮಾ.23ರಿಂದ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ರಾಮನಗರದಿಂದ ಸರಬರಾಜಾಗುತ್ತಿದ್ದ ಕಚ್ಚಾ ರೇಷ್ಮೆ ನೂಲು ಸ್ಥಗಿತಗೊಂಡಿದ್ದು, ಸೀರೆ ನೇಕಾರಿಕೆ ಮತ್ತು ಮಾರಾಟಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

    ಮೊಳಕಾಲ್ಮೂರು, ಕೊಂಡ್ಲಹಳ್ಳಿ, ಕೋಲಂನಹಳ್ಳಿ, ಹೊಸಹಳ್ಳಿ, ಕಲ್ಲಹಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಒಟ್ಟು 260 ಕುಣಿ ಮಗ್ಗಗಳಿದ್ದು, 450ಕ್ಕೂ ಹೆಚ್ಚು ನೇಕಾರರಿದ್ದಾರೆ. ವಾರಕ್ಕೆ 500 ಸೀರೆ ತಯಾರಿಸಿ ತಲಾ 2500ರಿಂದ 5000 ಸಾವಿರ ರೂ. ತನಕ ಕೂಲಿ ಗಿಟ್ಟಿಸಿಕೊಳ್ಳುತ್ತಿದ್ದ ಕೈಗಳೀಗ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.

    ಬೆಂಗಳೂರು, ಮೈಸೂರು ಸೇರಿ ಹೊರ ರಾಜ್ಯಗಳ ಅಂಗಡಿಗಳಿಗೆ ಇಲ್ಲಿಂದ ಸೀರೆಗಳು ಪೂರೈಕೆಯಾಗುತ್ತಿದ್ದವು. ಮೊಳಕಾಲ್ಮೂರಿನ ಅಂಗಡಿಗಳಲ್ಲಿ ವಾರಕ್ಕೆ 30 ಲಕ್ಷದ ವರೆಗೆ ವ್ಯಾಪಾರ ನಡೆಯುತ್ತಿದ್ದು, ಈಗ ಕುತ್ತು ತಂದಿದೆ.

    ಕಳೆದ 3 ವಾರದಿಂದ ಸೀರೆ ನೇಯ್ಗೆ ಇಲ್ಲದೆ ನೇಕಾರರ ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಜಿಲ್ಲಾಡಳಿತ ಮತ್ತು ಸರ್ಕಾರ ನೇಕಾರರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮಹೇಶ್ ಮರ‌್ಲಹಳ್ಳಿ, ಪ್ರಕಾಶ ಕೊಂಡ್ಲಹಳ್ಳಿ, ಸಿದ್ದೇಶ ಕಲ್ಲಹಳ್ಳಿ, ಶ್ರೀಕಾಂತ, ವಿನಾಯಕ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts