More

    ರಾಜ್ಯದಲ್ಲಿ ಸಿಎಂ – ಡಿಸಿಎಂ ಹುದ್ದೆ ವಿವಾದದ ಸಚಿವ ಪ್ರಿಯಾಂಕ್‌ ಖರ್ಗೆ ಶಾಕಿಂಗ್ ಹೇಳಿಕೆ..?

    ಕಲಬುರಗಿ: ಸಿಎಂ, ಡಿಸಿಎಂ ಹುದ್ದೆ ಕೇಳೋದು ಎಲ್ಲರಿಗೂ ಹಕ್ಕಿದೆ. ಆದರೆ ಎಲ್ಲಿ ಕೇಳಬೇಕು ಅಲ್ಲಿ ಕೇಳಬೇಕು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.
    ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದ್ರೆ ಎಲ್ಲಿ ಕೇಳಬೇಕು, ಅಲ್ಲೇ ಕೇಳಬೇಕು. ಮಾಧ್ಯಮದಲ್ಲಿ ಕೇಳಿದ್ರೆ ಮಾಧ್ಯಮದವರು ಮಾಡ್ತಾರಾ ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.

    ಇದನ್ನೂ ಓದಿ: ಮಹಿಳಾ ಕ್ರಿಕೆಟ್​: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ..!

    ಬೀದಿಯಲ್ಲಿ ಬಂದು ಜಗಳ ಆಡೋದು ಸರಿಯಲ್ಲ. ನಮ್ಮ ಅಭಿಪ್ರಾಯ ಬೀದಿಯಲ್ಲಿ ಚರ್ಚೆ ಮಾಡೋದು ಸರಿಯಲ್ಲ. ಈ ರೀತಿ ನಾವು ಮಾತಾಡಿಕೊಂಡು ಹೋದರೆ ನಮ್ಮ ಕಾರ್ಯಕರ್ತರಿಗೆ ಏನು ಸಂದೇಶ ಕೊಟ್ಟ ಹಾಗೆ ಆಗುತ್ತೆ. ಸಮುದಾಯದ ಹಿರಿಯರು, ನಾಯಕರಿರಬಹುದು ಎಲ್ಲರೂ ಹೈಕಮಾಂಡ್‌ ಬಳಿ ಕೇಳಬೇಕು ಎಂದು ತಿಳಿಸಿದರು.

    ಕಳೆದ ಲೋಕಸಭೆ ಚುನಾವಣೆಯಲ್ಲಿ ಯಾವ್ಯಾವ ಸಮುದಾಯದವರು ಎಷ್ಟೆಷ್ಟು ವೋಟ್ ಹಾಕಿದ್ದಾರೆ ಅಂತಾ ಗೊತ್ತು ಕೆಲವು ಸಮುದಾಯದವರಿಗೆ ಮಠಗಳು ಸ್ವಾಮೀಜಿಗಳು ಇದ್ದಾರೆ. ಇನ್ನೂ ಕೆಲವು ಸಮುದಾಯಗಳು ಸ್ವಾಮೀಜಿಗಳು ಇಲ್ಲದವರು ನಮ್ಮ ಪರವಾಗಿ ಕೆಲಸ ಮಾಡ್ತಿದ್ದಾರೆ ಆದ್ರೆ ಅವರು ಕೇಳ್ತಿಲ್ಲ. ಜೋಶಿ ಅವರು ಇದರ ಬಗ್ಗೆ ಮಾತನಾಡುವುದು ಬಿಟ್ಟು ಅವರ ಮನೆ ಬೆಂಕಿ ಆರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

    ಅವರ ಅವರ ಸಮುದಾಯದವರು ಯಾರಾದರು ಕೇಳಿ ಅಂತಾ ಇರಬಹುದು ಎಲ್ಲರನ್ನೂ ಡಿಸಿಎಂ ಮಾಡಲಿ ಅಂತಾ ನಾನು ಆವತ್ತೆ ಹೇಳಿದ್ದೇನೆ. ಗ್ಯಾರೆಂಟಿ ಯೋಜನೆ ಬಗ್ಗೆ ರಂಭಾಪುರಿ ಜಗದ್ಗುರುಗಳು ಹೇಳಿಕೆ ವಿಚಾರ ಅದು ಅವರ ಅಭಿಪ್ರಾಯ ಆಗಿರಬಹುದು. ಲಾಭ ಆಗದೆ ಇದ್ರೆ ನಾಲ್ಕೂವರೆ ಕೋಟಿ ಜನರು ಯಾಕೆ ನೋಂದಣಿ ಮಾಡಿದ್ದಾರೆ ಎಂದರು.

    ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ: ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತು ಮಾತನಾಡಿ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಪ್ರಶ್ನೆಯೆ ಅಪ್ರಸ್ತುತ. ನಾನು ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಇಲ್ಲವೆ ಇಲ್ಲ. ಇವಾಗ ಅಧ್ಯಕ್ಷ ಸ್ಥಾನದ ವಿಚಾರದ ಬಗ್ಗೆ ಏನು ಚರ್ಚೆ ಆಗ್ತಿದೆ ಅಂತಾ ಗೊತ್ತಿದೆ. ಹಾಗಾಗಿ ಈ ವಿಚಾರದಲ್ಲಿ ನನ್ನ ಹೆಸರು ಬರೋದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟಪಡಿಸಿದರು.

    T20 World Cup: ಚಾಂಪಿಯನ್‌ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts