More

    ಬೇವಿನ ಮರದಲ್ಲಿ ಹಾಲು, ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದ ಸ್ಥಳೀಯರು!

    ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ಬೈಪಾಸ್ ರಸ್ತೆಯ ಬೇವಿನ ಮರವೊಂದರಲ್ಲಿ ಹಾಲಿನ ಮಾದರಿಯಲ್ಲಿ ದ್ರವ ಹೊರ ಬಂದಿದ್ದು ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ವಿವಿಧ ಭಾಗಗಳಿಂದ ಜನರು ಬಂದು ವೀಕ್ಷಿಸಲು ಮುಗಿ ಬಿದ್ದರು.
    ಇಲ್ಲಿನ ವಿಘ್ನೇಶ್ವರ ಸರ್ಕಲ್ ಬಳಿ ಇರುವ ಬೇವಿನ ಮರದ ಕೊಂಬೆಯಲ್ಲಿ ಹಾಲಿನ ಮಾದರಿ ದ್ರವ ಉಕ್ಕಿ ಹರಿದು, ರಸ್ತೆಯ ಬದಿಗೆ ಬೀಳುತ್ತಿರುವುದನ್ನು ಕೆಲವರು ಯಾರೋ ನೋಡಿದ್ದಾರೆ. ಇದೇ ವೇಳೆ ದಾರಿಹೋಕರು ಸ್ಥಳದಲ್ಲಿ ಜಮಾಯಿಸಿದ್ದು ನಾನಾ ರೀತಿಯಲ್ಲಿ ಚರ್ಚೆಗಳಾಗಿವೆ. ಕೆಲವೇ ಕ್ಷಣದಲ್ಲಿ ಸುದ್ದಿ ವ್ಯಾಪಕವಾಗಿ ಹರಡಿದೆ. ಇದರಿಂದ ದೊಡ್ಡ ಪವಾಡ ನಡೆಯುತ್ತಿದೆ ಎಂಬ ಅಶ್ಚರ್ಯಕರ ಭಾವನೆಯಲ್ಲಿ ಸುತ್ತಲಿನ ಜನರು ಬಂದಿದ್ದಾರೆ. ಇವರುಗಳ ಪೈಕಿ ಅನೇಕರು, ಇದು ದೈವ ಸ್ವರೂಪಿ ಮರ ಎಂದು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.
    ಬೇವಿನ ಮರದಲ್ಲಿ ಬಿಳಿ ದ್ರವ ಸುರಿಯುವಂತಹುದು, ಇದು ಹಾಲಿನ ಮಾದರಿಯಲ್ಲಿ ಕಾಣುವಂತಹುದು ಅಪರೂಪ. ಇಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗಿವೆ. ಪ್ರಾರಂಭದಲ್ಲಿ ಅನೇಕರು ಕತೆ ಕಟ್ಟಿ ಏನೇನೋ ಹೇಳುತ್ತಿದ್ದರು. ಇದಕ್ಕೆ ಚಿಂತಕರು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪ್ರಕೃತಿ ಸಹಜ ಪ್ರಕ್ರಿಯೆ ಎಂಬುದನ್ನು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts