More

    ಮಠ ಶಾಂತಿ, ನೆಮ್ಮದಿಯ ತಾಣ

    ಶಿರೋಳ: ಮಠಗಳು ಜನರಿಗೆ ಶಾಂತಿ, ನೆಮ್ಮದಿ ನೀಡುವ ತಾಣಗಳಾಗಿವೆ. ಮಠಕ್ಕೆ ಬಂದು ಭಕ್ತರು ತಮ್ಮ ತನು, ಮನ, ಧನದಿಂದ ಜಾತ್ರೆಗಳಲ್ಲಿ ಪಾಲ್ಗೊಂಡು ಸೇವೆ ಮಾಡಬೇಕು ಎಂದು ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಹೇಳಿದರು.

    ಇತ್ತೀಚೆಗೆ ಗ್ರಾಮದ ಯಚ್ಚರಸ್ವಾಮಿಗಳ ಗವಿಮಠದ ಜಾತ್ರಾ ಮಹೋತ್ಸವದ ಐದನೇ ದಿನದ ಗವಿ ಲೋಭಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

    ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಐಎಸ್​ಐ ನಿವೃತ್ತ ಅಧಿಕಾರಿ ಕೆ.ಎಸ್. ಪ್ರಭಾಕರ, ಕೈಗಾರಿಕಾ ರತ್ನ ಪುರಸ್ಕೃತ ಡಾ.ಬಿ.ಎಂ. ಉಮೇಶ ಕುಮಾರ, ನ್ಯಾಯಾಧೀಶ ಎ.ಎಂ. ಬಡಿಗೇರ, ಹೃದಯರೋಗ ತಜ್ಞ ಲಕ್ಷ್ಮಣ ಪೂಜಾರ, ರಾಮಣ್ಣ ಬಡಿಗೇರ, ಪ್ರಕಾಶ ಕರಿ ಮಾತನಾಡಿದರು. ಸರ್ಕಾರಿ ಶಾಲೆಗೆ ಎರಡು ಎಕರೆ ಜಾಗ ನೀಡಿದ ಕೊಪ್ಪಳ ಜಿಲ್ಲೆಯ ಕುಣಕೇರಿಯ ಹುಚ್ಚಮ್ಮ ಚೌಧರಿ ಕಾರ್ಯಕ್ರಮ ಉದ್ಘಾಟಿಸಿದರು.

    ಜಾತ್ರಾ ಸಮಿತಿ ಅಧ್ಯಕ್ಷ ಸಂಜಯ ಕಲಾಲ, ಕಾರ್ಯಾಧ್ಯಕ್ಷ ವೀರಣ್ಣ ಕತ್ತಿಕೈ, ಉಪಾಧ್ಯಕ್ಷ ದೇವರಾಜ ಜಂಗವಾಡ, ಕಾರ್ಯದರ್ಶಿ ಯೋಗೇಶ ಚಾಗಣ್ಣನವರ, ಸಹ ಕಾರ್ಯದರ್ಶಿ ಜ್ಞಾನೇಶ್ವರ ಪಾರಗೆ ಇತರರಿದ್ದರು. ಸತತ ಐದು ದಿನ ಎಚ್.ವಿ. ಬ್ಯಾಡಗಿ, ವಿನಾಯಕ ಶಾಲದಾರ, ಪ್ರಭಾಕರ ಉಳ್ಳಾಗಡ್ಡಿ, ಮಂಜುನಾಥ ಕೊಣ್ಣೂರ, ಶರಣಯ್ಯ ಹಿರೇಮಠ, ಸುನೀಲ ಕಳಸದ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts