More

    ಟಿ20 ವಿಶ್ವ ಕಿರೀಟಕ್ಕೆ ಭಾರತ-ದ.ಆಫ್ರಿಕಾ ಸಮರ: 17 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರುವ ತವಕ

    ಬ್ರಿಜ್‌ಟೌನ್: ಕಳೆದೊಂದು ದಶಕದ ಐಸಿಸಿ ಪ್ರಶಸ್ತಿ ಬರ ನೀಗಿಸುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವ ಕಿರೀಟಕ್ಕೆ ಮುತ್ತಿಡಲು ಇನ್ನೊಂದು ಗೆಲುವಿನ ದೂರದಲ್ಲಿದೆ. ಹಾಲಿ ಏಕದಿನ-ಟೆಸ್ಟ್ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್‌ಗೆ ಮಣ್ಣುಮುಕ್ಕಿಸಿದ ವಿಶ್ವಾಸದಲ್ಲಿರುವ ರೋಹಿತ್ ಶರ್ಮ ಪಡೆ, ಕೆನ್ಸಿಂಗ್‌ಟನ್ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ 9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಅಜೇಯ ತಂಡಗಳ ನಡುವಿನ ಈ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ. 1983ರಲ್ಲಿ ಕೆರಿಬಿಯನ್ಸ್ ಎದುರು ಚೊಚ್ಚಲ ಐಸಿಸಿ ವಿಶ್ವಕಪ್ ಜಯಿಸಿದ್ದ ಭಾರತ, ಇದೀಗ ಕೆರಿಬಿಯನ್ ನಾಡಲ್ಲಿ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಚೊಚ್ಚಲ ಐಸಿಸಿ ವಿಶ್ವಕಪ್ ಗೆಲುವಿನ ಕನಸಿನಲ್ಲಿದೆ.

    ಹತ್ತು ವರ್ಷಗಳ ಬಳಿಕ ಟಿ20 ವಿಶ್ವಕಪ್ ಫೈನಲ್ ಆಡಲಿರುವ ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಚುಟುಕು ಕ್ರಿಕೆಟ್ ವಿಶ್ವ ಚಾಂಪಿಯನ್ ಎನಿಸುವ ತುಡಿತದಲ್ಲಿದೆ. ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಅದ್ಭುತ ಪ್ರದರ್ಶನವನ್ನು ಹಾಲಿ ಟೂರ್ನಿಯಲ್ಲೂ ಪುನರಾವರ್ತಿಸಿರುವ ರೋಹಿತ್ ಶರ್ಮ ಪಡೆ, ಆಲ್ರೌಂಡ್ ನಿರ್ವಹಣೆಯೊಂದಿಗೆ ಟೂರ್ನಿಯಲ್ಲಿ ಅಜೇಯವಾಗಿ ಉಳಿಯುವ ಮೂಲಕ ಪ್ರಶಸ್ತಿ ೇವರಿಟ್ ಆಗಿ ಕಣಕ್ಕಿಳಿಯಲಿದೆ.
    ಐಸಿಸಿ ಟೂರ್ನಿಗಳಲ್ಲಿ ಅತಿ ಹೆಚ್ಚು ಬಾರಿ ಫೈನಲ್‌ಗೆ ತಂಡವನ್ನು ಮುನ್ನಡೆಸಿದ ನಾಯಕರ ಸಾಲಿನಲ್ಲಿ ರಿಕಿ ಪಾಂಟಿಂಗ್, ಎಂಎಸ್ ಧೋನಿ ನಂತರದ ಸ್ಥಾನದಲ್ಲಿರುವ ರೋಹಿತ್ ಶರ್ಮಗೆ ಇದು ಹ್ಯಾಟ್ರಿಕ್ ೈನಲ್ ಆಗಿದೆ.

    ಟೂರ್ನಿಯ ಆರಂಭದಿಂದಲೂ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪ್ರಚಂಡ ನಿರ್ವಹಣೆ ತೋರಿರುವ ಟೀಮ್ ಇಂಡಿಯಾ ‘ದಶಕದ ಚೋಕರ್ಸ್‌’ ಎಂಬ ಟ್ಯಾಗ್ ಅನ್ನು ಕಳಚುವ ವಿಶ್ವಾಸದಲ್ಲಿದೆ. ಇನ್ನು ‘ಸಾರ್ವಕಾಲಿಕ ಚೋಕರ್ಸ್‌’ ಎನಿಸಿರುವ ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿ ಐಸಿಸಿ ವಿಶ್ವಕಪ್ ಫೈನಲ್ ಆಡಲಿದ್ದು, ಒತ್ತಡದಲ್ಲಿ ಕಣಕ್ಕಿಳಿಯಲಿದೆ. ಈ ‘ಚೋಕರ್ಸ್‌’ ಹಣೆಪಟ್ಟಿ ಕಳಚಲು ಉಭಯ ತಂಡಗಳಿಗೂ ಇದು ಉತ್ತಮ ಅವಕಾಶವೆನಿಸಿದೆ. ದಕ್ಷಿಣ ಆಫ್ರಿಕಾದ ಫಾರ್ಮ್ ವಿರುದ್ಧ ಭಾರತದ ಅನುಭವ ಮತ್ತು ಬೌಲಿಂಗ್ ವಿಭಾಗದ ಪರೀಕ್ಷೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts