More

    ಮಲಯಾಳಂ ಚಿತ್ರರಂಗಕ್ಕೆ ಸಂಕಷ್ಟ ತಂದಿಟ್ಟ ‘ಮಂಜುಮ್ಮೆಲ್ ಬಾಯ್ಸ್’!

    ಕೇರಳ: ಇದೇ ವರ್ಷದ ಫೆಬ್ರವರಿ 22ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಮಲಯಾಳಂ ಬ್ಲಾಕ್​ಬಸ್ಟರ್​ ಸಿನಿಮಾ ‘ಮಂಜುಮ್ಮೆಲ್ ಬಾಯ್ಸ್’, ಅಪಾರ ಜನಮನ್ನಣೆ ಗಳಿಸುವುದರ ಜತೆ ಬಾಕ್ಸ್ ಆಫೀಸ್​ ಧೂಳಿಪಟ ಮಾಡಿತು. ಚಿದಂಬರಂ ಎಸ್. ಪೊದುವಾಳ್ ನಿರ್ದೇಶನದ ಈ ಚಿತ್ರವು ಇದೀಗ ಮಾಲಿವುಡ್​ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಸದ್ದು ಮಾಡಿದ ಮಂಜುಮ್ಮೆಲ್ ಬಾಯ್ಸ್​, ಸದ್ಯ ದೊಡ್ಡ ಸಂಕಷ್ಟದಲ್ಲಿ ಸಿಲುಕಿರುವ ವಿಷಯ ಸಿನಿಪ್ರಿಯರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

    ಇದನ್ನೂ ಓದಿ: ಮಸಾಜ್‌ ಮಾಡುತ್ತಾ ಸೆಕ್ಸ್‌ ಗೆ ಬೇಡಿಕೆ ಇಟ್ಟ ರೆಸಾರ್ಟ್​ ಉದ್ಯೋಗಿ ವಿರುದ್ಧ ದೂರು ದಾಖಲಿಸಿದ ವಿದೇಶಿ ಯುವತಿ!

    ಇತ್ತೀಚಿನ ಯಶಸ್ವಿ ಮಲಯಾಳಂ ಚಲನಚಿತ್ರಗಳಲ್ಲಿ ‘ಮಂಜುಮ್ಮೆಲ್ ಬಾಯ್ಸ್’​ ಕೂಡ ಒಂದಾಗಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುವ ಮೂಲಕ ಜಾಗತಿಕ ಮಟ್ಟದಲ್ಲಿ 200 ಕೋಟಿ ರೂ. ಆದಾಯ ಗಳಿಸಿತು. ಈ ಹಿಂದಿನ ದಾಖಲೆಗಳನ್ನು ಪುಡಿಪುಡಿ ಮಾಡುವ ಮೂಲಕ ಮಾಲಿವುಡ್​ನಲ್ಲಿ ತನ್ನದೇ ಹೊಸ ದಾಖಲೆ ಬರೆದ ಈ ಚಿತ್ರಕ್ಕೆ ‘ಇಂಡಸ್ಟ್ರಿ ಹಿಟ್’ ಎಂಬ ಪಟ್ಟವು ಲಭಿಸಿದೆ.

    ದಾಖಲೆ ಬರೆಯುವ ಮೂಲಕ ಸಿನಿಪ್ರೇಕ್ಷಕರಲ್ಲಿ ಭರವಸೆ, ಖುಷಿ ತಂದಿದ್ದ ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಾಪಕರು, ಇದೀಗ ಕೆಲವು ಕಾರಣಾಂತರಗಳಿಂದ ಮಲಯಾಳಂ ಚಿತ್ರರಂಗವನ್ನು ದೊಡ್ಡ ಸಂಕಷ್ಟಕ್ಕೆ ತಂದಿಟ್ಟಿದ್ದಾರೆ. ತಯಾರಕರು ಚಿತ್ರದ ಲಾಭ ಹಂಚಿಕೆಯ ವಿವಾದಕ್ಕೆ ಸಿಲುಕಿದ್ದಾರೆ. ಈ ಸಿನಿಮಾ ಸಣ್ಣ ಬಜೆಟ್‌ನ ಚಲನಚಿತ್ರವಾಗಿ ಬಿಡುಗಡೆಯಾಗಿದ್ದೇ ಆದರೂ ಆಶ್ಚರ್ಯಕರ ರೀತಿಯಲ್ಲಿ ಮಾಲಿವುಡ್‌ನ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು.

    ಇದನ್ನೂ ಓದಿ: ಸೀರೆಯನ್ನು ಹೀಗೂ ಕಟ್ಟಬಹುದೇ.. ರಾಶಿ ಖನ್ನಾ? ನಟಿಗೆ ನೆಟ್ಟಿಗರ ಪ್ರಶ್ನೆ..

    ಲಾಭ ಹಂಚಿಕೆಯ ವಿಚಾರವೇ ಈ ಹಣಕಾಸಿನ ವಿವಾದಗಳ ಹಿಂದಿರುವ ಪ್ರಮುಖ ಕಾರಣ ಎಂಬುದು ವರದಿ. ಸದ್ಯ ಈ ವಿಚಾರ ಮಾಲಿವುಡ್‌ನಲ್ಲಿ ಕಪ್ಪುಹಣದ ಅಭ್ಯಾಸಗಳು ಚಾಲ್ತಿಯಲ್ಲಿವೆ ಎಂಬುದರ ಬಗ್ಗೆ ದೂರು ನೀಡಲು ಇತರ ಚಿತ್ರ ತಯಾರಕರನ್ನು ಪ್ರಚೋದಿಸಿದೆ. ಈ ಹಿಂದೆ ಸಂಗೀತ ದಿಗ್ಗಜ, ಹಿರಿಯ ಸಂಗೀತ ನಿರ್ದೇಶಕ ಇಳಯರಾಜ, ತಮ್ಮ ಅನುಮತಿಯಿಲ್ಲದೆ ಚಿತ್ರತಂಡ ‘ಗುಣ’ ಚಿತ್ರದ ಹಾಡನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದರು. ಈ ಮೂಲಕ ಭಾರೀ ವಿವಾದಕ್ಕೆ ಸಿಲುಕಿದ್ದ ‘ಮಂಜುಮ್ಮೆಲ್ ಬಾಯ್ಸ್’​ ಇದೀಗ ಮತ್ತೊಮ್ಮೆ ವಿವಾದದ ಅಲೆಯಲ್ಲಿ ಸಿಲುಕಿದೆ,(ಏಜೆನ್ಸೀಸ್).

    ಅಲ್ಲಿದ್ದರೆ ನೀವು ಶೂನ್ಯ! ಟೀಂ ಇಂಡಿಯಾ ಕೋಚ್​ ಆಗಿ ಬನ್ನಿ… ಹರ್ಭಜನ್ ಕೊಟ್ಟ ಮಹತ್ವದ ಸಲಹೆ ಯಾರಿಗೆ?

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts