More

    ಮಣಿಪುರ ಸಮಸ್ಯೆಗೆ ಮೋದಿ ಸರ್ಕಾರ ಶೀಘ್ರದಲ್ಲೇ ಪರಿಹಾರ ನೀಡಲಿದೆ; ಸಿಎಂ ಬಿರೇನ್ ಸಿಂಗ್

    ಇಂಫಾಲ: ರಾಜ್ಯದಲ್ಲಿನ ಜನಾಂಗೀಯ ಅಶಾಂತಿಯನ್ನು ಪರಿಹರಿಸುವ ಯೋಜನೆಯನ್ನು ಮೋದಿ 3.0 ಸರ್ಕಾರ ಶೀಘ್ರದಲ್ಲೇ ರಚಿಸಲಿದೆ. ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿಗೆ ಎರಡರಿಂದ ಮೂರು ತಿಂಗಳೊಳಗೆ ಪರಿಹಾರ ದೊರೆಯಬಹುದು ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದರು.

    ಇದನ್ನು ಓದಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ಸಿಂಗ್ ನಿಜ್ಜರ್​ಗೆ ಕೆನಡಾ ಸಂಸತ್ತಿನಲ್ಲಿ ಶ್ರದ್ಧಾಂಜಲಿ; ಭಾರತದ ಕೌಂಟರ್​ ಹೀಗಿದೆ

    ಮೋದಿ ಸರ್ಕಾರವು ರಾಜ್ಯದಲ್ಲಿ ಶಾಂತಿಯನ್ನು ಮರಳಿ ತರಲು ಮಣಿಪುರ ಹಿಂಸಾಚಾರವನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ ಎಂದು ಹೇಳಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ಏಜೆನ್ಸಿಗಳೊಂದಿಗೆ ಉನ್ನತ ಮಟ್ಟದ ಭದ್ರತಾ ಸಭೆಯನ್ನು ಕೈಗೊಂಡು ಎಲ್ಲ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಮಣಿಪುರದ ಸಮಸ್ಯೆಗೆ ಎರಡರಿಂದ ಮೂರು ತಿಂಗಳೊಳಗೆ ಪರಿಹಾರ ಸಿಗಲಿದೆ ಎಂದು ಬಿರೇನ್​ ಸಿಂಗ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಹಿಂಸಾಚಾರ ಎಲ್ಲೆಡೆ ಇದೆ. ಮಣಿಪುರದಲ್ಲಿ ಸದ್ಯ ಹಿಂಸಾಚಾರದ ಘಟನೆಗಳು ಕಡಿಮೆಯಾಗಿದೆ. ಆದರೆ ಗುಂಡಿನ ದಾಳಿಗಳು ಕೆಲವೊಂದು ಪ್ರದೇಶದಲ್ಲಿ ನಡೆದಿದೆ. ಅದನ್ನು ಹೊರತು ಪಡಿಸಿ ರಾಜ್ಯದಾದ್ಯಂತ ಇತರ ಸ್ಥಳಗಳಲ್ಲಿ ಶಾಲೆಗಳು, ಸರ್ಕಾರಿ ಸಂಸ್ಥೆಗಳು, ಮಾರುಕಟ್ಟೆಗಳು ಮತ್ತು ವ್ಯವಹಾರಗಳು ತೆರೆಯುತ್ತಿವೆ. ಇದು ಸಹಜ ಸ್ಥಿತಿಗೆ ಮರಳುವ ಸೂಚನೆಯಾಗಿದೆ ಎಂದು ಹೇಳಿದರು.

    ಮಣಿಪುರದಲ್ಲಿ ನಿಜವಾದ ಬಿಕ್ಕಟ್ಟು 6 ರಿಂದ 7 ತಿಂಗು ನಡೆಯಿತು. ಆದರೆ ಮಣಿಪುರದಲ್ಲಿ 14 ತಿಂಗಳುಗಳಿಂದ ಅಶಾಂತಿ ಇದೆ. ಭದ್ರತಾ ವ್ಯವಸ್ಥೆಗಳ ಕೊರತೆಯಿಂದಾಗಿ ಜಿರಿಬಾಮ್ ಹಿಂಸಾಚಾರ ಸಂಭವಿಸಿದೆ ಎಂದು ಹೇಳಿದ ಅವರು, ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ತೆರಳಿದ್ದ ಎಲ್ಲ ಭದ್ರತಾ ಸಿಬ್ಬಂದಿಯನ್ನು ದುರ್ಬಲ ಪ್ರದೇಶಗಳಿಗೆ ಮರು ನಿಯೋಜಿಸಿರುವುದರಿಂದ ಗಡಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದು ತಿಳಿಸಿದರು. ಈಶಾನ್ಯ ಭಾರತದಲ್ಲಿ ಅಶಾಂತಿಯು ಪ್ರದೇಶದ ಹೊರಗಿನ ಪ್ರದೇಶಗಳಿಂದ ಒಳಹರಿವು ಮತ್ತು ಮಾದಕವಸ್ತುಗಳ ಬೆದರಿಕೆಯಿಂದಾಗಿ ಎಂಬ ಮಾಹಿತಿ ಇದೆ. ಆ ಮಾರ್ಗವನ್ನು ಪತ್ತೆಹಚ್ಚಿದ ಬಳಿಕ ಅದನ್ನು ಸರಿಪಡಿಸುವುದು ಸುಲಭ ಎಂದು ಹೇಳಿದರು. (ಏಜೆನ್ಸೀಸ್​​)

    ನನಗೆ ಜೀವನ ಕೊಟ್ಟಿದ್ದೆ ಅವರು ಎಂದು ದೇವ್​​ ಗಿಲ್​ ಹೇಳಿದ್ದು ಯಾರಿಗೆ?

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts