More

    ಸಮರ್ಪಣಾ ಭಾವದ ತ್ಯಾಗಕ್ಕೆ ಭಗವಂತನ ಅನುಗ್ರಹ – ಬೆಳ್ಳಿಹಬ್ಬ ಮಹೋತ್ಸವದಲ್ಲಿ ಮಾಣಿಲ ಶ್ರೀ ಆಶೀರ್ವಚನ

    ವಿಟ್ಲ: ಧಾರ್ಮಿಕ ಕ್ಷೇತ್ರದ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳುವ ಜತೆಗೆ ಎಲ್ಲರನ್ನೂ ಭಾಗವಹಿಸುವಂತೆ ಮಾಡುವುದು ನಿಜವಾದ ಪುಣ್ಯ ಕಾರ್ಯವಾಗಿದೆ. ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗ ಭವಬಂಧನದಿಂದ ಮುಕ್ತಿ ಕಾಣಬಹುದು. ಸಮರ್ಪಣಾ ಭಾವದಿಂದ ಮಾಡುವ ತ್ಯಾಗಕ್ಕೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.


    ಭಾನುವಾರ ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಬೆಳ್ಳಿಹಬ್ಬ ಮಹೋತ್ಸವದ ಸಮಾರೋಪದ ಅಂಗವಾಗಿ ೪೮ ದಿನ ನಡೆಯುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.


    ಮುಂಬೈ ಟಿಟ್ವಾಲ ಭ್ರಾಮರಿ ಆಶ್ರಮದ ಸಾಽ ಸತ್ಯಾಮೃತ ನಂದಿನಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕ್ಕಳ, ಶ್ರೀಧಾಮ ಮಾಣಿಲ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಬೆಳ್ಳಿಹಬ್ಬ ಮಹೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ, ಪುತ್ತೂರು ಪ್ರಶಾಂತಿ ಸದ್ಭಾವ ಟ್ರಸ್ಟಿನ ಗೋವಿಂದ ಭಟ್, ಉದ್ಯಮಿಗಳಾದ ಗಜಾನನ ಸೀತಾರಾಮ ಗುಣಗ ಕುಮಟ, ಭಾಸ್ಕರ ಶೆಟ್ಟಿ ಪುಣೆ, ರಮೇಶ್ ಅಡವು ಪುಣೆ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಅಧ್ಯಕ್ಷೆ ವನಿತಾ ವಿ.ಶೆಟ್ಟಿ, ಬೆಳ್ಳಿಹಬ್ಬ ಮಹೋತ್ಸವ ಸಮಿತಿ ಕೋಶಾಽಕಾರಿ ಜಯರಾಜ್ ಪ್ರಕಾಶ್, ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ಟ್ರಸ್ಟಿಗಳಾದ ಮಚ್ಚೇಂದ್ರನಾಥ ಸಾಲ್ಯಾನ್, ಚಂದ್ರಶೇಖರ ಮಂಗಳೂರು, ವ್ಯವಸ್ಥಾಪಕ ವಿಠಲ ಶೆಟ್ಟಿ ಸುಣ್ಣಂಬಳ ಉಪಸ್ಥಿತರಿದ್ದರು. ಕ್ಷೇತ್ರದ ಟ್ರಸ್ಟಿ ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.


    ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ
    ಬೆಳಗ್ಗೆ ೧೨ ತೆಂಗಿನಕಾಯಿ ಗಣಪತಿ ಯಾಗ, ಪಂಚಾಮೃತಾಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀ ಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಚಂಡಿಕಾಯಾಗ, ಸಾಮೂಹಿಕ ಕುಂಕುಮಾರ್ಚನೆ, ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಮಾಣಿಲ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ, ಸಂಜೆ ಭಜನಾ ಸಂಕೀರ್ತನೆ, ಶ್ರೀ ದುರ್ಗಾ ಪೂಜೆ, ಲಕ್ಷ್ಮೀ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts