More

    ಸಾವಯವ ಕೃಷಿ ಆರೋಗ್ಯಕರ ಬದುಕಿಗೆ ವರದಾನ, ಕಲ್ಕೂರ ಪ್ರತಿಷ್ಠಾನದ ಹಲಸು, ಮಾವು ಮೇಳದಲ್ಲಿ ಎಡನೀರು ಸ್ವಾಮೀಜಿ ಆಶೀರ್ವಚನ

    ಮಂಗಳೂರು: ಹಿರಿಯರು ಅನುಸರಿಸಿದ ಆಹಾರ ಪದ್ದತಿಯಿಂದ ವಿಮುಖರಾದ ಕಾರಣ ನಾವಿಂದು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ವಾವಲಂಬನೆ ಹಾಗೂ ಆರೋಗ್ಯಕರ ಬದುಕಿಗೆ ಸಾವಯವ ಕೃಷಿ ನಮಗೆ ವರದಾನವಾಗಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ನುಡಿದರು.


    ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದಲ್ಲಿ ಕದ್ರಿಕಂಬಳದ ಮುಂಜು ಪ್ರಾಸಾದ ಆವರಣದಲ್ಲಿ ಶನಿವಾರ ನಡೆದ ಹಲಸು ಮಾವು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯ ಬೇಕು ಎಂದರು.


    ಹಿರಿಯ ಸಾಮಾಜಿಕ ಕಾರ್ಯ ಕರ್ತೆ ಆರೂರು ಲಕ್ಷ್ಮೀ ರಾವ್ ಮೇಳ ಉದ್ಘಾಟಿಸಿದರು. ಹೋಟೆಲ್ ಉದ್ಯಮಿ ವೆಂಕಟರಮಣ ಪೋತಿ ಮಾರಾಟ ಮಳಿಗೆ ಉದ್ಘಾಟಿಸಿದರು.


    ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು.
    ಕೃಷಿ ತಜ್ಞ ಶ್ರೀಪಡ್ರೆ ಸಾವಯವ ಜಾಗೃತಿ ಸಂದೇಶ ನೀಡಿದರು. ಡಾ.ಮುರಳೀಧರ ಯಡಿಯಾಳ್ ಹಲಸು ಮತ್ತು ಮಾವಿನ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನೀಡಿದರು.


    ಕಾರ್ಪೋರೇಟರ್ ಶಕಿಲಾ ಕಾವ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಶರವು ರಾಘವೇಂದ್ರ ಶಾಸ್ತ್ರಿ, ಡಾ.ಜೀವರಾಜ್ ಸೊರಕೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
    ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಮತ್ತು ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.

    ಘಮ ಘಮಿಸಿದ ಹಲಸು, ಮಾವು
    ಮೇಳದಲ್ಲಿ ವಿವಿಧ ಜಾತಿಯ ಹಲಸು, ಮಾವಿನ ಹಣ್ಣುಗಳು ಘಮ ಬೀರಿದವು. ಹಲಸು ಹಾಗೂ ಮಾವಿನ ಮೌಲ್ಯವರ್ಧಿತ ಉತ್ಪನ್ನಗಳು, ಮನೆಯಲ್ಲೇ ತಯಾರಿಸಿದ ಉಪ್ಪಿನಕಾಯಿ, ಸೆಂಡಿಗೆ, ಹಪ್ಪಳ, ಸಾವಯವ ತರಕಾರಿ ಮಾರಾಟ ಮಳಿಗೆಗಳು, ಖಾದಿ ಬಟ್ಟೆಗಳು ಗಮನ ಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts