More

    ವಿಮಾನಕ್ಕೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್.. ಆ ಕೋಪದಿಂದಲೇ ಕರೆ ಮಾಡಿದ್ದು!

    ಕೊಚ್ಚಿ: ಕೇರಳಾದ ಕೊಚ್ಚಿಯಿಂದ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಪ್ರಕರಣದಲ್ಲಿ ಆಘಾತಕಾರಿ ಟ್ವಿಸ್ಟ್ ಬೆಳಕಿಗೆ ಬಂದಿದೆ. ಈ ವೇಳೆ ಬಂಧಿತ ಆರೋಪಿ ತನಿಖೆ ವೇಳೆ ತಾನು ಆ ಹುಸಿ ಕರೆ ಮಾಡಲು ಕಾರಣ ಹೇಳಿದ್ದಾನೆ. ತಮ್ಮ ಟಿಕೆಟ್ ಮರು ನಿಗದಿಪಡಿಸುವ ಸಿಟ್ಟಿನಿಂದ ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾನೆ. ಈ ಉತ್ತರ ಕೇಳಿ ಅಧಿಕಾರಿಗಳು ಹೌಹಾರಿದ್ದಾರೆ.

    ಇದನ್ನೂ ಓದಿ: ರಾಹುಲ್​ಗಾಂಧಿ ಖುದ್ದು ಹಾಜರಾಗುವಂತೆ ಕೋರ್ಟ್ ಆದೇಶ

    ಏರ್ ಇಂಡಿಯಾ ವಿಮಾನ ಎಐ 149 ಮಂಗಳವಾರ ಬೆಳಗ್ಗೆ ಕೊಚ್ಚಿಯಿಂದ ಲಂಡನ್ ನ ಗ್ಯಾಟ್‌ವಿಕ್‌ಗೆ ಟೇಕ್ ಆಫ್ ಆಗಲು ಸಿದ್ಧವಾಗಿತ್ತು. ಆದರೆ, ಹಿಂದಿನ ದಿನ ಸೋಮವಾರ ತಡರಾತ್ರಿ ಮುಂಬೈನ ಏರ್ ಇಂಡಿಯಾ ಕಸ್ಟಮರ್ ಕೇರ್ ಸೆಂಟರ್ ಗೆ ದೂರವಾಣಿ ಕರೆ ಬಂದಿದ್ದು, ವಿಮಾನದಲ್ಲಿ ಬಾಂಬ್ ಇದೆ ಎಂದು ತಕ್ಷಣ ಕರೆ ಕಟ್ ಮಾಡಲಾಗಿತ್ತು.

    ಇದರಿಂದ ಎಚ್ಚೆತ್ತ ಅಧಿಕಾರಿಗಳು ತಕ್ಷಣ ವಿಮಾನದಲ್ಲಿ ತಪಾಸಣೆ ನಡೆಸಿದರು. ಕಡೆಗೆ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ. ಇದೊಂದು ಹುಸಿ ಕರೆ ಎಂಬುದು ದೃಢಪಟ್ಟಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಕೆಲವೇ ಗಂಟೆಗಳಲ್ಲಿ ಆರೋಪಿ ಸುಹೈಬ್ (30) ಬಂಧಿಸಲಾಗಿದೆ.

    ಈ ಬೆದರಿಕೆ ಏಕೆ ಹಾಕಿದ್ದೀರಿ ಎಂದು ಕೇಳಿದಾಗ, ಟಿಕೆಟ್ ಮರು ನಿಗದಿಯಾಗದ ಕಾರಣ ಎಂದು ಸುಹೇಬ್ ಹೇಳಿದ್ದಾನೆ. ಮಂಗಳವಾರ ಎಐ 149 ವಿಮಾನದಲ್ಲಿ ಪತ್ನಿ ಮತ್ತು ಮಗಳೊಂದಿಗೆ ಲಂಡನ್‌ಗೆ ಹೋಗಬೇಕಿತ್ತು. ಆದರೆ ಮಗಳಿಗೆ ಫುಡ್ ಪಾಯ್ಸನ್ ಆದ ಕಾರಣ ಪ್ರಯಾಣವನ್ನು ಮುಂದೂಡಲಾಯಿತು. ಆಗ ಟಿಕೆಟ್ ಅನ್ನು ಇನ್ನೊಂದು ದಿನಕ್ಕೆ ಮರುಹೊಂದಿಸಲು ವಿಮಾನಯಾನ ಸಂಸ್ಥೆಗಳನ್ನು ಕೇಳಲಾಯಿತು. ಆದರೆ ವಿಮಾನಯಾನ ಸಂಸ್ಥೆ ಹಾಗೆ ಮಾಡಲು ನಿರಾಕರಿಸಿತು. ಇದಕ್ಕೆ ತೀವ್ರ ನಿರಾಶೆಗೊಂಡು ಬಾಂಬ್​ ಬೆದರಿಕೆ ಹಾಕಿದ್ದಾಗಿ ಸುಹೈಬ್ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

    ಕಂಗನಾ – ಚಿರಾಗ್ ಪಾಸ್ವಾನ್ ಮುಖಾಮುಕಿ! ಈ ಜೋಡಿ ಒಟ್ಟಿಗೆ ನಟಿಸಿದ್ದರು ಗೊತ್ತಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts