More

    ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸಲ್​ ಬೆಲೆ ಇಳಿಕೆ, ನೂತನ ದರ ಹೀಗಿದೆ…

    ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಭಾರೀ ಹಿನ್ನಡೆ ಕಂಡಿದ್ದ ಎನ್​ಡಿಎ ಮೈತ್ರಿಕೂಟ ಸರ್ಕಾರ ಈ ಬಾರಿಯ ರಾಜ್ಯ ಬಜೆಟ್​ನಲ್ಲಿ ಜನಪ್ರಿಯ ಸ್ಕೀಮ್​ಗಳಿಗೆ ಶರಣಾಗಿದೆ. ಇದರಂತೆ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ತೆರಿಗೆಯನ್ನು ಮಹಾರಾಷ್ಟ್ರ ಸರ್ಕಾರ ಇದೇ ವೇಳೆ ಇಳಿಕೆ ಮಾಡಿ ಜನಸಾಮಾನ್ಯರಿಗೆ ಖುಷಿಯ ಸುದ್ದಿ ನೀಡಿದ್ದಾರೆ.

    ಇದನ್ನೂ ಓದಿ: ಪ್ರಭಾಸ್, ದೀಪಿಕಾ ಪಡುಕೋಣೆ ನಟನೆಯ ‘ಕಲ್ಕಿ’ ಸಿನಿಮಾ ಬಗ್ಗೆ ಯಶ್‌ ಹೇಳಿದ್ದೇನು? 

     ಡೀಸೆಲ್‌ ಮೇಲಿದ್ದ 24% ತೆರಿಗೆಯನ್ನು 21% ಇಳಿಕೆ ಮಾಡಿದ್ದು, ಪ್ರತಿ ಲೀಟರ್‌ ಡೀಸೆಲ್‌ ಬೆಲೆ 2 ರೂ. ಇಳಿಕೆಯಾಗಲಿದೆ. ಪೆಟ್ರೋಲ್‌ ಮೇಲಿದ್ದ 26% ತೆರಿಗೆಯನ್ನು 25% ಇಳಿಕೆ ಮಾಡಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 65 ಪೈಸೆ ಇಳಿಸಲಾಗಿದೆ. ಇದರೊಂದಿಗೆ ಮುಂಬೈನಲ್ಲಿ ಪೆಟ್ರೋಲ್ ಬೆಲೆ 65 ಪೈಸೆ ಇಳಿಕೆ ಆದರೆ, ಡೀಸಲ್ ಬೆಲೆ ಎರಡು ರೂನಷ್ಟು ತಗ್ಗಲಿದೆ.

    ಪ್ರಸ್ತುತ ಮುಂಬಯಿಯಲ್ಲಿ ಪೆಟ್ರೋಲ್ ದರ ಲೀಟರ್​ಗೆ 104.21 ರೂ ಇದೆ. ಡೀಸಲ್ ಬೆಲೆ ಲೀಟರ್​ಗೆ 92.15 ರೂ ಇದೆ.

     

    ಚೆನ್ನೈ ವಿಮಾನ ನಿಲ್ದಾಣದಲ್ಲಿ 21 ಕೋಟಿ ರೂ. ಮೌಲ್ಯದ ಕೊಕೇನ್ ವಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts