More

    ಸಕ್ರಿ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ

    ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜಾಗೃತಿ ವೇದಿಕೆ ಟ್ರಸ್ಟ್ ಹಾಗೂ ಮಂಜುನಾಥೇಶ್ವರ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಗುರುವಾರ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು.

    ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿಚಾರಧಾರೆಗಳು ವಿಶೇಷವಾಗಿವೆ. ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಎಲ್ಲ ಸೌಲಭ್ಯಗಳು ಲಭಿಸಿ ಪ್ರತಿಯೊಬ್ಬರು ಸಮದ್ಧ ಜೀವನ ನಡೆಸಬೇಕು ಎಂದು ಬಯಸುತ್ತಾರೆ. ಜನಜಾಗತಿ ವೇದಿಕೆಯ ಅಡಿಯಲ್ಲಿ ಸುಮಾರು ಒಂದು ಲಕ್ಕೂ ಅಧಿಕ ಜನರು ಮಧ್ಯವ್ಯಸನದಿಂದ ಮುಕ್ತಿ ಪಡೆಯಲು ಸಹಾಯ ಮಾಡಿದ್ದಾರೆ. ಗ್ರಾಮಾಭಿವದ್ಧಿ ಯೋಜನೆಯ ಮೂಲಕ ಹಳ್ಳಿಗಳ ಸರ್ವತೋಮುಖ ಅಭಿವದ್ಧಿಗೆ ಕಾರಣಿಕರ್ತರಾಗಿದ್ದಾರೆ ಎಂದು ತಿಳಿಸಿದರು.

    ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯ ರಕ್ತ ಭಂಡಾರ ಅಧಿಕಾರಿ ಡಾ. ಉಮೇಶ ಹಳ್ಳಿಕೇರಿ, ಚಿಕ್ಕ ವಯಸ್ಸಿನವರು ಮಾದಕ ವಸ್ತುಗಳಿಗೆ ಬಲಿಯಾಗಿ ಅಪರಾಧಿಕ ಕತ್ಯಗಳಲ್ಲಿ ತೊಡಗುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರದಿಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರು ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಪಡೆಯಬೇಕು. ಮಾದಕ ವಸ್ತುಗಳು ಹದಯಾಘಾತ, ಕಾನ್ಸರ್ ಮುಂತಾದ ರೋಗಗಳನ್ನು ತಂದು ಅಕಾಲಿಕ ಸಾವಿಗೆ ಕಾರಣವಾಗುತ್ತವೆ ಎಂದು ಎಚ್ಚರಿಸಿದರು.

    ಅಧ್ಯಕ್ಷತೆ ವಹಿಸಿದ್ದ ಡಾ. ರೂಪಾ ಇಂಗಳಹಳ್ಳಿ ಮಾತನಾಡಿ, ಮಾದಕ ವಸ್ತುಗಳನ್ನು ಬೆಳೆಯುವುದು, ಸಂಗ್ರಹ ಮಾಡುವುದು ಮತ್ತು ಬಳಕೆಯನ್ನು ಸಂರ್ಪೂಣ ನಿಷೇಧಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬರು ಮಾದಕ ವಸ್ತುಗಳ ಸೇವನೆ ವಿರುದ್ಧ ಸಂಕಲ್ಪ ಮಾಡಿ ಭವ್ಯ ಭಾರತ ನಿರ್ಮಿಸಲು ಮುಂದಾಗಬೇಕು ಎಂದರು.

    ಕೃಷಿ ಅಧಿಕಾರಿ ಶಿವಾನಂದ ಸ್ವಾಗತಿಸಿದರು. ಶೋಭಾ ಜಾಬಿನ ಪ್ರಾರ್ಥನೆ ಹಾಡಿದರು. ಪೂರ್ಣಿಮಾ ಕುರಡಿಕೇರಿ ಕಾರ್ಯಕ್ರಮ ನಿರೂಪಿಸಿದರು. ಸಿದ್ದಾರೂಢಮಠ ಮೇಲ್ವಿಚಾರಕ ಮಹೇಶ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts