More

    ಸೈನಿಕ ಶಾಲೆಗೆ ಲೆಫ್ಟಿನೆಂಟ್ ಜನರಲ್ ಭೇಟಿ

    ಕುಶಾಲನಗರ:

    ಕೂಡಿಗೆಯಲ್ಲಿ ಇರುವ ಕೊಡಗು ಸೈನಿಕ ಶಾಲೆಗೆ ರಕ್ಷಣಾ ಸಚಿವಾಲಯ ಸೇನಾ ವಿಭಾಗದ ನೇಮಕಾತಿ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ನವನೀತ್ ಸಿಂಗ್ ಸರ್ನಾ ಶುಕ್ರವಾರ ಭೇಟಿ ಕೊಟ್ಟಿದ್ದರು. ಈ ಸಂದರ್ಭ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರೇರಣಾತ್ಮಕ ಸಂವಾದ ನಡೆಸಿದರು.

    ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನ ಆಯ್ಕೆ ಮಾಡಿಕೊಳ್ಳುವ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಸಮಗ್ರವಾದ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಗಳನ್ನು ತಲುಪುವವರೆಗೂ ಉತ್ಸಾಹದಿಂದ ಅವಿರತವಾಗಿ ಕಾರ್ಯನಿರತರಾಗಿರಬೇಕೆಂದು ಹೇಳಿದರು. ಯುಪಿಎಸ್‌ಸಿ, ಎನ್‌ಡಿಎ ಮತ್ತು ವಿವಿಧ ರಕ್ಷಣಾ ತರಬೇತಿ ಅಕಾಡೆಮಿಗಳ ಸೇರ್ಪಡೆಗೆ ಅತ್ಯವಶ್ಯಕವಾಗಿ ನಡೆಸಬೇಕಾದ ಸಿದ್ಧತೆಯ ಕುರಿತು ಮಾರ್ಗದರ್ಶನ ನೀಡಿದರು. ಭಾರತೀಯ ರಕ್ಷಣಾಪಡೆಗಳ ವಿವಿಧ ವಿಭಾಗಗಳು, ಶ್ರೇಣಿಯ ರಚನೆ ಮತ್ತು ಭಾರತೀಯ ಸಶಸ್ತ್ರಪಡೆಗಳು ನಡೆಸುತ್ತಿರುವ ಸಾಹಸಚಟುವಟಿಕೆಗಳ ಕಾರ್ಯ ವಿಧಾನಗಳ ತಂತ್ರಗಳ ಸರಣಿಯ ಕುರಿತು ಮಾರ್ಗದರ್ಶನ ನೀಡಿದರು.

    ಇದಕ್ಕೂ ಮೊದಲು ಇವರು ಶಾಲೆಯ ಆವರಣದಲ್ಲಿ ಇರುವ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪ ಗುಚ್ಛ ಇರಿಸಿ ಗೌರವ ಸಲ್ಲಿಸಿದರು.
    ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್‌ಜಿತ್ ಸಿಂಗ್, ಶಾಲಾ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ವಿ. ಪ್ರಕಾಶ್ ರಾವ್, ಉಪ ಪ್ರಾಂಶುಪಾಲ ಸ್ಕಾ÷್ವಡ್ರನ್ ಲಿಡರ್ ಮೊಹಮ್ಮದ್ ಷಾಜಿ, ಶಿಕ್ಷಕರು, ಬೋಧಕ ವರ್ಗ, ಸಿಬ್ಬಂದಿ ಈ ವೇಳೆ ಇದ್ದರು.
    ಸಭಾ ಕಾರ್ಯಕ್ರಮದ ನಂತರ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts