More

    ಬೆಳ್ಳಂಬೆಳಗ್ಗೆ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ..

    ಮುಂಬೈ: ಭಾರತದ ವಿವಿಧ ಮೆಟ್ರೋ ನಗರಗಳಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​​ಗಳ ಬೆಲೆಯನ್ನು ಪ್ರತಿ ವಾಣಿಜ್ಯ ಬಳಕೆಯ ಸಿಲಿಂಡರ್​ಗೆ 30 ರಿಂದ 31 ರೂ ನಷ್ಟು ಕಡಿತಗೊಳಿಸಲಾಗಿದೆ.

    ರೆಸ್ಟೋರೆಂಟ್ ಮಾಲೀಕರು ಮತ್ತು ಹೋಟೆಲ್ ಮಾಲೀಕರು ಇದರ ಲಾಭ ಪಡೆಯುತ್ತಿದ್ದಾರೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

    ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಂತಹ ಮೆಟ್ರೋ ಪ್ರದೇಶಗಳಲ್ಲಿ ಗ್ರಾಹಕರು ಇದೀಗ ನವೀಕರಿಸಿದ, ಕಡಿಮೆಯಾದ ದರಗಳನ್ನು ತಕ್ಷಣವೇ ಪಡೆದುಕೊಳ್ಳಬಹುದು. ವಿಶೇಷವಾಗಿ ರೆಸ್ಟೋರೆಂಟ್​​, ದಾಬಾಗಳಂತಹ ವ್ಯವಹಾರಗಳಿಗೆ ದೈನಂದಿನ ಕಾರ್ಯಾಚರಣಗೆ ಎಲ್​ಪಿಜಿ ಸಿಲಿಂಡರ್ ಅಗತ್ಯವಾಗಿದೆ. ಗೃಹಬಳಕೆ ಸಿಲಿಂಡರ್​​ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ

    ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 30 ರೂಪಾಯಿ ಕಡಿಮೆ ಆಗಿದೆ. ಜೂನ್‌ನಲ್ಲಿ ಅದರ ಬೆಲೆಯು 1676 ರೂಪಾಯಿ ಇತ್ತು. ಇದೀಗ 1646 ರೂಪಾಯಿಗೆ ಇಳಿಕೆ ಆಗಿದೆ. ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 31 ರೂಗಳಷ್ಟು ಕಡಿಮೆಯಾಗಿದೆ. ಜೂನ್‌ನಲ್ಲಿ ಅದರ ಬೆಲೆ 1629 ರೂಪಾಯಿ ಇತ್ತು ಇದೀಗ 1598 ರೂಪಾಯಿ ಆಗಿದೆ. ಚೆನ್ನೈನಲ್ಲಿ 30 ರೂಪಾಯಿ ಇಳಿಕೆಯಾಗಿದ್ದು, 1809.50 ರೂಪಾಯಿ ಇಂದ 1840.50 ರೂಪಾಯಿಗೆ ಇಳಿಕೆಯಾಗಿದೆ. ಈ ಬಾರಿಯೂ ಕೂಡ ಗೃಹಬಳಕೆಯ ಸಿಲಿಂಡರ್​​ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗದಿರೋದು ಸಾಮಾನ್ಯ ಜನರಿಗೆ ನಿರಾಸೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts