More

    ಕರೋನಾ ವೈರಸ್ ಸೋಂಕು ತಗಲಿಸಿಕೊಳ್ಳಲು ರೆಡಿ ಇದ್ದೀರಾ?- ನಿಮಗೆ ಓಕೆ ಅಂದ್ರೆ ದುಡ್ಡು ಕೊಡೋಕೆ ರೆಡಿ ಇದೆ ಲಂಡನ್ನಿನ ಲ್ಯಾಬ್​

    ಲಂಡನ್​: ಕರೋನಾ ವೈರಾಣು -Covid-19 ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿದ್ದು, ಜಾಗತಿಕ ಅರ್ಥ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದೆ. ಅಪಾಯದಲ್ಲೂ ಅವಕಾಶ ಅರಸು ಎಂಬಂತೆ ಲಂಡನ್ನಿನ ಲ್ಯಾಬ್ ಒಂದು ಕರೋನಾ ಸೋಂಕನ್ನು ಸ್ವಯಂ ಪ್ರೇರಿತವಾಗಿ ತಗುಲಿಸಿಕೊಳ್ಳಲು ರೆಡಿ ಇರುವವರನ್ನು ಅರಸತೊಡಗಿದೆ. ವೈರಾಣುವನ್ನು ಪುಗಸಟ್ಟೆ ತಗಲಿಸಿಕೊಳ್ಳಬೇಕಾಗಿಲ್ಲ. ಅದಕ್ಕಾಗಿ ಹಣವನ್ನೂ ಕೊಡುವುದಾಗಿ ಅದು ಭರವಸೆ ನೀಡಿದೆ!

    ಸದ್ಯದ ಪರಿಸ್ಥಿತಿಯಲ್ಲಿ Covid-19 ಎಂಬ ಕರೋನಾ ವೈರಾಣುವಿಗೆ ಪರಿಣಾಮಕಾರಿ ಔಷಧವನ್ನು ಇದುವರೆಗೆ ಪತ್ತೆ ಮಾಡಲಾಗಿಲ್ಲ. ಇದಕ್ಕೊಂದು ಔಷಧ ಕಂಡು ಹುಡುಕಬೇಕು ಎಂದು ಜಾಗತಿಕ ಮಟ್ಟದಲ್ಲಿ ಸಂಶೋಧನೆಗಳು ನಡೆದಿವೆ. ಫಾರ್ಮಾ ಕಂಪನಿಗಳು ಇದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿವೆ. ಆದರೆ ಔಷಧದ ಪರಿಣಾಮಕಾರಿಯಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಜನರನ್ನು ಅರಸುತ್ತಿವೆ ಈ ಕಂಪನಿಗಳು. ಇದಕ್ಕಾಗಿ ಅಂತಹ ಜನರಿಗೆ ಸಾವಿರಾರು ಡಾಲರ್ ಹಣವನ್ನು ಪಾವತಿಸುವುದಕ್ಕೂ ಮುಂದಾಗಿವೆ.

    ಕರೋನಾಗೆ ಸಂಬಂಧಿಸಿ ಇದೇ ಮೊದಲ ಸಲ ಫಾರ್ಮಾ ಕಂಪನಿಯೊಂದು ಇಂತಹ ಪ್ರಯತ್ನಕ್ಕೆ ಮುಂದಾಗಿದೆ. ಬ್ರಿಟನ್​ನ Hvivo ಎಂಬ ಕಂಪನಿ ಈ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದ್ದು, ಸ್ವಯಂ ಪ್ರೇರಣೆಯಿಂದ ಬರುವ ಜನರಿಗೆ 4,500 ಡಾಲರ್ (ಅಂದಾಜು 3.3 ಲಕ್ಷ ರೂಪಾಯಿ) ಪಾವತಿಸುವುದಾಗಿಯೂ ಘೋಷಿಸಿದೆ ಎಂದು ದ ಟೈಮ್ಸ್ ವರದಿ ಮಾಡಿದೆ.

    ಸ್ವಯಂ ಪ್ರೇರಣೆಯಿಂದ ಪ್ರಯೋಗ ಪಶುವಾಗುವುದಕ್ಕೆ ಮುಂದಾಗುವ ಜನರು ಎರಡು ವಾರ ಕಾಲ ವಾಲಂಟೀಯರ್ಸ್ ಆಗಿ ಪೂರ್ವ ಲಂಡನ್​ನಲ್ಲಿರುವ ಸಂಶೋಧನಾಲಯದ ಒಂಟಿಯಾಗಿ ಇರಬೇಕಾಗುತ್ತದೆ ಇದುವರೆಗೆ 24 ಜನ ಇಂತಹ ಪ್ರಯೋಗಕ್ಕೆ ಒಪ್ಪಿಕೊಂಡು ಬಂದಿದ್ದಾರೆ. ಅವರಿಗೆ ಎರಡು ಮಾದರಿಯ ಕರೋನಾ ವೈರಸ್(0C43 ಮತ್ತು 229E)ಗಳನ್ನು ಚುಚ್ಚುಮದ್ದಿನ ಮೂಲಕ ನೀಡಲಾಗಿದೆ. ಈ ಎರಡೂ ಮಾದರಿಗಳು ಪ್ರಯೋಗಕ್ಕೆ ಒಪ್ಪಿಕೊಂಡವರಲ್ಲಿ ತೀವ್ರತರದ ಶ್ವಾಸ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.

    ಲಂಡನ್​ನ ಕ್ವೀನ್ ಮೇರಿ ಯೂನಿವರ್ಸಿಟಿಯ ಪ್ರೊಫೆಸರ್ ಜಾನ್ ಆಕ್ಸ್​ಫರ್ಡ್​ ಪ್ರಕಾರ, ಈ ವಾಲಂಟೀಯರ್ಸ್​​ಗೆ ಸಣ್ಣ ಪ್ರಮಾಣದ ಕೆಮ್ಮು ಅಥವಾ ನೆಗಡಿ ಆರಂಭದಲ್ಲಿ ಕಾಣಿಸಿಕೊಳ್ಳಲಿದೆ. ಇವರ ಆರೋಗ್ಯ ಪರಿಸ್ಥಿತಿಯನ್ನು ಪರಿಣತ ವೈದ್ಯರ ತಂಡ ನಿಗಾದಲ್ಲಿರಿಸುತ್ತಿದ್ದು, ಅವರ ಮೇಲೆ ಬೇರೆ ಬೇರೆ ಔಷಧ ಪ್ರಯೋಗ ಮಾಡಿದ ಅದರ ಪರಿಣಾಮಗಳನ್ನು ಪರಿಶೀಲಿಸುತ್ತದೆ. ಅಲ್ಲದೆ, ದಾಖಲಿಸಿಕೊಂಡು ಅದರ ವಿಶ್ಲೇಷಣೆ ನಡೆಸಿ ಹೊಸ ಔಷಧಗಳನ್ನು ಸಿದ್ಧಪಡಿಸುವ ಕೆಲಸವನ್ನು ಇನ್ನೊಂದು ತಂಡ ಮಾಡುತ್ತದೆ.

    ಈ ರೀತಿಯ ಪ್ರಯೋಗ ಇದೇ ಮೊದಲಲ್ಲ. ಕಳೆದ ವರ್ಷ ಅಮೆರಿಕದ ಕೆಲವು ಲ್ಯಾಬ್​ಗಳು ಇನ್​​ಫ್ಲುಯೆನ್ಸಾ ವೈರಸ್ ಸೋಂಕು ತಡೆಯುವ ಔಷಧ ಅಭಿವೃದ್ಧಿಪಡಿಸಲು 3,300 ಡಾಲರ್ ನೀಡಿ ಜನರನ್ನು ಆಹ್ವಾನಿಸಿತ್ತು. ಆದರೆ, ಇದಕ್ಕಿಂತ Covid-19 ವೈರಾಣು ಹೆಚ್ಚು ಅಪಾಯಕಾರಿ. ಹೀಗಾಗಿ ಎಲ್ಲರ ಗಮನವೂ ಇತ್ತ ನೆಟ್ಟಿದೆ. (ಏಜೆನ್ಸೀಸ್​)

    ಕರೊನಾ ವೈರಸ್​ ಸೋಂಕು ವದಂತಿ ತಪ್ಪಿಸಲು ಕೆಳಕಂಡ ಜಾಲತಾಣದಿಂದ ಮಾತ್ರ ಮಾಹಿತಿ ಪಡೆಯಿರಿ

    VIDEO| ಮಾಸ್ಕ್ ಸಿಕ್ತಿಲ್ವಾ ಡೋಂಟ್ ವರಿ, ಆನಂದ್ ಮಹಿಂದ್ರಾ ಹಂಚಿಕೊಂಡಿರುವ ಈ ವಿಡಿಯೋ ನೋಡಿ ನೀವೇ ಮಾಡ್ಕೊಳ್ಳಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts