More

    ಸ್ಪೀಕರ್​ ಸ್ಥಾನಕ್ಕಾಗಿ ಚುನಾವಣೆ; ಎನ್​ಡಿಎ ಅಭ್ಯರ್ಥಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

    ನವದಹೆಲಿ: ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಎನ್‌ಡಿಎ ಕಡೆಯಿಂದ ಓಂ ಬಿರ್ಲಾ, ಪ್ರತಿಪಕ್ಷ ಮೈತ್ರಿಕೂಟದಿಂದ ಕೆ.ಸುರೇಶ್ ಅವರು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ಗಾಂಧಿ ಪ್ರತಿಪಕ್ಷಗಳು ಸ್ಪೀಕರ್ ಹುದ್ದೆಯನ್ನು ಬೆಂಬಲಿಸಲು ಸಿದ್ಧವಾಗಿದೆ. ಆದರೆ ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ಸಿಗಬೇಕು ಎಂದು ಹೇಳಿದರು.

    ಇದನ್ನು ಓದಿ: 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ! ಕಾರಣ ಏನು ಗೊತ್ತಾ?

    ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತವನ್ನು ಕೋರಿದ್ದಾರೆ ಎಂದು ರಾಹುಲ್​ಗಾಂಧಿ ಹೇಳಿದರು. ಅದಕ್ಕೆ ಮಲ್ಲಿಕಾರ್ಜುನ್​ ಖರ್ಗೆ ಅವರು, ನಾವು ಸ್ಪೀಕರ್‌ ಸ್ಥಾನದ ಎನ್​ಡಿಎ ಅಭ್ಯರ್ಥಿಗೆ ಬೆಂಬಲ ನೀಡುತ್ತೇವೆ. ಆದರೆ ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ಸಿಗಬೇಕು ಎಂದು ಕೇಳಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆ ಮಾಡುವುದಾಗಿ ಹೇಳಿದ ರಾಜನಾಥ್​​ ಸಿಂಗ್​ ಅವರು ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಹೇಳಿದರು.

    ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳು ಸರ್ಕಾರಕ್ಕೆ ರಚನಾತ್ಮಕವಾಗಿ ಸಹಕರಿಸಬೇಕು. ವಿಪಕ್ಷಗಳು ಮತ್ತು ಸರ್ಕಾರ ಜತೆಯಾಗಿ ಕೆಲಸ‌ ಮಾಡಬೇಕು. ವಿಪಕ್ಷಗಳ ಬೆಂಬಲದೊಂದಿಗೆ ಕಲಾಪ ನಡೆಯಬೇಕು ಎಂದು ಹೇಳುತ್ತಾರೆ. ಆದರೆ ಮೋದಿ ಅವರ ಮಾತಿನಲ್ಲಿ ಯಾವುದೇ ಅರ್ಥವಿಲ್ಲ. ಸಂಸತ್ ಹೊರಗಡೆ ಒಂದು ರೀತಿಯ ಹೇಳಿಕೆ ನೀಡುತ್ತಾರೆ. ಕಲಾಪದ ಒಳಗೆ ಬೇರೆ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎಂದು ರಾಹುಲ್​ಗಾಂಧಿ ವಾಗ್ದಾಳಿ ಮಾಡಿದರು.

    ನಮ್ಮ ನಾಯಕರಿಗೆ ಕರೆ ಮಾಡುವುದಾಗಿ ರಾಜನಾಥ್​ ಸಿಂಗ್​ ಹೇಳಿದ್ದಾರೆ. ಉಪಸಭಾಪತಿ ಸ್ಥಾನವನ್ನು ಕೇಳಿದ ವಿಪಕ್ಷಗಳಿಗೆ ಇನ್ನು ಯಾವುದೇ ಕರೆ ಬಂದಿಲ್ಲ.ಸರ್ಕಾರದ ಉದ್ದೇಶಗಳು ಸ್ಪಷ್ಟವಾಗಿಲ್ಲ. ನಮ್ಮ ನಾಯಕನನ್ನು ಅವಮಾನಿಸಲಾಗುತ್ತಿದೆ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts