More

    ಲಾಕ್​ಡೌನ್​ 15 ದಿನ ವಿಸ್ತರಣೆಯಾಗುವುದು ಫಿಕ್ಸ್! ಮಾಹಿತಿ ಬಿಚ್ಚಿಟ್ಟ ಆರೋಗ್ಯ ಸಚಿವ

    ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಾಣದ ಹಿನ್ನೆಲೆಯಲ್ಲಿ ಲಾಕ್​ಡೌನ್​ ಅನ್ನು ಇನ್ನು 15 ದಿನಗಳ ಕಾಲ ವಿಸ್ತರಣೆ ಮಾಡುವುದಾಗಿ ತಿಳಿಸಲಾಗಿದೆ. ಈ ಕುರಿತಾಗಿ ರಾಜ್ಯ ಆರೋಗ್ಯ ಸಚಿವರಾದ ರಾಜೇಶ್​ ತೋಪೆ ಮಾಹಿತಿ ನೀಡಿದ್ದಾರೆ.

    ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಲಾಕ್​ಡೌನ್​ ಅನ್ನು ವಿಸ್ತರಣೆ ಮಾಡಬೇಕು ಎನ್ನುವುದು ಕ್ಯಾಬಿನೆಟ್​ನ ಬಹುತೇಕ ಸದಸ್ಯರ ಅಭಿಪ್ರಾಯವಾಗಿದೆ. ಆ ಕಾರಣ ಮೇ 1ರಂದು ಮುಕ್ತಾಯವಾಗಬೇಕಿದ್ದ ಲಾಕ್​ಡೌನ್​ ಅನ್ನು 15 ದಿನಗಳ ಕಾಲ ವಿಸ್ತರಣೆ ಮಾಡಲಾಗುವುದು ಎಂದು ರಾಜೇಶ್​ ತೋಪೆ ತಿಳಿಸಿದ್ದಾರೆ.

    ನಮ್ಮಲ್ಲಿ ಕರೊನಾ ಲಸಿಕಾ ಕೇಂದ್ರಗಳು ಸಾಕಷ್ಟಿವೆ. ಆದರೆ ಲಸಿಕೆ ಕೊರತೆಯಿದೆ. ಮುಖ್ಯಮಂತ್ರಿಗಳು ಲಸಿಕಾ ಉತ್ಪಾದನಾ ಕೇಂದ್ರಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. 18ರಿಂದ 45 ವರ್ಷ ವಯಸ್ಸಿನವರಿಗೆ ಪ್ರತ್ಯೇಕ ಲಸಿಕಾ ಕೇಂದ್ರಗಳನ್ನು ನಿಗದಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಮೊದಲು ಕರೊನಾದ ಎರಡನೇ ಅಲೆ ಆರಂಭವಾದ ಹಿನ್ನೆಲೆಯಲ್ಲಿ ಏಪ್ರಿಲ್​ 4ರಿಂದ ಏಪ್ರಿಲ್​ 30ರವರೆಗೆ ಪ್ರತಿದಿನ ನೈಟ್​ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್​ಡೌನ್​ ಘೋಷಿಸಲಾಗಿತ್ತು. ಆದರೆ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾದ ಹಿನ್ನೆಲೆಯಲ್ಲಿ ಏಪ್ರಿಲ್ 22ರಿಂದ ಮೇ 1ರವರೆಗೆ ಲಾಕ್​ಡೌನ್​ ಘೋಷಿಸಲಾಗಿತ್ತು. (ಏಜೆನ್ಸೀಸ್)

    ಸೊಸೆಗೆ ಬೇರೊಬ್ಬ ಯುವಕನೊಂದಿಗೆ ಲಿವ್ ಇನ್​ ರಿಲೇಶನ್​ಶಿಪ್​! ವಿಷಯ ತಿಳಿದ ಕುಟುಂಬ ಮಾಡಿದ್ದೇನು?

    ಪೆರ್ಡೂರು ಮೇಳದ ಹೆಸರಾಂತ ಯಕ್ಷಗಾನ ಕಲಾವಿದ ನಾಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts