More

    ರಜಿನಿ​ ಜತೆಯಿರುವ ಈ ಬಾಲಕಿ ಯಾರು ಗೊತ್ತಾ? ತಲೈವಾಗೆ ನಾಯಕಿಯಾಗಿದ್ದರು, ಕನ್ನಡದಲ್ಲೂ ನಟಿಸಿದ್ದಾರೆ!

    ಚೆನ್ನೈ: ಬೆಳ್ಳಿತೆರೆಯಲ್ಲಿ ಸ್ಟಾರ್ ಪಟ್ಟ ಪಡೆದ ಅನೇಕ ನಟ-ನಟಿಯರಿದ್ದಾರೆ. ಆದರೆ, ಅವರಲ್ಲಿ ಕೆಲವರು ಮೊದಲು ತಮ್ಮ ವೃತ್ತಿಜೀವನವನ್ನು ಬಾಲ ಕಲಾವಿದರಾಗಿ ಪ್ರಾರಂಭಿಸುತ್ತಾರೆ. ಸ್ಟಾರ್​ ಹೀರೋಗಳ ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಅವಕಾಶ ಗಿಟ್ಟಿಸಿಕೊಂಡು ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ, ಒಳ್ಳೆಯ ಮನ್ನಣೆ ಗಳಿಸುತ್ತಾರೆ. ಆದರೆ, ಈ ಯಶಸ್ಸು ಎಲ್ಲರಿಗೂ ಸಿಗುವುದಿಲ್ಲ. ಕೆಲವರಿಗೆ ಮಾತ್ರ ಅದೃಷ್ಟ ಲಕ್ಷ್ಮೀ ಒಲಿಯುತ್ತಾಳೆ ಮತ್ತು ಸತತ ಆಫರ್‌ಗಳನ್ನು ಪಡೆಯುತ್ತಾರೆ.

    ಬಾಲ ಕಲಾವಿದ ಸ್ಥಾನದಿಂದ ಸ್ಟಾರ್ ನಟ-ನಟಿಯರಾಗಿ ಬೆಳೆದವರಲ್ಲಿ ನಾವೀಗ ಮಾತನಾಡಲು ಹೊರಟಿರುವ ಈ ನಾಯಕಿಯೂ ಕೂಡ ಒಬ್ಬರು. ಮೇಲಿನ ಫೋಟೋದಲ್ಲಿ ರಜನಿಕಾಂತ್ ಜೊತೆ ಇರುವ ಈ ಪುಟ್ಟ ಹುಡುಗಿ ಯಾರೆಂದು ನೀವು ಊಹಿಸಬಲ್ಲಿರಾ? ಇಂಡಸ್ಟ್ರಿಯಲ್ಲಿ ಆಕೆ ಸ್ಟಾರ್ ಹೀರೋಯಿನ್. ಅಲ್ಲದೆ, ಬಹುಭಾಷಾ ನಟಿ ಕೂಡ ಹೌದು. ರಜನಿಕಾಂತ್ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದಲ್ಲದೆ ಅವರ ಎದುರು ನಾಯಕಿಯಾಗಿಯೂ ನಟಿಸಿದ್ದರು. ಮೇಲಾಗಿ ತನ್ನ ಸೌಂದರ್ಯದಿಂದ ಅಸಂಖ್ಯಾತ ಅಭಿಮಾನಿ ಬಳಗವನ್ನು ತಮ್ಮತ್ತ ಸೆಳೆದರು. ಈ ಫೋಟೋದಲ್ಲಿರುವ ಈ ಪುಟ್ಟ ಹುಡುಗಿ ಯಾರೆಂದು ನಿಮಗೆ ನೆನಪಿದೆಯೇ?

    ಮೇಲಿನ ಫೋಟೋದಲ್ಲಿ ಸೂಪರ್‌ಸ್ಟಾರ್ ರಜಿನಿಕಾಂತ್ ಅವರೊಂದಿಗೆ ಕಾಣಿಸಿಕೊಂಡಿರುವ ಈ ಪುಟ್ಟ ಹುಡುಗಿ ಅವರೊಂದಿಗೆ ಅನೇಕ ಚಲನಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾಳೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಬಾಲ ಕಲಾವಿದೆಯಾಗಿ ನಟಿಸಿದರು. ಈ ಫೋಟೋದಲ್ಲಿರುವ ಈ ಹುಡುಗಿ ಯಾರೆಂದು ನಿಮಗೆ ನೆನಪಿದೆಯೇ? ಆಕೆ ಬೇರೆ ಯಾರೂ ಅಲ್ಲ, ಸುಂದರ ತಾರೆ ಮೀನಾ ಅವರು. ಒಂದು ಕಾಲದಲ್ಲಿ ತಮಿಳು, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದರು. ಎಲ್ಲ ಭಾಷೆಗಳಲ್ಲಿ ಬಹುತೇಕ ಎಲ್ಲ ಸ್ಟಾರ್ ಹೀರೋಗಳ ಎದುರು ಮೀನಾ ನಟಿಸಿದ್ದಾರೆ. ಮೀನಾ ಮೊದಲು ರಜಿನಿಕಾಂತ್, ಕಮಲ್ ಹಾಸನ್​ರಂತಹ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಹೆಚ್ಚಾಗಿ ಬಾಲನಟಿಯಾಗಿ ನಟಿಸಿದ್ದರು.

    Actress Meena

    ಮೀನಾ ಅವರ ಚಿತ್ರಗಳ ಬಗ್ಗೆ ಹೇಳುವುದಾದರೆ 1991 ರಿಂದ 2000 ರವರೆಗೆ ಸುಮಾರು ಒಂದು ದಶಕದ ಕಾಲ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಅಗ್ರ ತಾರೆಯಾಗಿ ಮಿಂಚಿದರು. 2009 ರಲ್ಲಿ ತಮ್ಮ ವೃತ್ತಿಜೀವನವು ಉತ್ತಮ ಹಂತದಲ್ಲಿದ್ದಾಗ ಸಾಫ್ಟ್‌ವೇರ್ ಇಂಜಿನಿಯರ್ ವಿದ್ಯಾಸಾಗರ್ ಅವರನ್ನು ವಿವಾಹವಾದರು. ಆದರೆ, 2022 ರಲ್ಲಿ ಅನಾರೋಗ್ಯದಿಂದ ಪತಿ ನಿಧನರಾದರು. ಮೀನಾಗೆ ನೈನಿಕಾ ಹೆಸರಿನ ಮಗಳಿದ್ದಾಳೆ. ಆಕೆಯು ಕೂಡ ಬಾಲ ಕಲಾವಿದೆ. ಮೀನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ನಿಯಮಿತವಾಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ಜತೆ ಸಂಪರ್ಕದಲ್ಲಿರುತ್ತಾರೆ. (ಏಜೆನ್ಸೀಸ್​)

    ಗಂಡು ಮಗುವಿಗೆ ಜನ್ಮ ನೀಡಿದ ನಟಿ ಅಮಲಾ ಪೌಲ್​: ಮಗು ಹೆಸರು ಕೇಳಿ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್!​

    ದರ್ಶನ್​ಗೆ ಮತ್ತೊಂದು ಸಂಕಷ್ಟ: ವಿಜಯಲಕ್ಷ್ಮೀ ಎ1, ದಚ್ಚು ಎ3 ಆರೋಪಿ! ಗಂಡನ ಜತೆ ಪತ್ನಿಗೂ ತೊಂದರೆ

    ಮೌಲ್ಯಯುತ ಸೆಲೆಬ್ರಿಟಿಯಾಗಿ ಕೊಹ್ಲಿ ಅಗ್ರಸ್ಥಾನಕ್ಕೆ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts