More

    ಮದ್ಯದ ದರ ಹೆಚ್ಚಳ ಸುಳಿವು

    ಬೆಂಗಳೂರು: ಮದ್ಯದ ದರ ಏರಿಕೆ ಬಗ್ಗೆ ಅಬಕಾರಿ ಇಲಾಖೆ ಸಣ್ಣ ಸುಳಿವು ನೀಡಿದೆ. ಸಣ್ಣ ಮಟ್ಟದಲ್ಲಿ ದರ ಪರಿಷ್ಕರಣೆ ನಡೆಸಲು ಮುಂದಾಗಿದ್ದು, ಶೀಘ್ರವೇ ಮುಖ್ಯಮಂತ್ರಿಯವರ ಮುಂದೆ ಪ್ರಸ್ತಾವನೆ ಇಟ್ಟು ಒಪ್ಪಿಗೆ ಪಡೆಯಲು ಬಯಸಿದೆ.
    ಯಾವ ಪ್ರಮಾಣದಲ್ಲಿ ದರ ಏರಿಕೆಯಾಗಲಿದೆ, ಯಾವ ವರ್ಗದ ಮದ್ಯದ ದರ ಪರಿಷ್ಕರಣೆಯಾಗಲಿದೆ ಎಂಬುದು ಮುಂದಿನ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ಅಬಕಾರಿ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
    ಇದೇ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ರಾಮಪ್ಪ ಬಾಳಪ್ಪ ತಿಮ್ಮಾಪುರ, ಮದ್ಯದ ದರ ಏರಿಸುವ ಬಗ್ಗೆ ಈ ವರೆಗೆ ಯಾವುದೇ ತೀರ್ಮಾನ ಮಾಡಿಲ್ಲ. ನಮ್ಮ ಇಲಾಖೆ 38 ಸಾವಿರ ಕೋಟಿ ರೂ. ಆದಾಯದ ಗುರಿ ಹೊಂದಲಾಗಿದೆ. ಹಾಗಂತ ದರ ಹೆಚ್ಚಳ ಮಾಡುವುದಿಲ್ಲ. ನಿರೀಕ್ಷಿತ ಗುರಿ ಮುಟ್ಟಲಾಗುತ್ತಿದೆ ಎಂದರು.
    ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಮದ್ಯದ ದರ ಏರಿಕೆ ಅನಿವಾರ್ಯವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾರಂಟಿಗೂ ದರ ಪರಿಷ್ಕರಣೆಗೂ ಸಂಬಂಧವಿಲ್ಲ. ಅಕ್ಕಪಕ್ಕದ ರಾಜ್ಯಗಳಲ್ಲಿ ಮದ್ಯದ ದರ ಏನಿದೆ ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಮಹಾರಾಷ್ಟ್ರ, ಗೋವಾದಲ್ಲಿ ಬೆಲೆ ಏನಿದೆ ಎಂದು ಮಾಹಿತಿ ಕಲೆಹಾಕಲಾಗಿದೆ. ಕೆಲವು ಬ್ರಾಂಡ್‌ಗಳು ಮತ್ತು ಸ್ಲಾಬ್ ರೇಟ್ ಚರ್ಚೆ ನಡೆಯುತ್ತಿದೆಯಷ್ಟೇ ಎಂದು ಸ್ಪಷ್ಟಪಡಿಸಿದರು.
    ಇಂಧನ ಸೇರಿ ವಿವಿಧ ಬೆಲೆ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆಯನ್ನು ಸಾಮಾನ್ಯರು ಸಹಿಸಿಕೊಳ್ಳಬೇಕು. ಬಿಜೆಪಿಯವರು ಹೆಚ್ಚಿಸಿದಾಗ ಸಹಿಸಿಕೊಂಡಿದ್ದರು. ನಾವು ಗ್ಯಾರೆಂಟಿಗಳನ್ನು ಕೊಡುತ್ತಿದ್ದೇವೆ. ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಜನ ಸಾಮಾನ್ಯರಿಗೆ ಏನು ಕೊಡಬೇಕೋ ಕೊಡುತ್ತಿದ್ದೇವೆ ಎಂದರು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts