More

    ರಾಜ್ಯ ಬಿಜೆಪಿ ಶುದ್ಧೀಕರಣಕ್ಕಾಗಿ ವರಿಷ್ಠರಿಗೆ ಪತ್ರ: ಮಾಜಿ ಸಿಎಂ ಸದಾನಂದಗೌಡ

    ಬೆಂಗಳೂರು: ಲೋಕಸಭಾ ಚುನಾವಣೆ ಪೂರ್ವದಲ್ಲಿ ಹೇಳಿರುವಂತೆ ರಾಜ್ಯ ಬಿಜೆಪಿ ಶುದ್ಧೀಕರಣದ ಪ್ರಯತ್ನ ನಡೆದಿದ್ದು, ಇದರ ಭಾಗವಾಗಿ ವರಿಷ್ಠರಿಗೆ ಪತ್ರ ಬರೆದಿರುವೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದರು.

    ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ನನ್ನ ಪಕ್ಷ ಸರಿಯಾಗಬೇಕು ಎಂಬ ಉದ್ದೇಶದಿಂದ ಪತ್ರ ಬರೆದಿದ್ದು, ಬಿಡುಗಡೆ ಮಾಡಲಾಗದು. ಗುಂಪು ಕಟ್ಟಿಕೊಂಡು ಶುದ್ಧೀಕರಣಕ್ಕೆ ಕೈಹಾಕಿಲ್ಲವೆಂದು ಸ್ಪಷ್ಟಪಡಿಸಿದರು.

    ವರಿಷ್ಠರಿಗೆ ಪತ್ರ ಬರೆದ ವಿಚಾರ ತಿಳಿದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನನ್ನ ಮನೆಗೆ ಬಂದು ಚರ್ಚಿಸಿದ್ದಾರೆ. ಪಕ್ಷ ಸರಿಯಾಗದಿದ್ದರೆ ನನ್ನನ್ನು ಹೊರಗೆ ಹಾಕಿದರೂ ಬೇಸರವಿಲ್ಲ ಎಂದರು.

    ರೆಡ್ಡಿ, ಯತ್ನಾಳ್, ರೇಣುಕಾಚಾರ್ಯ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪಗಳು ಕೇಳಿದಾಗ ನಾನು ಅಧ್ಯಕ್ಷನಾಗಿ ಕ್ರಮವಹಿಸಿದ್ದೆ. ಶಿಸ್ತು ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು ಎಷ್ಟೇ ದೊಡ್ಡವರಿರಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವ ಕೆಲಸ ಈಗ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.

    ಹಿನ್ನಡೆಯ ಚಾರ್ಜ್‌ಶೀಟ್ ರವಾನೆ

    ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಗೆ ನೇತೃತ್ವವಹಿಸಿದವರ ವಿರುದ್ಧ ಪಕ್ಷದ ವರಿಷ್ಠರಿಗೆ ಚಾರ್ಜ್‌ಶೀಟ್ ರವಾನೆಯಾಗಲಿದೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಈ ಮಾತು ಹೇಳುತ್ತಿಲ್ಲ. ಲೋಕಸಭೆ ಚುನಾವಣೆ ಕೆಲವು ತಿಂಗಳು ಮುನ್ನ ಜವಾಬ್ದಾರಿ ತೆಗೆದುಕೊಂಡಿದ್ದಾರಷ್ಟೇ.

    ಮೋದಿ ಹೆಸರಿನಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಒಂಭತ್ತು ಸೀಟ್ ಕಳೆದುಕೊಂಡಿದ್ದೇವೆ. ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತುಂಬಲಿಲ್ಲ, ಕಾಂಗ್ರೆಸ್ ಶಕ್ತಿಶಾಲಿಯಾಗಿ ಕಾರ್ಯಾಚರಣೆಗೆ ಇಳಿದಿದೆ ಎಂದು ಊಹಿಸುವಲ್ಲಿ ನಮ್ಮ ಸಂಘಟನೆ ಮುಗ್ಗರಿಸಿತು.

    ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ತಳಮಟ್ಟದ ಕೆಲಸ, ಸರಿಯಾದ ಪ್ರಚಾರ ಮಾಡುವಲ್ಲಿ ನಾನು ಸೇರಿದಂತೆ ಎಲ್ಲರೂ ವಿಲರಾಗಿದ್ದೇವೆ. ಚಾರ್ಜ್‌ಶೀಟ್ ಎಲ್ಲಿಗೋ ಹೋಗಬೇಕೋ ಅಲ್ಲಿಗೆ ಹೋಗುತ್ತದೆ, ನಾವೆಲ್ಲ ಎ3, 3ರ ಆಗಬಹುದು ಎಂದು ಡಿ.ವಿ.ಸದಾನಂದಗೌಡ ವಿಶ್ಲೇಷಿಸಿದರು.

    ಲೋಕಸಭೆ ಚುನಾವಣೆ ಲಿತಾಂಶದ ಬಗ್ಗೆ ಈಗಾಗಲೇ ಪರಾಮರ್ಶಿಸಬೇಕಾಗಿತ್ತು. ಜು.4ರ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸೋಲು-ಗೆಲುವು, ಅಂತರ ಮತ್ತಿತರ ಅಂಶಗಳೆಲ್ಲ ಚರ್ಚೆಯಾಗಲಿದೆ ಎಂಬ ನಿರೀಕ್ಷೆಯಲ್ಲಿರುವೆ ಎಂದರು.

    ಶೆಟ್ಟರ್‌ರಂತೆ ನಾನಾಗಲ್ಲ

    ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಇತ್ತೀಚೆಗೆ ನನ್ನನ್ನು ಆಹ್ವಾನಿಸಿದ್ದರು. ನಾಲ್ಕು ಪ್ಯಾಂಟ್, ಶರ್ಟ್ ಮಾತ್ರ ತನ್ನಿ, 28ರಲ್ಲಿ ಒಂದು ಕ್ಷೇತ್ರದಲ್ಲಿ ಗೆಲ್ಲಿಸಿ ಕಳುಹಿಸುತ್ತೇವೆ ಎಂದೂ ಹೇಳಿದರು.

    ನಾನು ಮತ್ತೊಬ್ಬ ಜಗದೀಶ ಶೆಟ್ಟರ್ ಆಗಲು ರೆಡ್ಡಿ ಇಲ್ಲವೆಂದು ನೇರವಾಗಿ ಹೇಳಿದೆ. ನಾನು ಶಕ್ತಿ ಪ್ರದರ್ಶನ ಮಾಡುವುದಿಲ್ಲ. ಕೆ.ಎಸ್.ಈಶ್ವರಪ್ಪ ಪಕ್ಷಕ್ಕೆ ಮರಳುವ ಮಾಹಿತಿಯಿಲ್ಲ, ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಸರಿಯಲ್ಲ ಎಂದರು.

    ಕಾಂಗ್ರೆಸ್ ಪಕ್ಷದಲ್ಲಿ ಯಾರು ಸಿಎಂ ಆಗಬೇಕು ಎಂದು ಬೇರೆ ಪಕ್ಷದವರು ಮಾತನಾಡುವುದು ಹುಚ್ಚುತನ. ಆದರೆ ಸಮುದಾಯದ ಪರವಾಗಿ ಸ್ವಾಮೀಜಿ ಮಾತನಾಡಿದರೆ ತಪ್ಪೇನು ?. ಹಿಂದೆ ಸಿದ್ದರಾಮಯ್ಯ ಪರವಾಗಿ ಸ್ವಾಮೀಜಿಗಳು ಮಾತನಾಡಿದ ನಿದರ್ಶನಗಳಿವೆ.

    ಸಚಿವ ಕೆ.ಎನ್.ರಾಜಣ್ಣ ಅವರಿಗೆ ಖಾವಿ ಬಟ್ಟೆ ಬೇಕಾದರೆ ನಾವೇ ಕೊಡುತ್ತೇವೆ. ಸ್ವಾಮೀಜಿಯವರ ಶಿಷ್ಯತ್ವ ಸ್ವೀಕರಿಸಲಿ ಎಂದು ಡಿ.ವಿ.ಸದಾನಂದಗೌಡ ಸವಾಲೆಸೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts