More

    ರೆಫ್ರಿಯಾದವರು ತಪ್ಪು ನಿರ್ಣಯ ನೀಡದಿರಲಿ

    ಭಟ್ಕಳ: ಕರಾಟೆ ಸ್ಪರ್ಧೆಯಲ್ಲಿ ರೆಫ್ರಿಯಾದವರ ಪಾತ್ರ ನಿರ್ಣಾಯಕವಾಗಿರುತ್ತದೆ. ನಿರ್ಣಯ ನೀಡುವಾಗ ತಮ್ಮ ವಿದ್ಯಾರ್ಥಿಗಳ ಪರವಾಗಿ ತಪ್ಪು ನಿರ್ಣಯ ನೀಡಿದರೇ ಮುಂದಿನ ಹಂತದ ಸ್ಪರ್ಧೆಯಲ್ಲಿ ಅವನ ಭವಿಷ್ಯ ಮಣ್ಣು ಪಾಲಾಗುತ್ತದೆ. ರೆಫ್ರಿಯಾದವರು ಸ್ಪರ್ಧೆಯ ಸಂಪೂರ್ಣ ನಿಯಮ ಅರಿತು ಪಕ್ಷಪಾತ ಮಾಡದೇ ನಿರ್ಣಯ ನೀಡಬೇಕು ಎಂದು ರಾಜ್ಯ 7 ಡನ್ ಬ್ಲ್ಯಾಕ್ ಬೆಲ್ಟ್ ಡಬ್ಲು ಕೆಎಫ್​ಸಿ ರೆಫ್ರಿ ಕೆ.ಪಿ. ಜೋಸ್ ಹೇಳಿದರು.

    ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಕಮಲಾವತಿ ರಾಮನಾಥ ಶಾನಭಾಗ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ರೆಫ್ರಿ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ಕರಾಟೆ ತರಬೇತುದಾರರು ಹಾಗೂ ರೆಫ್ರಿಗಳು ಕಾಲಕಾಲಕ್ಕೆ ಬದಲಾಗುವ ಕರಾಟೆ ಸ್ಪರ್ಧೆಯ ನಿಯಮದ ಬಗ್ಗೆ ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದರು.

    ವಿದ್ಯಾಭಾರತಿ ಶಾಲೆ ಪ್ರಾಂಶುಪಾಲೆ ರೂಪಾ ಖಾರ್ವಿ ಮಾತನಾಡಿ, ಕರಾಟೆ ಕಲಿತ ನಂತರ ರೆಫ್ರಿ ಆಗಿ ನೇಮಕವಾಗಲು ಸ್ಪರ್ಧೆಯ ನಿಯಮಗಳ ಬಗ್ಗೆ ಸತತ ಅಧ್ಯಯನ ಮುಖ್ಯವಾಗಿರುತ್ತದೆ. ಏಕಾಗ್ರತೆ ಮತ್ತು ಕಲಿಕೆಯ ಮನಸು ಇದ್ದರೆ ಯಶಸ್ಸು ಸಾಧ್ಯ ಎಂದರು.

    ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಅರವಿಂದ ನಾಯ್ಕ, ಪತ್ರಕರ್ತ ಮೋಹನ ನಾಯ್ಕ ಹಾಗೂ ಉತ್ತರ ಕನ್ನಡ ಜಿಲ್ಲಾ ಸ್ಪೋಟರ್Õ ಕರಾಟೆ ಅಸೋಸಿಯೇಶನ್ ಕಾರ್ಯದರ್ಶಿ ಆನಂದ ನಾಯ್ಕ ಮಾತನಾಡಿದರು. ಉತ್ತರ ಕನ್ನಡ ಜಿಲ್ಲಾ ಸ್ಪೋಟ್ಸ್ ಕರಾಟೆ ಅಸೋಸಿಯೇಶನ್ ಉಪಾಧ್ಯಕ್ಷ ಈಶ್ವರ ನಾಯ್ಕ, ಕಾನೂನು ಸಲಹೆಗಾರ ಮನೋಜ ನಾಯ್ಕ, ಇತರರಿದ್ದರು. ನಾಗಶ್ರೀ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts