More

    ಕರಾಟೆ ಮಾಸ್ಟರ್‌ಗಳಿಗೆ ಸರ್ಕಾರದಿಂದ ಗೌರವಧನ ನೀಡಿ

    ರಾಣೆಬೆನ್ನೂರ: ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕರಾಟೆ ಕಲಿಸುವ ಕರಾಟೆ ಮಾಸ್ಟರ್‌ಗಳಿಗೆ ಸರ್ಕಾರದಿಂದ ನೀಡಲಾಗುವ ಗೌರವಧನ ಸರಿಯಾಗಿ ಬರುತ್ತಿಲ್ಲ ಎಂದು ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಧ್ಯಕ್ಷ ನಾರಾಯಣ ಪೂಜಾರ ಆರೋಪಿಸಿದರು.
    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಸ್ಕೂಲ್‌ನಲ್ಲಿ ಕರಾಟೆ ಹೇಳಿ ಕೊಡುವವರಿಗೆ ಮಾತ್ರ ಹಣ ಸಂದಾಯವಾಗಿದ್ದು, ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಣ ಪಾವತಿಯಾಗಿಲ್ಲ. ಸರ್ಕಾರ ಇದನ್ನು ಮನಗಂಡು ತ್ವರಿತಗತಿಯಲ್ಲಿ ಅನುದಾನ ನೀಡಬೇಕು ಒತ್ತಾಯಿಸಿದರು.
    ಜಿಲ್ಲಾ ಕರಾಟೆ ಸ್ಪೋರ್ಟ್ಸ್‌ನ ನೂತನ ಪದಾಧಿಕಾರಿಗಳಾಗಿ ದಿಳ್ಳೆಪ್ಪ ಅಂಬಿಗೇರ (ಚೇರ್ಮನ್), ಮನಿಷಾ ಕಬ್ಬೂರ (ಉಪಾಧ್ಯಕ್ಷ), ಪವನಕುಮಾರ ವಿ.ಜೆ (ಕಾರ್ಯದರ್ಶಿ)., ಮಂಜುನಾಥ ಕೆರೆಕೊಪ್ಪ (ಉಪ ಕಾರ್ಯದರ್ಶಿ), ನಾಗರಾಜ ಸುಣಗಾರ (ಖಜಾಂಚಿ), ಪವನ ಎಚ್.ಎಸ್. (ಉಪ ಖಜಾಂಚಿ), ಎಲ್ಲಮ್ಮ ಚಲವಾದಿ ಮಹಿಳಾ ಘಟಕದ ಅಧ್ಯಕ್ಷೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
    ಪ್ರಮುಖರಾದ ದಿಳ್ಳೆಪ್ಪ ಅಂಬಿಗೇರ, ಮನಿಷಾ ಕಬ್ಬೂರ, ಪವನಕುಮಾರ ವಿ.ಜೆ., ಮಂಜುನಾಥ ಕೆರೆಕೊಪ್ಪ, ನಾಗರಾಜ ಸುಣಗಾರ, ಪವನ ಎಚ್.ಎಸ್., ಎಲ್ಲಮ್ಮ ಚಲವಾದಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts