More

    ಆದರ್ಶ ರಾಷ್ಟ್ರನಿರ್ಮಾಣ ನಮ್ಮ ಗುರಿಯಾಗಲಿ

    ಎಲ್ಲರನ್ನೂ ನಮ್ಮವರೆಂದು ಸ್ವೀಕರಿಸಿ, ಯಾರನ್ನೂ ತಿರಸ್ಕರಿಸದೆ, ಧಾರ್ವಿುಕ ದೃಷ್ಟಿಯೊಡನೆ ಭೌತಿಕ-ಆರ್ಥಿಕ ಪ್ರಗತಿಯನ್ನು ಸಮೀಕರಿಸಿಕೊಂಡು, ಎಲ್ಲ ವೈಪರೀತ್ಯ-ಅತಿರೇಕಗಳನ್ನೂ ವರ್ಜಿಸಿ, ದೇಶದ ಸರ್ವಜನರ ಕಲ್ಯಾಣದೆಡೆಗೆ ಮುಂದೆ ಸಾಗಬೇಕಾಗಿದೆ. ಇಂತಹ ನಿಜವಾದ ಭಾರತೀಯತೆಯನ್ನು ನಾವು ಇಂದು ಮೆರೆಯಬೇಕು.

    Amrutha Sinchana ಭಾರತದ ಮೇಲೆ ಕ್ರಿ.ಶ. 1200ರ ನಂತರ ದಂಡೆತ್ತಿ ಬಂದ ಮಹಮ್ಮದೀಯ ದೊರೆಗಳು, ಅದರಲ್ಲೂ ಮುಖ್ಯವಾಗಿ ಮೊಘಲರು ದೇಶದ ಅನೇಕ ದೇವಾಲಯಗಳು, ಧಾರ್ವಿುಕ ಕೇಂದ್ರಗಳು ಹಾಗೂ ಗ್ರಂಥಗಳನ್ನು ನಾಶ ಮಾಡುವ ಮೂಲಕ ಸನಾತನ ಧರ್ಮಕ್ಕೆ ಅತಿ ದೊಡ್ಡ ಹಾನಿಯನ್ನುಂಟು ಮಾಡಿದರು. ಮಾತ್ರವಲ್ಲದೆ, ಬಹಳಷ್ಟು ಜನರನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಆಗ ಹುಟ್ಟಿಕೊಂಡ ಸಿಖ್ ಧರ್ಮವು, ಮಹಮ್ಮದೀಯರ ಮತಾಂತರ ಕ್ರೌರ್ಯಕ್ಕೆ, ಅವರದೇ ಭಾಷೆಯಲ್ಲಿ ಉತ್ತರ ಕೊಡುವ ಮೂಲಕ, ಇಸ್ಲಾಂ ಧರ್ಮದ ವಿಸ್ತರಣೆಗೆ ವಿರಾಮ ಹಾಕಿತು. ಧರ್ಮದ ರಕ್ಷಣೆಗಾಗಿ ಸಂತ-ಸೈನಿಕರನ್ನು ಸಿದ್ಧಗೊಳಿಸುವುದು ಸಿಖ್ ಧರ್ಮದ ದಿಟ್ಟ ಧೋರಣೆಯಾಗಿತ್ತು.

    ಇಷ್ಟೆಲ್ಲ ದಾಳಿ-ಮತಾಂತರಗಳಾದರೂ ಸನಾತನ ಧರ್ಮವು ಜೀವಂತವಾಗಿ ಮುಂದುವರಿಯಲು ಕಾರಣವೆಂದರೆ, ಬಹುತೇಕ ಭಾರತೀಯರ ಹೃದಯಗಳಲ್ಲಿ ದೃಢವಾಗಿ ನೆಲೆಯೂರಿದ್ದ ದೈವಭಕ್ತಿ. ಮುಖ್ಯವಾಗಿ, ರಾಮಾಯಣ- ಮಹಾಭಾರತಗಳ ದೈವೀ ನಾಯಕರಾದ ರಾಮ-ಕೃಷ್ಣರ ಬಗ್ಗೆ ಅಚಲ ಭಕ್ತಿ-ವಿಶ್ವಾಸಗಳನ್ನು ಹೊಂದಿದ್ದ ಲಕ್ಷಾಂತರ ಭಾರತೀಯರು, ಅಲ್ಲದೆ ಪುರಾಣಗಳ ಭಕ್ತಿಪ್ರಚೋದಕ ಕಥೆಗಳಿಂದ ಸ್ಪೂರ್ತಿ ಪಡೆದ ಶಿವ, ವಿಷ್ಣು ಹಾಗೂ ಶಕ್ತಿಯ ಆರಾಧಕರು, ಭಾರತೀಯ ಧರ್ಮಪತಾಕೆಯು ನಿರಂತರವಾಗಿ ಹಾರುತ್ತಿರುವಂತೆ ನೋಡಿಕೊಂಡರು. ಜನರು ಆರಾಧಿಸಲು ಆರಿಸಿಕೊಂಡ ವಿವಿಧ ದೇವ-ದೇವತೆಯರ ಹಾಗೂ ಸಂತಗುರುಗಳ ಅನುಯಾಯಿಗಳಲ್ಲಿ ದೈವಭಕ್ತಿಯು ಅನೇಕ ಪ್ರವಾಹಗಳ ರೂಪದಲ್ಲಿ ಹರಿಯಿತು. ವಿದೇಶೀ ಆಕ್ರಮಣಕಾರರ ಕೆಂಗಣ್ಣಿಗೆ ಗುರಿಯಾಗಿದ್ದ ವಿಗ್ರಹ ಆರಾಧನೆಯ ಪದ್ಧತಿ, ಈ ಎಲ್ಲ ಭಕ್ತಿಪ್ರವಾಹಗಳ ಒಂದು ಸಾಮಾನ್ಯ ಅಂಶವಾಗಿತ್ತು.

    ಕ್ರಿ. ಶ. 1300ರಿಂದ 1600ರವರೆಗೆ, ಅಂದರೆ ಮಹಮ್ಮದೀಯರ ಆಕ್ರಮಣದ ಸಮಯದಲ್ಲಿಯೇ, ದೇಶದಲ್ಲಿ ಹಲವೆಡೆ ಉದಯವಾದ ಅನೇಕ ಭಕ್ತಸಂತರು ಭಕ್ತಿಯ ಪ್ರಬಲ ಚಳವಳಿಯನ್ನು ಪ್ರಾರಂಭಿಸಿದರು. ಹೀಗೆ ಭಕ್ತಿಜಾಗೃತಿಯನ್ನು ಮೂಡಿಸಿದ ಸಂತರ ಪೈಕಿ, ದಕ್ಷಿಣ ಭಾಗದಲ್ಲಿ ರಾಮಾನುಜಾಚಾರ್ಯ, ಮಧ್ವಾಚಾರ್ಯ, ಶಿವಶರಣರು, ನಯನಾರರು ಹಾಗೂ ಆಳ್ವಾರರು ಮತ್ತು ಸ್ವಲ್ಪ ಕಾಲದ ನಂತರ ಆವಿರ್ಭವಿಸಿದ ದಾಸಪಂಥದವರು, ಉತ್ತರ ಭಾಗದಲ್ಲಿ ಕಬೀರದಾಸರು, ರವಿದಾಸರು, ತುಳಸೀದಾಸರು ಹಾಗೂ ಮೀರಾ, ಪೂರ್ವದಲ್ಲಿ ಚೈತನ್ಯ ಮಹಾಪ್ರಭುಗಳಂತಹವರು ಮತ್ತು ಪಶ್ಚಿಮ ಭಾಗದಲ್ಲಿ ಸ್ವಾಮಿ ನಾರಾಯಣ, ಸಂತ ನಾಮದೇವ, ಜ್ಞಾನದೇವ ಮತ್ತು ತುಕಾರಾಮರಂತಹವರು ಅಗ್ರಗಣ್ಯರು. ಇವರೆಲ್ಲರೂ ಸಾರಿದ ಭಕ್ತಿಮಾರ್ಗವು ಮುಖ್ಯವಾಗಿ ದೈ ್ವ ತತ್ವವನ್ನೇ ಪ್ರತಿಪಾದಿಸುತ್ತಿತ್ತು. ಶಂಕರಾಚಾರ್ಯರು ಬೋಧಿಸಿದ್ದ ಅದೈ ್ವ ವೇದಾಂತಕ್ಕಿಂತ ಇದು ಭಿನ್ನವಾಗಿದ್ದರೂ, ಭಕ್ತಿಮಾರ್ಗವು, ಧರ್ಮವನ್ನು ಕ್ಲಿಷ್ಟ ಸಿದ್ಧಾಂತಗಳಿಂದ ಬಿಡುಗಡೆ ಮಾಡಿ, ಎಲ್ಲರೂ ಸುಲಭವಾಗಿ ಅನುಸರಿಸಲು ಸಾಧ್ಯವಾದ, ತಾವು ಪ್ರೀತಿಸಿ ಆಯ್ಕೆಮಾಡಿಕೊಳ್ಳುವ ದೇವ-ದೇವಿಯರನ್ನು ಆರಾಧಿಸುವ ಸರಳ ಮಾರ್ಗವನ್ನು ಪ್ರೋತ್ಸಾಹಿಸಿ ಜನಪ್ರಿಯಗೊಳಿಸಿತು. ಹೀಗೆ ಸನಾತನ ಧರ್ಮದ ಜ್ಯೋತಿಯು ನಂದಿಹೋಗದಂತೆ ನೋಡಿಕೊಳ್ಳುವಲ್ಲಿ ಭಕ್ತಿ ಚಳವಳಿಯು ಮಹತ್ತರ ಪಾತ್ರ ವಹಿಸಿತು. ಈ ಜನಪ್ರಿಯ ಸನಾತನ ಧರ್ಮಕ್ಕೆ ವಿದೇಶೀಯರು ‘ಹಿಂದೂಯಿಸಮ್ ಎಂದು ನಾಮಕರಣ ಮಾಡಿದರು! ಈ ಹೆಸರು ಸನಾತನ ಧರ್ಮ ಅಥವಾ ಹಿಂದೂ ಧರ್ಮಕ್ಕೆ ಸರ್ವಥಾ ಸರಿಯಾದದ್ದಲ್ಲ!

    ಕ್ರಿ. ಶ. 18ನೇ ಶತಮಾನದಲ್ಲಿ ಭಾರತವನ್ನು ಪ್ರವೇಶಿಸಿದ ಬ್ರಿಟಿಷರು, ಭಾರತೀಯರ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು, ಕ್ರೖೆಸ್ತಧರ್ಮವನ್ನು ವಿಸ್ತರಿಸತೊಡಗಿದರು. ಅಲ್ಲದೆ, ಆಧುನಿಕ ಶಿಕ್ಷಣ ಪದ್ಧತಿಯ ಹೆಸರಿನಲ್ಲಿ, ಆಂಗ್ಲ ಭಾಷೆಯನ್ನು ಕಲಿತ ವಿದ್ಯಾವಂತ ಭಾರತೀಯರಲ್ಲಿ ತಮ್ಮ ಸ್ವಂತ ಧರ್ಮದ ಬಗ್ಗೆ ಕೀಳರಿಮೆ ಮೂಡಿಸಲಾರಂಭಿಸಿದರು. ಹೀಗೆ, ಆಗಾಗಲೇ ತನ್ನ ಮೂಲಪ್ರಭೆಯನ್ನು ಕಳೆದುಕೊಂಡು ‘ಹಿಂದೂಯಿಸಮ್ ಎಂದು ಕರೆಯಲ್ಪಟ್ಟು, ತೇಜೋಹೀನವಾಗಿದ್ದ ಸನಾತನ ಧರ್ಮಕ್ಕೆ ಮತ್ತಷ್ಟು ಹಿನ್ನಡೆಯಾಯಿತು.

    ವಿದೇಶೀ ಆಕ್ರಮಣಕಾರರಿಗೆ ‘ಧರ್ಮ’ ಎಂಬುದು ಸ್ಥಳೀಯ ಜನರ ನಿಷ್ಠೆ ಮತ್ತು ವಿಧೇಯತೆಯನ್ನು ಸ್ಥಿರಗೊಳಿಸುವ ಒಂದು ಸಾಧನವಾಗಿತ್ತೇ ವಿನಃ, ಅವರ ಒಂದು ಉದ್ಧಾರ ಮಾರ್ಗವಾಗಿರಲಿಲ್ಲ. ಆದ್ದರಿಂದ ಅವರು ತಮ್ಮ ಧರ್ಮಪ್ರಚಾರ ಕಾರ್ಯದಲ್ಲಿಯೂ, ತಮ್ಮ ವಸಾಹತುಗಳನ್ನು ವಿಸ್ತರಿಸಲು ‘ವಿಭಜಿಸಿ ಆಳು’ (ಈಜಿಡಜಿಛಛಿ ಚ್ಞಛ r್ಝ) ಎಂಬ ಧೋರಣೆಯನ್ನೇ ಅನುಸರಿಸಿದರು. ಈ ಹೊತ್ತಿಗೆ ಭಾರತದಲ್ಲಿ ಹಿಂದೂಗಳನ್ನು ಬಿಟ್ಟರೆ, ಹೆಚ್ಚಿನ ಸಂಖ್ಯೆಯಲ್ಲಿದ್ದವರು ಮುಸ್ಲಿಂರೇ. ಈ ಎರಡು ಜನಾಂಗಗಳನ್ನು ವಿಭಜಿಸಿ, ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿ ಕಟ್ಟುವುದನ್ನೇ ಬ್ರಿಟಿಷರು ತಮ್ಮ ಆಳುವ ದಾರಿಯನ್ನಾಗಿ ಮಾಡಿಕೊಂಡರು. ಹೀಗೆ ಮಾಡುತ್ತ ಅವರು ದೇಶದಲ್ಲಿ ಅಲ್ಲಲ್ಲಿ ಭುಗಿಲೇಳುತ್ತಿದ್ದ ಸ್ವಾತಂತ್ರ್ಯ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸಿದರು. ಅಲ್ಲದೆ, ಆಗ ನಡೆಯುತ್ತಿದ್ದ ಜಾಗತಿಕ ಯುದ್ಧಗಳೂ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರಬಲವಾಗಿ ಕಾಡುತ್ತಿದ್ದವು.

    ಶಂಕರಾಚಾರ್ಯರ ನಂತರ, ಸನಾತನ ಧರ್ಮವನ್ನು ವೇದಾಂತ ತತ್ವಗಳ ಮೂಲಕ ಜಗತ್ತಿನಲ್ಲಿ ಪ್ರತಿಪಾದಿಸಿ, ಪುನರುಜ್ಜೀವನಗೊಳಿಸಿದವರು, ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಬೆಳಕಿಗೆ ಬಂದ ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸ್ವಾಮಿ ವಿವೇಕಾನಂದರು. ಉದಾತ್ತ ವೇದಾಂತ ತತ್ವಗಳನ್ನು ಬೋಧಿಸಿ, ಅಂದು ಸಮಾಜದಲ್ಲಿ ಪ್ರಬಲವಾಗಿ ಬೆಳೆದಿದ್ದ ಧಾರ್ವಿುಕ ಕಂದಾಚಾರಗಳ ಪ್ರಾಧಾನ್ಯವನ್ನು ಕುಗ್ಗಿಸಿದ್ದು ಮಾತ್ರವಲ್ಲದೆ, ಧರ್ಮಕ್ಕೆ ಜೀವಕಾರುಣ್ಯ ಮತ್ತು ಜನತಾಸೇವೆಯ ಮೆರುಗನ್ನು ನೀಡಿದರು.

    ಹಿಂದೂ ಧರ್ಮದ ಬಗ್ಗೆ ಜಗತ್ತಿನ ಇತಿಹಾಸಕಾರರು ಹಲವು ರೀತಿಯ ವಿಶ್ಲೇಷಣೆಗಳನ್ನು ನೀಡಿದ್ದಾರೆ. ಈ ದಿಶೆಯಲ್ಲಿ ಆಧುನಿಕ ಭಾರತದ ನಾಯಕರೂ ಕೆಲವು ವಿಶ್ಲೇಷಣೆಗಳನ್ನು ನೀಡಿದ್ದಾರೆ. ಹಿಂದುತ್ವವೆಂದರೆ ಕೇವಲ ಒಂದು ಧಾರ್ವಿುಕ ಸಮೂಹವು ಮಾತ್ರವಲ್ಲ, ಅದು ಭಾರತೀಯ ರಾಷ್ಟಿ›ೕಯತೆಯನ್ನು ನಿರೂಪಿಸುತ್ತದೆಯೆಂಬುದು ಇತ್ತೀಚೆಗೆ ಹೆಚ್ಚೆಚ್ಚು ಎದ್ದು ಕಾಣುತ್ತಿರುವ ಒಂದು ಪ್ರಬಲ ವಾದವಾಗಿದೆ. 1920ರಲ್ಲಿ ವಿನಾಯಕ ದಾಮೋದರ ಸಾವರ್ಕರ್, ‘ಯಾರು ಭಾರತ ದೇಶವನ್ನು ತಮ್ಮ ‘ಪಿತೃಭೂಮಿ’ಯೆಂದು, ಅದಕ್ಕಿಂತಲೂ ಮುಖ್ಯವಾಗಿ ತಮ್ಮ ‘ಪುಣ್ಯಭೂಮಿ’ (ಏಟ್ಝಢ ಔಚ್ಞಛ) ಎಂದು ಪರಿಗಣಿಸುತ್ತಾರೆಯೋ, ಅವರೆಲ್ಲರೂ ಹಿಂದೂಗಳು’ ಎಂದು ಪ್ರತಿಪಾದಿಸಿದರು. ಈ ಪ್ರತಿಪಾದನೆಯಲ್ಲಿ ಮೊದಲ ಅಂಶವಾದ ‘ಭಾರತ ನಮ್ಮ ಪಿತೃಭೂಮಿ’ ಎನ್ನುವುದನ್ನು ಎಲ್ಲ ಧರ್ವಿುಯರೂ ಒಪ್ಪಿಕೊಳ್ಳುವುದು ಅಷ್ಟು ಕಷ್ಟವಾಗಲಿಲ್ಲ. ಏಕೆಂದರೆ, ಎಲ್ಲರೂ ಈ ದೇಶದಲ್ಲಿ ಹುಟ್ಟಿದವರೇ. ಆದರೆ, ಭಾರತ ನಮ್ಮ ಪುಣ್ಯಭೂಮಿ ಎನ್ನುವುದನ್ನು ಎಲ್ಲ ಧರ್ವಿುಯರೂ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸನ್ನಿವೇಶವನ್ನು ‘ಮತಬ್ಯಾಂಕ್ ರಾಜಕೀಯ’ವು ತೀವ್ರವಾಗಿ ಹದಗೆಡಿಸಿತು.

    ಸ್ವಾತಂತ್ರ್ಯವನ್ನು ಪಡೆದ ನಂತರ, ಭಾರತವು ತಾನು ಒಂದು ‘ಜಾತ್ಯಾತೀತ ಗಣರಾಜ್ಯ’ವೆಂದು ಘೊಷಿಸಿ, ಎಲ್ಲರಿಗೂ ಧಾರ್ವಿುಕ ಸ್ವಾತಂತ್ರ್ಯವನ್ನು ನೀಡಿ, ಈ ಪವಿತ್ರ ಭೂಮಿಯಲ್ಲಿ ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸಲಾಗುತ್ತದೆಯೆಂದು ಸಾರಿತು. ಆದರೆ, ಸ್ವಾತಂತ್ರಾ್ಯನಂತರದ ದಶಕಗಳಲ್ಲಿ, ದೇಶದ ನಾಯಕತ್ವದ ಗಮನವು ಸಂಪೂರ್ಣವಾಗಿ ಕೇವಲ ಭೌತಿಕ-ಆರ್ಥಿಕ ಬೆಳವಣಿಗೆಯ ಮೇಲೆ ಕೇಂದ್ರೀಕೃತವಾಯಿತು. ಇದನ್ನು ಸಾಧಿಸಲು ಜಾತ್ಯಾತೀತ ಹಾಗೂ ಸಾಮಾಜಿಕ ಶಿಕ್ಷಣವೇ ಸರಿಯಾದ ಮಾರ್ಗವೆಂದು ಬಗೆದ ಸರ್ಕಾರವು, ಧಾರ್ವಿುಕ, ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಹೀನವಾದ ಬ್ರಿಟಿಷ್ ಶಿಕ್ಷಣವನ್ನೇ ಶಾಲಾ-ಕಾಲೇಜುಗಳಲ್ಲಿ ಮುಂದುವರಿಸಿತು. ಧಾರ್ವಿುಕ ಬೋಧನೆಗಳು ಕೇವಲ ಧಾರ್ವಿುಕ ಶಾಲೆ ಹಾಗೂ ಕೇಂದ್ರಗಳಿಗೆ ಸೀಮಿತವಾದವು. ಶತಶತಮಾನಗಳ ಕಾಲ ಧಾರ್ವಿುಕ ಸಿದ್ಧಾಂತಗಳ ಸುತ್ತ ಕೇಂದ್ರೀಕೃತವಾಗಿದ್ದ ನಮ್ಮ ದೇಶವು ಕೇವಲ ಆರ್ಥಿಕ ಪ್ರಗತಿಯನ್ನೇ ತನ್ನ ದೃಷ್ಟಿಯಲ್ಲಿಟ್ಟುಕೊಂಡು, ಎಲ್ಲ ಧಾರ್ವಿುಕ ಶಿಕ್ಷಣವನ್ನೂ ತನ್ನ ‘ಜಾತ್ಯಾತೀತ’ ಶಿಕ್ಷಣ ಪದ್ಧತಿಯಿಂದ ದೂರಮಾಡಿತು! ಇದರ ದುಷ್ಟ ಪರಿಣಾಮಗಳನ್ನು ಇಂದು ನಾವು ನಮ್ಮ ಸಮಾಜದಲ್ಲಿ, ಅದರಲ್ಲೂ ಮುಖ್ಯವಾಗಿ ಯುವಜನತೆಯ ಜೀವನ ರೀತಿ-ನೀತಿಗಳಲ್ಲಿ ಕಾಣುತ್ತಿದ್ದೇವೆ! ಕಳೆದ ಎರಡು-ಮೂರು ದಶಕಗಳಲ್ಲಿ, ಜನಸಾಮಾನ್ಯರನ್ನೂ ಒಳಗೊಂಡು ದೇಶದ ಜನತೆಯಲ್ಲಿ, ರಾಜಕೀಯ-ಸಾಮಾಜಿಕ-ಆರ್ಥಿಕ ಸಂಘರ್ಷಗಳ ಜೊತೆಜೊತೆಯಲ್ಲಿಯೇ, ಧಾರ್ವಿುಕ ಶ್ರದ್ಧೆ ಹಾಗೂ ಉತ್ಸಾಹಗಳೂ ಮತ್ತೆ ಏರುಗತಿಯಲ್ಲಿರುವುದು ಕಂಡುಬರುತ್ತಿದೆ. ಜನಮನದಲ್ಲಿ ಅವುಗಳು ಮತ್ತೆ ಸ್ಥಾನವನ್ನು ಪಡೆದುಕೊಳ್ಳುತ್ತಿವೆ. ಆದರೆ, ಈಗ ನಾವು ಹಿಂದೆ ಮಾಡಿದ ತಪು್ಪಗಳನ್ನು ಮತ್ತೆ ಮಾಡದೆ, ಸರಿಯಾದ ದಿಶೆಯಲ್ಲಿ ಮುನ್ನಡೆಯಬೇಕಾಗಿದೆ.

    ಎಲ್ಲರನ್ನೂ ನಮ್ಮವರೆಂದು ಸ್ವೀಕರಿಸಿ, ಯಾರನ್ನೂ ತಿರಸ್ಕರಿಸದೆ, ಧಾರ್ವಿುಕ ದೃಷ್ಟಿಯೊಡನೆ ಭೌತಿಕ-ಆರ್ಥಿಕ ಪ್ರಗತಿಯನ್ನು ಸಮೀಕರಿಸಿಕೊಂಡು, ಎಲ್ಲ ವೈಪರೀತ್ಯ-ಅತಿರೇಕಗಳನ್ನೂ ವರ್ಜಿಸಿ, ದೇಶದ ಸರ್ವಜನರ ಕಲ್ಯಾಣದೆಡೆಗೆ ಮುಂದೆ ಸಾಗಬೇಕಾಗಿದೆ. ಇಂತಹ ನಿಜವಾದ ಭಾರತೀಯತೆಯನ್ನು ನಾವು ಇಂದು ಮೆರೆಯಬೇಕು. ಧಾರ್ವಿುಕ ಪುನರುತ್ಥಾನದ ಮೂಲಕ ನಾವು, ಸರ್ವರಿಗೂ, ಅದರಲ್ಲೂ ಮುಖ್ಯವಾಗಿ, ನವಪೀಳಿಗೆಯ ಜನಾಂಗಕ್ಕೆ ಸಾಮಾಜಿಕ ನ್ಯಾಯ ಮತ್ತು ಅರ್ಥಿಕ ಹಾಗೂ ಅವಕಾಶಗಳ ಸಮಾನತೆಯನ್ನು ಸಾಧಿಸಬೇಕಾಗಿದೆ. ಎಲ್ಲ ವರ್ಗಗಳ ಸಂಘಟಿತ ಪ್ರಯತ್ನದೊಂದಿಗೆ ಇಂತಹ ಭವ್ಯ ಭಾರತವನ್ನು ನಾವು ಇಂದು ನಿರ್ವಿುಸಬಹುದಾಗಿದೆ.

    ಭಾರತ ದೇಶದಲ್ಲಿ, ‘ಧರ್ಮ’ವೆಂದರೆ, ಅದರ ಮೂಲ ಉದ್ದೇಶಕ್ಕನುಗುಣವಾಗಿ ಸರ್ವರನ್ನೂ ಒಂದೇ ‘ವಿಶ್ವಕುಟುಂಬ’ವೆಂದು ಒಗ್ಗೂಡಿಸುವ ಒಂದು ಸಾಧನವಾಗಬೇಕೆ ಹೊರತು, ಜನಸಾಮಾನ್ಯರ ಅಫೀಮು (ಟಟಜ್ಠಿಞ ಟ್ಛ ಠಿಜಛಿ ಞಚಠಠಛಿಠ) ಆಗಬಾರದು ಅಥವಾ ಅದು ರಾಜಕೀಯ ಸಿದ್ಧಾಂತಗಳಿಗೆ ಬಲಿಪಶುವೂ ಆಗಬಾರದು. ಆದ್ದರಿಂದ ನಾವೆಲ್ಲರೂ ಯಾವುದೇ ಬೇಧಭಾವವಿಲ್ಲದೆ ‘ವಸುಧೈವ ಕುಟುಂಬಕಂ’-‘ಒಂದು ಜಗತ್ತು, ಒಂದು ಕುಟುಂಬ’ವೆಂಬ ಉನ್ನತ ಉದಾರ ಧ್ಯೇಯದೊಂದಿಗೆ, ಸರ್ವಧರ್ಮ ಸಮನ್ವಯ ಹಾಗೂ ಸರ್ವಾಗಿಣ ಪ್ರಗತಿಗಳನ್ನು ಸಾಧಿಸಿದ, ಆದರ್ಶ ರಾಷ್ಟ್ರನಿರ್ವಣವನ್ನೇ ಗುರಿಯನ್ನಾಗಿಟ್ಟುಕೊಂಡು ನಿರಂತರ ದುಡಿಯೋಣ!

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಹೊಸ ಕ್ರಿಮಿನಲ್ ಅಪರಾಧ ಕಾನೂನಿನಡಿ ದಿನವೇ ರಾಜ್ಯಾದ್ಯಂತ 63 ಎಫ್​ಐಆರ್​ ದಾಖಲು

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts