More

    ಪ್ರತಿಯೊಬ್ಬರೂ ಸಮಾಜದ ಋಣ ತೀರಿಸಲಿ

    ಹುಬ್ಬಳ್ಳಿ : ಪ್ರತಿಯೊಬ್ಬರೂ ಈ ಭೂಮಿಗೆ ಬಂದ ಬಳಿಕ ಹೆತ್ತವರ, ಕಲಿಸಿದ ಗುರುವಿನ ಋಣ ಹಾಗೂ ಸಮಾಜದ ಋಣವನ್ನು ತೀರಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ

    ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

    ಇಲ್ಲಿನ ಅಮರಗೋಳ ಎಪಿಎಂಸಿ ಆವರಣದ ವ್ಯಾಪಾರಸ್ಥರ ಸಂಘದ ಸಭಾಭವನದಲ್ಲಿ ಜನಪದರು, ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಜೀವಿ ಕಲಾ ಬಳಗ ಹಾಗೂ ಜಕ್ಕನಗೌಡರ ಕುಟುಂಬದವರು ಹಮ್ಮಿಕೊಂಡಿದ್ದ ಸಂಗಮೇಶ ಜಕ್ಕನಗೌಡ್ರ ಸೇವಾ ನಿವೃತ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.

    ಬೈರನಹಟ್ಟಿ ದೊರೆಸ್ವಾಮಿ ಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ವಹಿಸಿಕೊಂಡಿದ್ದರು. ಪರಿಸರ ಪ್ರೇಮಿ ಚೆನ್ನು ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ. ಜಂಗ್ಲಪ್ಪಗೌಡರ, ಎಂ.ಸಿ. ಸೂರಗೊಂಡ ಅಶೋಕ ಬಾಳಿಕಾಯಿ, ಬಸವರಾಜ ಯಕಲಾಸಪೂರ, ಅಜ್ಜಪ್ಪ ಹೊರಕೇರಿ ಅತಿಥಿಗಳಾಗಿದ್ದರು.

    ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೆ.ಎಸ್. ಪಲ್ಲೆದ, ಹನುಮಂತಪ್ಪ ಉಳ್ಳಿ, ಶಾಂತರಾಜ, ಜಾನಪದ ಕಲಾವಿದ ಕುಬೇರಗೌಡ, ಮುರಳಿ ಕುಮಾರಿ, ಪವಿತ್ರ ಕುರ್ತಕೋಟಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಎ.ಬಿ. ಕೊಪ್ಪದ ಸ್ವಾಗತಿಸಿದರು. ಗದಿಗಯ್ಯ ಹಿರೇಮಠ ನಿರೂಪಿಸಿದರು. ಡಾ. ರಾಮು ಮೂಲಗಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts