More

    ಲೆಮನ್​ ಜ್ಯೂಸ್ ಕುಡಿಯುವಾಗ ಅಪ್ಪಿತಪ್ಪಿ ಈ ತಪ್ಪನ್ನು ಮಾಡ್ಬೇಡಿ​… ಮಾಡಿದ್ರೆ ಆರೋಗ್ಯಕ್ಕೆ ಡೇಂಜರ್​!

    ನಿಂಬೆ ರಸ ಅಥವಾ ಲೆಮನ್​ ಜ್ಯೂಸ್​ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಶಾಖವನ್ನು ನಿವಾರಿಸಲು ಲೆಮೆನ್​ ಜ್ಯೂಸ್​ ಅನ್ನು ಹೆಚ್ಚು ಸೇವಿಸಲಾಗುತ್ತದೆ. ಇದು ದೇಹವನ್ನು ಸದಾ ಹೈಡ್ರೇಟ್ ಆಗಿ ಇಡುತ್ತದೆ. ಅಲ್ಲದೆ, ಇದು ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

    ಆದರೆ ಹೆಚ್ಚಾಗಿ ಲೆಮನ್ ಜ್ಯೂಸ್​ ಕುಡಿಯುವುದರಿಂದ ಕೆಲವೊಂದು ಅಡ್ಡಪರಿಣಾಮಗಳು ಸಹ ಉಂಟಾಗಬಹುದು ಎಂದು ನಿಮಗೆ ತಿಳಿದಿದೆಯೇ? ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಸಿಕ್ಕಾಪಟ್ಟೆ ಲೆಮನ್​ ಜ್ಯೂಸ್​ ಕುಡಿದರೆ ಕೆಲವು ಅಡ್ಡಪರಿಣಾಮಗಳು ಸಹ ಬೀರಲಿವೆ. ಆ ಅಡ್ಡ ಪರಿಣಾಮಗಳೇನು ಎಂಬುದನ್ನು ನಾವೀಗ ತಿಳಿಯೋಣ.

    * ಹೆಚ್ಚು ಲೆಮನ್​ ಜ್ಯೂಸ್​ ಸೇವಿಸುವುದರಿಂದ ಎದೆಯುರಿ ಉಂಟಾಗುತ್ತದೆ. ಏಕೆಂದರೆ ಇದು ಪೆಪ್ಸಿನ್ ಅನ್ನು ಸಕ್ರಿಯಗೊಳಿಸುತ್ತದೆ. ಇದು ಪ್ರೋಟೀನ್ ಅನ್ನು ಒಡೆಯುವ ಕಿಣ್ವವಾಗಿದೆ. ಇದಿಷ್ಟೇ ಅಲ್ಲದೆ, ಅತಿಯಾದ ಲೆಮನ್​ ಜ್ಯೂಸ್​ ಸೇವನೆಯು ಪೆಪ್ಟಿಕ್ ಹುಣ್ಣುಗೆ ಕಾರಣವಾಗಬಹುದು. ಇದು ಹೆಚ್ಚು ಅಪಾಯಕಾರಿ ಕೂಡ ಹೌದು.

    * ಲೆಮನ್​ ಜ್ಯೂಸ್​ ಅನ್ನು ಆಗಾಗ ಕುಡಿಯುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಏಕೆಂದರೆ, ನಿಂಬೆ ನೀರು ಕುಡಿಯುವುದರಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿರುವ ನೀರು ಹೊರಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ, ದೇಹದಲ್ಲಿರುವ ಅನೇಕ ಎಲೆಕ್ಟ್ರೋಲೈಟ್‌ಗಳು ಮತ್ತು ಸೋಡಿಯಂನಂತಹ ಅಂಶಗಳು ಮೂತ್ರದ ಮೂಲಕ ಹೊರಬರುತ್ತವೆ. ಇದು ನಿರ್ಜಲೀಕರಣದ ಸಮಸ್ಯೆಗೆ ಕಾರಣವಾಗುತ್ತದೆ. ಹೆಚ್ಚು ಲೆಮನ್​ ಜ್ಯೂಸ್​ ಸೇವಿಸುವುದರಿಂದ ಪೊಟ್ಯಾಸಿಯಮ್ ಕೊರತೆ ಉಂಟಾಗುತ್ತದೆ.

    * ಲೆಮನ್​ ಜ್ಯೂಸ್​ ಅನ್ನು ಹೆಚ್ಚಾಗಿ ಸೇವಿಸಿದರೆ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ರಕ್ತದಲ್ಲಿನ ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಅಪಾಯಕಾರಿ ಎನ್ನುತ್ತಾರೆ ತಜ್ಞರು. ಕೆಲವು ಸಂದರ್ಭಗಳಲ್ಲಿ ಆಂತರಿಕ ಅಂಗಗಳಿಗೆ ಹಾನಿಯಾಗುವ ಅಪಾಯವೂ ಇದೆ.

    * ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಆಕ್ಸಲೇಟ್ ಕೂಡ ಇದೆ. ಇದನ್ನು ಹೆಚ್ಚು ಸೇವಿಸುವುದರಿಂದ ಹರಳುಗಳ ರೂಪದಲ್ಲಿ ದೇಹದಲ್ಲಿ ಶೇಖರಣೆಯಾಗಿ, ಮೂತ್ರಪಿಂಡದ ಕಲ್ಲುಗಳು ರಚನೆಯಾಗುವ ಅಪಾಯವಿದೆ.

    * ಹೆಚ್ಚು ಲೆಮನ್​ ಜ್ಯೂಸ್​ ಕುಡಿಯುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ನಿಂಬೆ ಆಮ್ಲೀಯತೆಯನ್ನು ಹೊಂದಿದೆ. ಇದು ಮೂಳೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

    * ಲೆಮನ್​ ಜ್ಯೂಸ್​ ಅನ್ನು ಅತಿಯಾಗಿ ಸೇವಿಸುವುದರಿಂದ ಅಸಿಡಿಟಿ ಉಂಟಾಗುತ್ತದೆ. ನಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ಆಮ್ಲವಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗಿ ಅಸಿಡಿಟಿ ಉಂಟಾಗುತ್ತದೆ.

    * ಟಾನ್ಸಿಲ್ (ಬಾಯಿಯ ಹಿಂಭಾಗದಲ್ಲಿ ಮತ್ತು ಗಂಟಲಿನ ಮೇಲ್ಭಾಗದಲ್ಲಿ ಇರುವ ದುಗ್ಧರಸ ಗ್ರಂಥಿಗಳು) ಸಮಸ್ಯೆ ಇರುವವರು ಲೆಮನ್​ ಜ್ಯೂಸ್​ ಕುಡಿಯಬಾರದು. ಏಕೆಂದರೆ, ತುಂಬಾ ಹಾನಿಕಾರಕ ಎಂದು ಅಧ್ಯಯನಗಳು ಹೇಳಿವೆ. ಸಂಶೋಧನೆಯ ಪ್ರಕಾರ, ಹೆಚ್ಚು ನಿಂಬೆ ನೀರನ್ನು ಸೇವಿಸುವುದರಿಂದ ಗಂಟಲು ನೋವು ಉಂಟಾಗುತ್ತದೆ.

    ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ . ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    ನನ್ನ ಕೊನೇ ಉಸಿರಿರೋವರೆಗೂ ಆತನನ್ನು ಮರೆಯಲ್ಲ! ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕಣ್ಣೀರಿಟ್ಟ ಇರ್ಫಾನ್​ ಪಠಾಣ್​

    ರೋಹಿತ್, ವಿರಾಟ್ ಬೆನ್ನಲ್ಲೇ ಟಿ20 ಕ್ರಿಕೆಟ್​ಗೆ ಮತ್ತೊಬ್ಬ ಸ್ಟಾರ್​ ಆಟಗಾರ ಗುಡ್​ಬೈ! ಫ್ಯಾನ್ಸ್ ಶಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts