More

    ನಗರದಲ್ಲಿ ಕೊಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ

    ಗದಗ: ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ.ವೆಂಕಟೇಶ ರಾಥೋಡ್ ಇವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳ ನಗರದ ಕಲಾಮಂದಿರ ರಸ್ತೆ,ಹಳೆ ಬಸ್ ನಿಲ್ದಾಣ, ಪಾಟೇಲ ರೋಡ, ತಿಲಕ್ ಪಾರ್ಕ,ಕೆ.ಸಿ.ರಾಣಿ ರೋಡ,ಹಾತಲಗೇರಿ ನಾಕಾ ಗದಗದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೋಟ್ಪಾ ಕಾಯ್ದೆ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು.

    ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003 ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಅ ಸ್ಥಳದ ಮಾಲೀಕರ ಜವಾಬ್ದಾರಿಯಾಗಿರುತ್ತದೆ, ಕೆಲವು ಅಂಗಡಿಗಳ ಹಿಂದೆ ಧೂಮಪಾನ ಅನಧಿಕೃತ ಅಡ್ಡಾಗಳನ್ನು ಮಾಡಿಕೊಂಡಿರುವವರ ವಿರುದ್ಧ ಕೂಡಾ ಕ್ರಮ ವಹಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದರಿಂದ ಸಾರ್ವಜನಿಕರೊಂದಿಗೆ ಆ ಸ್ಥಳದ ಮಾಲಿಕ ಕೆಲಸಗಾರರ ಆರೋಗ್ಯದ ಮೇಲೆ ಪರಿಣಾಮಬೀರುತ್ತಿರುವದು ಕಂಡುಬಂದಿದೆ, ತಂಬಾಕು ಉತ್ಪನ್ನಗಳ ಕಾಣುವಂತೆ ಪ್ರದರ್ಶೀಸುವದು, ಅವುಗಳ ಕುರಿತ ಜಾಹಿರಾತು ನಿಷೇಧ, 18 ವರ್ಷದೋಳಗಿನವರಿಗೆ ತಂಬಾಕು ನಿಷೇಧ ಈ ಕುರಿತ ನಾಮಫಲಕ ಬಿತ್ತರಿಸುವದು ,ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ 85% ರಷ್ಟು ಅರೋಗ್ಯ ಎಚ್ಚರಿಕೆ ಚಿನ್ಹೆ ಕಡ್ಡಾಯ, ಶಾಲಾಕಾಲೇಜು ಸುತ್ತ 100ಗಜದವರೆಗೆ ತಂಬಾಕು ನಿಷೇಧ ಎಲ್ಲಾ ಶಾಲಾಕಾಲೇಜುಗಳ ತಂಬಾಕು ಮುಕ್ತವನ್ನಾಗಿಸುವ ನಿಟ್ಟಿನಲ್ಲಿ 100 ಗಜದೊಳಗಿನ ತಂಬಾಕು ಮಾರಾಟ ಬಳಕೆ ಸಂಪೂರ್ಣ ನಿಷೇಧಗೊಳಿಸಲಾಗಿದ್ದು ಮುಂದಿನ ದಿನಗಳಲ್ಲಿ ಅಂತಹ ಪ್ರಕರಣ ಕಂಡುಬಂದಲ್ಲಿ ಕಠಿಣ ಕಾನೂನು ರೀತಿ ಕ್ರಮಕೈಗೊಳ್ಳಲಾಗುವದು ಅದಕ್ಕೆ ಅವರೇ ನೇರ ಹೊಣೆಗಾರರಾಗುವರೆಂದು ಡಾ. ವೆಂಕಟೇಶ ರಾಠೋಡ್ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳು ತಿಳಿಸಿದರು.  
    ಈ ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಗೋಪಾಲ ಸುರಪುರ,      ಆಹಾರ ಸುರಕ್ಷತಾ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಟಿ.ಎಸ್.ಪವಾರ, ಪೊಲೀಸ್ ಇಲಾಖೆಯ   ಜೆ.ಹೆಚ್.ಅಳಗುಂದಿ. ಸೋಮಶೇಖರ,  ಎಂ.ಎಂ.ಮಖಾಂದರ, ಶ್ರೀಮತಿ ಹೆಚ್,ಎಸ್,ಜೋಗರ ಸಿಡಿಪಿಓ, ಆರೋಗ್ಯ ಇಲಾಖೆಯ ವೈ,ಎನ್,ಕಡೆಮನಿ, ಹಿರಿಯ ನಿರೀಕ್ಷಣಾಧಿಕಾರಿಗಳು ಗದಗ, ಶ್ರಿಮತಿ ಬಸಮ್ಮ ಚಿತ್ತರಗಿ ಸಾಮಾಜಿಕ ಕಾರ್ಯಕರ್ತೆ,  ಶಿವಕುಮಾರ ಬಗಾಡೆ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts