More

    ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

    ಕೊಪ್ಪಳ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಅವ್ಯವಹಾರ ಖಂಡಿಸಿ ಬಿಜೆಪಿ ನಾಯಕರು, ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಡಿಸಿ ಕಚೇರಿಗೆ ಮುತ್ತಿಗೆಗೆ ಯತ್ನಿಸಿ, ರಾಜ್ಯ ಸರ್ಕಾರದ ವಿರುದ್ಧ ೋಷಣೆ ಕೂಗಿದರು. ಜಿಲ್ಲಾಡಳಿತ ಭವನ ಅತಿಕ್ರಮ ಪ್ರವೇಶ ಮಾಡಿದ್ದಕ್ಕೆ ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಟ್ಟುಕಳಿಸಿದರು.

    ಅಹಿಂದ ವರ್ಗದ ನಾಯಕನೆಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದಾರೆ. ಬಡ ಜನರಿಗೆ ತಲುಪಬೇಕಾದ 187 ಕೋಟಿ ರೂ.ಗಳನ್ನು ಏಜೆಂಟ್‌ಗಳ ಖಾತೆಗೆ ಹಾಕಲಾಗಿದೆ. ಯಾವುದೇ ಯೋಜನೆ ರೂಪಿಸದೇ ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಸರ್ಕಾರದ ಬೊಕ್ಕಸ ಕದಿಯುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇಷ್ಟೆಲ್ಲ ಅವ್ಯವಹಾರ ನಡೆದರೂ ತಮಗೇನೂ ಗೊತ್ತಿಲ್ಲವೆಂಬಂತೆ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ವರ್ತಿಸುತ್ತಿದ್ದು, ಅವರ ಪಾಲೂ ಇದರಲ್ಲಿ ಇದೆ ಎಂದು ಕಿಡಿ ಕಾರಿದರು. ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಕೇವಲ ಬಿ.ನಾಗೇಂದ್ರ ರಾಜೀನಾಮೆಯಿಂದ ಪ್ರಕರಣ ಮುಕ್ತಾಯವಾಗುವುದಿಲ್ಲ. ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತ ಸಿಎಂ ಸಿದ್ದರಾಮಯ್ಯ ಸಹ ರಾಜೀನಾಮೆ ನೀಡಬೇಕು. ಇದರಿಂದ ತನಿಖೆಗೆ ಸಹಾಯವಾಗಲಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು. ಅಭಿವೃದ್ಧಿ ಮಾಡದೆ ಜನರಿಗೆ ಮೋಸ ಮಾಡುತ್ತಿರುವುದಕ್ಕೆ ಕ್ಷಮೆ ಕೇಳಬೇಕು. ಅಗತ್ಯ ವಸ್ತುಗಳ ಬೆಲೆ ಏರಿಸಿ, ಅದರಲ್ಲಿನ ಹಣ ಜನರಿಗೆ ನೀಡಿ ತಾವು ಕೊಟ್ಟಿದ್ದೇವೆಂದು ಹೇಳಿಕೊಳ್ಳಲು ಇವರಿಗೆ ನಾಚಿಕೆಯಾಗಬೇಕೆಂದು ಲೇವಡಿ ಮಾಡಿದರು.

    ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಶಾಸಕ ಗಾಲಿ ಜನಾರ್ದನ ರೆಡ್ಡಿ, ವಿಪ ಸದಸ್ಯೆ ಹೇಮಲತಾ ನಾಯಕ ಇತರ ನಾಯಕರು ಮಾತನಾಡಿ ಕಿಡಿ ಕಾರಿದರು. ನಗರದ ಅಶೋಕ ವೃತ್ತದಿಂದ ಆರಂಭವಾದ ಮೆರವಣಿಗೆ ಡಿಸಿ ಕಚೇರಿವರೆಗೆ ಸಾಗಿತು. ಡಿಸಿ ಕಚೇರಿ ಬಳಿ ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತ ಭವನ ಎದುರು ಬ್ಯಾರಿಕೇಡ್ ಮುಂದೆ ಕುಳಿತು ಧರಣಿ ನಡೆಸಿದರು. ಪೊಲೀಸರು ಒಳಬಿಡದಿದ್ದಕ್ಕೆ ಅವರ ವಿರುದ್ಧವೂ ೋಷಣೆ ಕೂಗಿದರು. ಬ್ಯಾರಿಕೇಡ್ ಮೇಲೆ ಹತ್ತಿದ ಜನಾರ್ದನ ರೆಡ್ಡಿ, ನವೀನ ಗುಳಗಣ್ಣವರ ಇತರರು ಪೊಲೀಸರ ವಿರೋಧದ ನಡುವೆಯೂ ಒಳ ನುಗ್ಗಿದರು.

    ಒಳ ತೆರಳುತ್ತಲೇ ಹಿಂದೆ ಓಡಿದ ಪೊಲೀಸರು ಜಿಲ್ಲಾಡಳಿತ ಭವನದ ಮುಖ್ಯ ದ್ವಾರ ಮುಚ್ಚಿಸಿ ಪ್ರತಿಭಟನಕಾರರು ಒಳ ಹೋಗುವುದನ್ನು ತಡೆದರು. ಅಲ್ಲಿಯೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ಮುಂದುವರಿಸಲಾಯಿತು. ಬಳಿಕ ಪ್ರತಿಭಟನಕಾರರು ವಶಕ್ಕೆ ಪಡೆದ ಪೊಲೀಸರು, ದೂರ ಕೊಂಡೊಯ್ದು ನಂತರ ಬಿಡುಗಡೆ ಮಾಡಿದರು. ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಪ್ರಮುಖರಾದ ಡಾ.ಬಸವರಾಜ ಕ್ಯಾವಟರ್, ವಿರೂಪಾಕ್ಷಪ್ಪ ಸಿಂಗನಾಳ, ಬಿ.ಎಚ್.ಎಂ.ತಿಪ್ಪೆರುದ್ರಸ್ವಾಮಿ, ಗಣೇಶ ಹೊರತಟ್ನಾಳ, ಕೆ.ಜಿ.ಕುಲಕರ್ಣಿ, ವಾಣಿಶ್ರೀ, ಮಧುರಾ ಕರ್ಣಂ, ಶೋಭಾ ನಗರಿ, ಕೀರ್ತಿ ಪಾಟೀಲ್, ಗೀತಾ ಮುತ್ತಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts