More

    ಕೊನಾಯಕನಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ರೈತ ಸಾವು

    ಹೊನ್ನಾಳಿ: ತಾಲೂಕಿನ ಕೊನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಮೆಕ್ಕೆಜೋಳಕ್ಕೆ ನೀರು ಹಾಯಿಸಲು ತೆರಳಿದ್ದ ರೈತನೊಬ್ಬ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಗ್ರಾಮದ ಕೃಷ್ಣಪ್ಪ (50) ಮೃತ ದುರ್ದೈವಿ. ಕೃಷ್ಣಪ್ಪ ತನ್ನ ಪತ್ನಿಯ ಅಕ್ಕ ಚಂದ್ರಮ್ಮ ಅವರ ಜಮೀನನ್ನು ಗುತ್ತಿಗೆಗೆ ಪಡೆದು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಮಹಾದೇವಪ್ಪ ಎಂಬುವವರ ಜಮೀನಿನಲ್ಲಿದ್ದ ಮೋಟರ್ ಪಂಪ್‌ಸೆಟ್‌ನಿಂದ ನೀರು ಪಡೆದು ಹಾಯಿಸಿಕೊಳ್ಳುತ್ತಿದ್ದರು.

    ಎಂದಿನಂತೆ ಶುಕ್ರವಾರ ಬೆಳಗಿನ ಜಾವ ನೀರು ಹಾಯಿಸಲು ಹೋದಾಗ ದುರ್ಘಟನೆ ಸಂಭವಿಸಿದೆ. ನಂತರ 7 ಗಂಟೆಗೆ ಕೃಷ್ಣಪ್ಪ ಮೃತಪಟ್ಟ ವಿಷಯವನ್ನು ಗ್ರಾಮಸ್ಥರು ದೂರವಾಣಿ ಮೂಲಕ ಅವರ ಪತ್ನಿ ರಂಜಿತಾ ಬಾಯಿಗೆ ತಿಳಿಸಿದರು. ನಂತರ ಅವರು ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಸಿಪಿಐ ಸುನೀಲ್‌ಕುಮಾರ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts