More

    ರಾಜ್ಯವನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಕೆಂಪೇಗೌಡರದು

    ಚಿಕ್ಕಮಗಳೂರು: ಅಭಿವೃದ್ಧಿಯ ಹರಿಕಾರ ನಾಡಪ್ರಭು ಕೆಂಪೇಗೌಡರು ಕರ್ನಾಟಕಕ್ಕೆ ಅದರಲ್ಲೂ ರಾಜಧಾನಿ ಬೆಂಗಳೂರಿಗೆ ನೀಡಿರುವ ಕೊಡುಗೆ ಅಪಾರ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಲಕ್ಷö್ಮಣಗೌಡ ತಿಳಿಸಿದರು.

    ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಅಂಗವಾಗಿ ಗುರುವಾರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕವನ್ನು ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಬಹಳ ದೂರದೃಷ್ಠಿ ಹೊಂದಿದ ವ್ಯಕ್ತಿ ಅವರು ನಾಡು ಕಟ್ಟಿದ್ದಾರೆ. ನಾಲ್ಕು ದಿಕ್ಕಿಗೂ ನಾಲ್ಕು ದ್ವಾರ ಮಾಡಿ, ವೃತ್ತಿಗೊಂದು ಮಾರುಕಟ್ಟೆ ಸ್ಥಾಪಿಸಿ, ಕೆರೆಕಟ್ಟೆಗಳನ್ನು ಅಭಿವೃದ್ಧಿ ಮಾಡಿದ್ದರು ಎಂದರು.
    ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳನ್ನು ಪೂರೈಸುವ ಸಲುವಾಗಿ ಸಾವಿರಾರು ಕೆರೆಗಳನ್ನು ಅಭಿವೃದ್ಧಿಪಡಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ರಾಷ್ಟçದಲ್ಲಿ ಸಾಫ್ಟವೇರ್ ರಫ್ತು ಬೆಂಗಳೂರಿನಿAದಲೇ ಆಗುತ್ತದೆ. ಗ್ಲೋಬಲ್ ಐಟಿ ವಸ್ತುಗಳು ಬೆಂಗಳೂರಿನಿAದ ರಫ್ತಾಗುತ್ತವೆ ಎಂದು ತಿಳಿಸಿದರು.
    ಕೆಂಪೇಗೌಡರು ಅಂದು ದೂರದೃಷ್ಠಿ ಯಿಂದ ಕೈಗೊಂಡ ಯೋಜನೆಗಳು ಇಂದು ಫಲ ನೀಡುತ್ತಿವೆ. ಯುವಪೀಳಿಗೆ ವಿಶೇಷವಾಗಿ ಅವರ ಚಿಂತನೆ, ಯೋಚನೆ, ಸಾಧನೆಗಳನ್ನು ನೆನಪಿನಲ್ಲಿಟ್ಟು ಕೊಂಡು ತಾವು ಕಷ್ಟಪಟ್ಟು ಕೆಲಸ ಮಾಡಿದರೆ ಅಭಿವೃದ್ಧಿ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ದೇಶ-ವಿದೇಶಗಳಲ್ಲಿ ನಾಡಿನ ಕೀರ್ತಿಗೆ ಮುಗಿಲೆತ್ತರಕ್ಕೆ ಕೊಂಡೊಯ್ದ ಅಪರೂಪ ವ್ಯಕ್ತಿ ಕೆಂಪೇಗೌಡರು. ಇದೀಗ ಬೆಂಗಳೂರು ರಾಜಧಾನಿಯನ್ನು ವಿಶ್ವದ ಹಲವಾರು ಮಂದಿ ನೆನಪಿಟ್ಟುಕೊಳ್ಳಲು ಅವರ ಕೊಡುಗೆ ಅಪಾರ ಎಂದರು.
    ಬೆAಗಳೂರು ನಗರದ ನಿರ್ಮಾತೃ ಕೆಂಪೇಗೌಡರ ಜೀವನ ಮತ್ತು ಸಾಧನೆ ಎಲ್ಲರಿಗೂ ಮಾದರಿ. ಇಂದು ಬೆಂಗಳೂರು ಬೃಹದಾಕಾರವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಅಲ್ಲದೇ ಆ ಮಹಾನೀಯರ ಹೆಸರನ್ನು ಅಂತರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಇಡಲಾಗಿರುವುದು ಹೆಮ್ಮೆಯ ಸಂಗತಿ ಎಂದು ಸ್ಮರಿಸಿದರು.
    ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀದೇವಿ, ಮುಖಂಡ ಆನಂದೇಗೌಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts