More

    ಪರಭಾಷೆಗಳತ್ತ ಕನ್ನಡ ನಿರ್ದೇಶಕರು ; ಕಲಾವಿದರಂತೆಯೇ ಸ್ಯಾಂಡಲ್​ವುಡ್​ ತಂತ್ರಜ್ಞರಿಗೂ ಹೆಚ್ಚಿದ ಬೇಡಿಕೆ

    | ಹರ್ಷವರ್ಧನ್​ ಬ್ಯಾಡನೂರು

    ಕಳೆದ ಕೆಲ ವರ್ಷಗಳಿಂದೀಚೆಗೆ ಪ್ಯಾನ್​ ಇಂಡಿಯಾ ಪರಿಕಲ್ಪನೆ ಎಲ್ಲ ಚಿತ್ರರಂಗಗಳಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಕೆಲ ಸ್ಟಾರ್​ ನಟರು, ನಿರ್ದೇಶಕರು, ನಿರ್ಮಾಪಕರು ಎರಡು, ಮೂರು ವರ್ಷ ಸಮಯ ತೆಗೆದುಕೊಂಡರೂ ಪರವಾಗಿಲ್ಲ, ಬಹುಕೋಟಿ ವೆಚ್ಚದಲ್ಲಿ ಬಹುಭಾಷಾ ಸಿನಿಮಾಗಳನ್ನು ಮಾಡಬೇಕು ಎಂದು ನಿರ್ಧರಿಸಿದಂತಿದೆ. ಕನ್ನಡದ ಕಲಾವಿದರು ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಹಾಗಂತ ತಂತ್ರಜ್ಞರು ಸುಮ್ಮನೇ ಇಲ್ಲ. ಈಗಾಗಲೇ ಸಂಗೀತ ನಿರ್ದೇಶಕರಾದ ರವಿ ಬಸ್ರೂರ್​, ಅಜನೀಷ್​ ಲೋಕನಾಥ್​ ಪರಭಾಷೆಗಳಲ್ಲೂ ಸಂಗೀತ ನೀಡುತ್ತಿದ್ದಾರೆ. ಅವರ ಬೆನ್ನಲ್ಲೇ ಕನ್ನಡದ ನಿರ್ದೇಶಕರೂ ಸಹ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದಾರೆ.

    ಕಪ್ಪು ಬಿಳುಪಿನ ಕಾಲದಲ್ಲೇ ಇತ್ತು
    ಕನ್ನಡದ ನಿರ್ದೇಶಕರು ಇತ್ತೀಚಿನ ವರ್ಷಗಳಲ್ಲಿ ಪರಭಾಷೆಗಳಲ್ಲಿ ಸಿನಿಮಾ ಮಾಡುತ್ತಿಲ್ಲ. ಕಪ್ಪು ಬಿಳುಪಿನ ಕಾಲದಲ್ಲಿಯೇ ಕನ್ನಡದ ನಿರ್ದೇಶಕರು ಪರಭಾಷೆಗಳಲ್ಲೂ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದರು. 1950ರ ದಶಕದಲ್ಲಿ ಕನ್ನಡದ ನಿರ್ದೇಶಕ ಬಿ.ಆರ್​. ಪಂತುಲು ಕನ್ನಡ ಮಾತ್ರವಲ್ಲದೇ ತಮಿಳು, ಹಿಂದಿ, ತೆಲುಗಿನಲ್ಲಿ ಸಿನಿಮಾ ಮಾಡಿದ್ದರು. ತಲಾ 18 ಕನ್ನಡ ಮತ್ತು ತಮಿಳು, ಐದು ತೆಲುಗು ಹಾಗೂ ಮೂರು ಹಿಂದಿ ಸೇರಿ 45 ಸಿನಿಮಾಗಳನ್ನು ನಿರ್ದೇಶಿಸಿದ್ದರು.

    ಪರಭಾಷೆಗಳತ್ತ ಕನ್ನಡ ನಿರ್ದೇಶಕರು ; ಕಲಾವಿದರಂತೆಯೇ ಸ್ಯಾಂಡಲ್​ವುಡ್​ ತಂತ್ರಜ್ಞರಿಗೂ ಹೆಚ್ಚಿದ ಬೇಡಿಕೆ

    ಮಲಯಾಳಂದಲ್ಲಿ ಪುಟ್ಟಣ್ಣ ಕಣಗಾಲ್​ ಸದ್ದು
    ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್​ ವೃತ್ತೀಜಿವನ ಆರಂಭಿಸಿದ್ದೇ ಮಲಯಾಳಂ ಚಿತ್ರರಂಗದಲ್ಲಿ. ಬಿ.ಆರ್​.ಪಂತುಲು ಅವರ “ಸ್ಕೂಲ್​ ಮಾಸ್ಟರ್​’ ಚಿತ್ರವನ್ನು ಅದೇ ಹೆಸರಿನಲ್ಲಿ 1964ರಲ್ಲಿ ನಿರ್ದೇಶಿಸಿದ್ದ ಪುಟ್ಟಣ್ಣ ಕಣಗಾಲ್​, ನಂತರ “ಮೇಯರ್​ ನಾಯರ್​’ ಸೇರಿ ನಾಲ್ಕು ಮಲಯಾಳಂ ಮತ್ತು ಒಂದು ತೆಲುಗು ಚಿತ್ರಕ್ಕೆ ಆ್ಯಕ್ಷನ್​&ಕಟ್​ ಹೇಳಿದ್ದರು. ಆ ಬಳಿಕ 1967ರಲ್ಲಿ “ಬೆಳ್ಳಿ ಮೋಡ’ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದು ಇತಿಹಾಸ.

    ಪರಭಾಷೆಗಳಲ್ಲಿ ಕನ್ನಡಿಗರ ಸದ್ದು
    ಮಣಿರತ್ನಂ 1983ರಲ್ಲಿ ಕನ್ನಡದ “ಪಲ್ಲವಿ ಅನುಪಲ್ಲವಿ’ ಚಿತ್ರದ ಕ್ಕೆ ಮೂಲಕ ನಿರ್ದೇಶಕರಾದರು. ಬಳಿಕ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಹಿರಿಯ ನಿರ್ದೇಶಕ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಐದು ಹಿಂದಿ, ಮೂರು ತೆಲುಗು ಸೇರಿ 25ಕ್ಕೂ ಹೆಚ್ಚು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ನಿರ್ದೇಶಕ ದಿನೇಶ್​ ಬಾಬು 40ಕ್ಕೂ ಅಧಿಕ ಕನ್ನಡ ಚಿತ್ರಗಳ ಜತೆ ತಲಾ ಮೂರು ತೆಲುಗು, ಮಲಯಾಳಂ ಹಾಗೂ ಒಂದು ತಮಿಳು ಸಿನಿಮಾ ನಿರ್ದೇಶಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ನಟನಾಗಿಯೂ ಗುರುತಿಸಿಕೊಂಡಿರುವ ಉಪೇಂದ್ರ 1995ರ ಸೂಪರ್​ಹಿಟ್​ “ಓಂ’ ಚಿತ್ರವನ್ನು ತೆಲುಗಿನಲ್ಲಿ “ಓಂಕಾರಂ’ ಹೆಸರಿನಲ್ಲಿ ನಿರ್ದೇಶಿಸಿದ್ದರು. ಪವನ್​ ಕುಮಾರ್​ ತಮ್ಮ “ಯೂ ರ್ಟನ್​’ ಚಿತ್ರವನ್ನು ಅದೇ ಹೆಸರಿನಲ್ಲಿ ತಮಿಳು, ತೆಲುಗು ಭಾಷೆಗಳಲ್ಲಿ ಆ್ಯಕ್ಷನ್​&ಕಟ್​ ಹೇಳಿದ್ದರು. ಕಳೆದ ವರ್ಷ ಅವರು ನಿರ್ದೇಶಿಸಿದ್ದ ಮಲಯಾಳಂ ಚಿತ್ರ “ಧೂಮಂ’ ಪ್ಯಾನ್​ ಇಂಡಿಯಾ ಬಿಡುಗಡೆಯಾಗಿತ್ತು.

    ಪರಭಾಷೆಗಳತ್ತ ಕನ್ನಡ ನಿರ್ದೇಶಕರು ; ಕಲಾವಿದರಂತೆಯೇ ಸ್ಯಾಂಡಲ್​ವುಡ್​ ತಂತ್ರಜ್ಞರಿಗೂ ಹೆಚ್ಚಿದ ಬೇಡಿಕೆ

    ತ್ರಿಮೂರ್ತಿಗಳ ದರ್ಬಾರ್​
    ಕನ್ನಡದಲ್ಲಿ ಸದ್ಯ ಮೂವರು ನಿರ್ದೇಶಕರು ಪರಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದಾರೆ. “ಸಲಾರ್​’ ಮೂಲಕ ತೆಲುಗಿಗೆ ಹಾರಿದ “ಕೆಜಿಎ್​’ ಸರಣಿ ಖ್ಯಾತಿಯ ಪ್ರಶಾಂತ್​ ನೀಲ್​ ಸದ್ಯ ಜೂ. ಎನ್​ಟಿಆರ್​ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. “ಭಜರಂಗಿ’ ಸರಣಿ ನಿರ್ದೇಶಕ ಎ. ಹರ್ಷ, “ಭೀಮ’ ಚಿತ್ರದ ಮೂಲಕ ಟಾಲಿವುಡ್​ಗೆ ಹಾರಿದ್ದಾರೆ. “ಗೋವಿಂದಾಯ ನಮ@’, “ಗೂಗ್ಲಿ’ ಖ್ಯಾತಿಯ ಪವನ್​ ಒಡೆಯರ್​ ಬಾಲಿವುಡ್​ಗೆ ಹಾರಿದ್ದು “ಆವಸ್ಥಿ ವರ್ಸಸ್​ ಆವಸ್ಥಿ’ ಎಂಬ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇನ್ನು “ರನ್ನ’, “ಪೊಗರು’ ನಿರ್ದೇಶಕ ನಂದಕಿಶೋರ್​ ಸದ್ಯ ಮಲಯಾಳಂ ಸ್ಟಾರ್​ ಮೋಹನ್​ ಲಾಲ್​ ನಟಿಸುತ್ತಿರುವ, ಬಾಲಿವುಡ್​ ನಿರ್ಮಾಪಕಿ ಏಕ್ತಾ ಕಪೂರ್​ ನಿರ್ಮಿಸುತ್ತಿರುವ “ವೃಷಭ’ ಮೂಲಕ ಪ್ಯಾನ್​ ಇಂಡಿಯಾ ಹೊರಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts