More

    ರೇಣುಕಸ್ವಾಮಿ ಹತ್ಯೆ ಕೇಸ್​; ದರ್ಶನ್​ ಅರೆಸ್ಟ್​ ಆಗಿರುವುದು ನೋವುಂಟು ಮಾಡಿದೆ ಎಂದ ನಟಿ ಶೃತಿ

    ಬೆಂಗಳೂರು: ಚಿತ್ರದುರ್ಗ ಮೂಲಕ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ. ಇನ್ನೂ ಖ್ಯಾತ ಸ್ಟಾರ್​ನಟನೊಬ್ಬನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಈ ಬಗ್ಗೆ ಸ್ಯಾಂಡಲ್​ವುಡ್​ನ ಹಿರಿಯ ನಟಿ ಶೃತಿ ಪ್ರತಿಕ್ರಿಯಿಸಿದ್ದಾರೆ.

    ಇದನ್ನು ಓದಿ: ಬಾಡಿಗಾರ್ಡ್​ ಮಾಡಿದ ತಪ್ಪಿಗೆ ಅಭಿಮಾನಿಯನ್ನು ಖುದ್ದು ಭೇಟಿ ಮಾಡಿ ಕ್ಷಮೆಯಾಚಿಸಿದ ನಾಗಾರ್ಜುನ

    ಈ ಕುರಿತು ಮಾತನಾಡಿದ ನಟಿ ಶೃತಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗ್ಬೇಕು. ಜೀವ ಕಳೆದುಕೊಂಡವರಿಗೆ ಹಾಗೂ ಇನ್ನೂ ಜಗತ್ತನ್ನೇ ನೋಡದ ಮಗುವಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ.

    ದರ್ಶನ್​ ಮತ್ತು ನಾನು ಎಲ್ಲರ ಮನೆ ದೋಸೆ ತೂತು ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದೆವು. ಅವರಿಗೆ ಸ್ಟಾರ್​ ಡಮ್​ ಬಂದ ಬಳಿಕ ಕಾಟೇರ ಸಿನಿಮಾದಲ್ಲಿ​ ಕೆಲಸ ಮಾಡುವ ಅವಕಾಶ ಸಿಕ್ತು. ಅಷ್ಟು ಅಭಿಮಾನಿಗಳ ಬಳಗ, ಜನರ ಪ್ರೀತಿ ಸಿಕ್ಕಿ ದೊಡ್ಡ ಸ್ಟಾರ್​ ಆದ್ರೂ ದರ್ಶನ್​ ಅವರಿಗೆ ಸರಳತೆ ಇತ್ತು. ಕಷ್ಟದಿಂದ ಬೆಳೆದ ನಟ, ಜನ ಕೊಡುವ ದುಡ್ಡಿಗೆ ಮೋಸ ಮಾಡಬಾರದು ಅಂತಾ ಯಾವಾಗಲು ಸಿನಿಮಾ ಬಗ್ಗೆ ಆಲೋಚನೆ ಮಾಡ್ತಿದ್ರು.

    ಈ ಪ್ರಕರಣಲ್ಲಿ ದರ್ಶನ್​ ಅವರು ಅರೆಸ್ಟ್ ಆಗಿರುವುದು ನೋವುಂಟು ಮಾಡಿದೆ. ಪ್ರಕರಣದ ಹಾದಿ ನೋಡಿದ್ರೆ ದರ್ಶನ್ ದುಡುಕಿದ್ರು ಅನ್ನಿಸುತ್ತೆ. ಸದ್ಯ ವಿಚಾರಣೆ ನಡಿಯುತ್ತಿದೆ, ಏನಾಗುತ್ತೋ ನೋಡೋಣ. ಮಾನಸಿಕವಾಗಿ ಚಿತ್ರರಂಗ ಕುಗ್ಗಿದೆ. ಚಿತ್ರರಂಗ ಎಂಬುದು ಒಂದು ಕುಟುಂಬ. ಯಾರಿಗೆ ತೊಂದರೆ ಆದರೂ ಅವರ ಛಾಯೆ ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತೆ. ಎಲ್ಲೋದ್ರು ಇದೆ ಮಾತುಗಳು ಬರುತ್ತಿದೆ. ಈ ಪ್ರಕರಣ ಒಂದು ತಾರ್ಕಿಕ ಅಂತ್ಯ ಪಡೆಯಲಿ ಎಂದು ಆಶಿಸುತ್ತೇನೆ.

    ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಕಾಮೆಂಟ್​​ ಮಾಡಿದಾಗ ತುಂಬಾ ನೋವಾಗುತ್ತೆ. ಎಷ್ಟೋ ಕಡೆ ಕೇಳಿದ್ದೀವಿ ಕೆಟ್ಟದಾಗಿ ಕಾಮೆಂಟ್ ಮಾಡಿದನ್ನು ಸಹಿಸಲಾಗದೆ ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅವರು ಮಾಡೋ ಕಾಮೆಂಟ್ ಮತ್ತು ಬಳಸುವ ಪದಗಳಿಂದ ಆಚೆ ಬರುವುದು ತುಂಬಾ ಕಷ್ಟ ಆಗುತ್ತೆ. ನಾನು ಆ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಫೇಕ್​​​ ಅಕೌಂಟ್​​​ನಿಂದ ಬರುವ ಪದಗಳನ್ನು ನೋಡಿ ನೋವು ತಿಂದ ದಿನಗಳಿವೆ. ಆಶ್ಲೀಲ ಪದಗಳನ್ನು ಬಳಸಿ ಹೆಣ್ಣುಮಕ್ಕಳ ಮೇಲೆ ಕಾಮೆಂಟ್​ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಯಾವುದೇ ಹೆಣ್ಣುಮಗಳು ಅದನ್ನು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯ ಆಗೋದಿಲ್ಲ. ಸೋಷಿಯಲ್ ಮೀಡಿಯಾಗೂ ಕೆವೈಸಿ ಮಾಡಬೇಕು ಎಂದು ಸ್ಯಾಂಡಲ್​ವುಡ್ ಹಿರಿಯ ನಟಿ ಶೃತಿ ಹೇಳಿದ್ದಾರೆ.

    ಅರವಿಂದ್​ಗೆ ಜಾಮೀನು ಸಿಗದಂತೆ ಷಡ್ಯಂತ್ರ ರೂಪಿಸಲಾಗಿದೆ; ಸುನೀತಾ ಕೇಜ್ರಿವಾಲ್​ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts