More

    ಪರಿಸರ ಬೆಳೆಸಿದರೆ ಕಾಡು ಸೃಷ್ಟಿ

    ಕನಕಗಿರಿ: ಮನುಷ್ಯ ಸೇರಿ ವನ್ಯಜೀವಿಗಳಿಗೆ ಉಸಿರಾಡಲು ಗಾಳಿ ಅಗತ್ಯ. ಹಾಗಾಗಿ ಪರಿಸರವನ್ನು ಬೆಳಸುವ ಜವಾಬ್ದಾರಿ ಎಲ್ಲರ ಕರ್ತವ್ಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ಎನ್.ಗಂಗಾಧರ ಹೇಳಿದರು.

    ತಾಲೂಕಿನ ಮುಸಲಾಪುರ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

    ಕಲ್ಯಾಣ ಕರ್ನಾಟಕ ಭಾಗ ಅತೀ ಹೆಚ್ಚು ಒಣಭೂಮಿಯನ್ನು ಹೊಂದಿದೆ. ಗಿಡ ಬೆಳೆಸಲು ನೀರಿನ ಕೊರತೆಯಿದೆ ಎಂದು ನೆಪ ಹೇಳುವಂತಿಲ್ಲ. ಉತ್ತಮ ವಾತಾವರಣ, ಮಳೆಗಾಗಿ ಗಿಡಗಳನ್ನು ಬೆಳಸುವುದು ಅನಿವಾರ್ಯವಾಗಿದೆ. ಪ್ರತಿಯೊಬ್ಬರೂ ಒಂದು ಗಿಡಗಳನ್ನು ಬೆಳೆಸಿ ಪೋಷಿಸಿದರೆ ಕಾಡುಗಳು ಸೃಷ್ಟಿಯಾಗಲಿವೆ ಎಂದರು.

    ಶಾಲೆಯ ಮುಖ್ಯಶಿಕ್ಷಕ ಬಸವರಾಜ ಮಾತನಾಡಿ, ಭವಿಷ್ಯದ ದಿನಗಳಿಗಾಗಿ ಪ್ರತಿನಿತ್ಯವು ಗಿಡಗಳನ್ನು ಪೋಷಿಸುವ ಕೆಲಸ ಮಾಡಬೇಕೆಂದರು. ವಲಯ ಮೇಲ್ವಿಚಾರಕ ವೈ.ಶಿವಾಜಿ, ಒಕ್ಕೂಟದ ಅಧ್ಯಕ್ಷ ಸುವರ್ಣಮ್ಮ, ಸೇವಾ ಪ್ರತಿನಿಧಿಗಳಾದ ಶಿವಕುಮಾರ, ಸರಸ್ವತಿ, ಯಮನೂರಪ್ಪ ಸೇರಿ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ-ಉಪಾಧ್ಯಕ್ಷರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts