More

    ರಣವೀರ್​​, ದೀಪಿಕಾ ಮಗು ಬಗ್ಗೆ ಉಲಗ ನಾಯಗನ್ ಕಮಲ್​​ ಹಾಸನ್​​​ ಹೇಳಿದ ಮಾತೇನು ಗೊತ್ತಾ?

    ಮುಂಬೈ: ನಾಗ್​ ಅಶ್ವಿನ್​ ಆ್ಯಕ್ಷನ್​-ಕಟ್​ ಹೇಳಿರುವ ಬಹುನಿರೀಕ್ಷಿತ ಸಿನಿಮಾ ಕಲ್ಕಿ 2898 AD. ಪ್ರಭಾಸ್​​​, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ನಟಿಸಿರುವ ಬಿಗ್​ ಬಜೆಟ್​ ಸಿನಿಮಾ. ಇತ್ತೀಚೆಗೆ ಈ ಚಿತ್ರದ ಪ್ರೀ-ಇವೆಂಟ್​​ ಕಾರ್ಯಕ್ರಮ ಮುಂಬೈನಲ್ಲಿ ನಡೆಯಿತು. ಸಮಾರಂಭದಲ್ಲಿ ಚಿತ್ರತಂಡ ಕಲ್ಕಿ ಕ್ರಾನಿಕಲ್ಸ್ ಎಂಬ ಶೀರ್ಷಿಕೆಯ ಬಗ್ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ನಟ ಕಮಲ್ ಹಾಸನ್ ಅವರು ದೀಪಿಕಾ ಅವರ ಮಗು ಮುಂದೊಂದು ದಿನ ಚಲನಚಿತ್ರ ನಿರ್ಮಾಪಕರಾಗಬಹುದು ಎಂದು ಭವಿಷ್ಯ ನುಡಿದರು.

    ಇದನ್ನು ಓದಿ: ಕಲ್ಕಿ 2898 AD; ಮುಂಗಡ ಟಿಕೆಟ್​ ಬುಕ್ಕಿಂಗ್​​ನ​​ ಮೊದಲ ದಿನವೇ ಗಳಿಸಿದ್ದು ಎಷ್ಟು ಗೊತ್ತಾ?

    ನಿರ್ದೇಶಕ ನಾಗ್​ ಅಶ್ವಿನ್​​ ಅವರು ಮಗುವಿನಂತೆ ಎಂದು ಹೇಳಿದ ದೀಪಿಕಾ, “ನಾನು ಬಾಂಬೆಯಲ್ಲಿದ್ದೆ. ಬೇರೆ ಬೇರೆ ಶೆಡ್ಯೂಲ್‌ಗಳಲ್ಲಿ ಚಿತ್ರೀಕರಣ ನಡೆಸುತ್ತಿದ್ದರಿಂದ ಲಾಂಗ್​​​ ಬ್ರೇಕ್​ ಹಾಕಿದ್ದೆ. ಹೀಗಾಗಿ ಒಂದು ದಿನ ನಾಗ್​ನಿಂದ ತುಂಬ ಮಿಸ್ಡ್​​​ ಕಾಲ್​ ಬಂದಿತು. ನಾನು ಏನಾಯಿತು ಎಂದ ಕರೆ ಮಾಡಿ ಕೇಳಿದೆ. ಆಗ ನಾಗ್​​ “ಕಮಲ್ ಸರ್ ಜತೆ ನಾವು ನಮ್ಮ ಮೊದಲ ದಿನವನ್ನು ಶೂಟ್ ಮಾಡಿದ್ದೇವೆ ಎಂದು ಹೇಳಲು ನಾನು ಕರೆ ಮಾಡಿದ್ದೆ ಎಂದು ಮಗುವಿನಂತೆ ಹೇಳಿದರು” ಎಂದರು. ಆ ವೇಳೆ ಕಮಲ್​ ಹಾಸನ್​ ಅವರು, ದೀಪಿಕಾ ಬೇಬಿ ಬಂಪ್​ ಕಡೆ ತೋರಿಸಿ ಮುಂದೊಂದು ದಿನ ಈ ಮಗುವು ಸಿನಿಮಾ ಮಾಡಲಿ ಎಂದು ಆಶಿಸುತ್ತೇನೆ ಎಂದರು.

    ಜೂನ್ 27ರಂದು ಬಿಡುಗಡೆಗೆ ಸಜ್ಜಾಗಿರುವ ಕಲ್ಕಿ 2898 AD ಸಿನಿಮಾ ಈಗಾಗಲೇ ಪ್ರೀ ಸೇಲ್ಸ್ ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಭಾರತದಲ್ಲಿ ಟಿಕೆಟ್‌ಗಳ ಮುಂಗಡ ಬುಕಿಂಗ್ ತೆರೆದ 24 ಗಂಟೆಯೊಳಗೆ 2 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟವಾಗಿದ್ದು 6 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಸಿನಿಮಾದ ಕ್ರೇಜ್​ ಹೆಚ್ಚಿದೆ. ಉತ್ತರ ಅಮೆರಿಕದಲ್ಲಿ ಒಂದು ದಿನ ಮುಂಚಿತವಾಗಿ ಜೂನ್​ 26ರಂದು ಸಿನಿಮಾ ಪ್ರಥಮ ಪ್ರದರ್ಶನಗೊಳ್ಳುತ್ತದೆ. ಉತ್ತರ ಅಮೆರಿಕದಲ್ಲಿ ಈಗಾಗಲೇ 1.13 ಲಕ್ಷಕ್ಕೂ ಹೆಚ್ಚು ಟಿಕೆಟ್​​ ಮಾರಾಟವಾಗಿದೆ.(ಏಜೆನ್ಸೀಸ್​​)

    ಚಿಕನ್​​, ಫಿಶ್​​ ಕಬಾಬ್​ನಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ; ರಾಜ್ಯ ಸರ್ಕಾರದಿಂದ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts