More

    ಬಾಕ್ಸ್​ಆಫೀಸ್​ನಲ್ಲಿ ಕಲ್ಕಿ ಅಬ್ಬರ; ಮೂರನೇ ದಿನ ಗಳಿಸಿದ್ದೆಷ್ಟು?

    ಹೈದರಾಬಾದ್: ನಾಗ್ ಅಶ್ವಿನ್​ ನಿರ್ದೇಶನದ ಙ್ರಭಾಸ್​, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​, ಕಮಲ್​ ಹಾಸನ್, ದಿಶಾ ಪಟಾಣಿ​ ನಟನೆಯ ಕಲ್ಕಿ 2898AD ಬಿಡುಗಡೆಗೊಂಡು ಯಶಸ್ವಿಯಾಗಿ ಮುನ್ನುಗುತ್ತಿದ್ದು, ಬಾಕ್ಸ್​​ಆಫೀಸ್​ನಲ್ಲಿ ಹಲವು ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಯಾಗಿ ಮೂರು ದಿನಗಳಾಗಿದ್ದು, ಗಲ್ಲಾಪೆಟ್ಟಿಗೆ ತುಂಬಿಸುವಲ್ಲಿ ಯಶಸ್ವಿಯಾಗಿದೆ.

    ಚಿತ್ರ ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ 95.30 ಕೋಟಿ ರೂಪಾಯಿ ಹಣ ಗಳಿಸಿತ್ತು. ಆ ಮೂಲಕ ಈ ಹಿಂದೆ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿ ದಾಖಲೆ ಮಾಡಿದ್ದ ಕೆಲವು ಸಿನಿಮಾಗಳ ದಾಖಲೆಯನ್ನು ಕಲ್ಕಿ ತನ್ನದಾಗಿಸಿಕೊಂಡಿತ್ತು. ಎರಡನೇ ದಿನ 54 ಕೋಟಿ ರೂಪಾಯಿ ಕಮಾಯಿ ಮಾಡಿದ್ದ ಚಿತ್ರವು ಮೂರನೇ ದಿನಕ್ಕೆ ಭರ್ಜರಿ ಗಳಿಕೆ ಕಾಣುವ ಮೂಲಕ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ.

    ಇದನ್ನೂ ಓದಿ: ಆ ಘಟನೆಗಳನ್ನು ನೆನೆಸಿಕೊಂಡರೆ ಈಗಲೂ…; ಟಿ20 ವಿಶ್ವಕಪ್​ ಗೆಲುವಿನ ಬಳಿಕ ಹಾರ್ದಿಕ್​ ಪಾಂಡ್ಯ ಭಾವುಕ ನುಡಿ

    ಎರಡನೇ ದಿನಕ್ಕೆ ಹೋಲಿಸಿಕೊಂಡರೆ ಮೂರನೇ ದಿನದ ಕಲೆಕ್ಷನ್​ನಲ್ಲಿ ಏರಿಕೆ ಕಂಡಿರುವ ಕಲ್ಕಿ ಚಿತ್ರವು ಶನಿವಾರದಂದು ಭಾರತದ ಬಾಕ್ಸ್ ಆಫೀಸ್​ನಲ್ಲಿ 75 ಕೋಟಿ ರೂಪಾಯಿ ಹಣ ಗಳಿಸಿದೆ. ಈ ಮೂಲಕ ಕಲ್ಕಿ 2898 AD ಚಿತ್ರವು ಭಾರತದಲ್ಲಿ ಕೇವಲ ಮೂರು ದಿನಕ್ಕೆ 200 ಕೋಟಿ ಕಲೆಕ್ಷನ್ ಅನ್ನು ದಾಟಿದೆ. ಭಾರತದಲ್ಲಿ ಮೂರು ದಿನದಲ್ಲಿ ಕಲ್ಕಿ ಸಿನಿಮಾ ಸುಮಾರು 225 ಕೋಟಿ ರೂಪಾಯಿ ಕಮಾಯಿ ಮಾಡಿದೆ.

    ನಾಲ್ಕನೇ ದಿನವಾದ ಭಾನುವಾರ ಚಿತ್ರ ಉತ್ತಮ ಗಳಿಕೆ ಕಾಣಲಿದೆ ಎಂದು ಹೇಳಲಾಗಿದ್ದು, 100 ಕೋಟಿ ರೂ. ದಾಟಬಾಹುದು ಎಂದು ಬಾಕ್ಸ್​​ಆಫೀಸ್​ ಪಂಡಿತರು ಅಂದಾಜಿಸಿದ್ದಾರೆ. ಒಂದು ವೇಳೆ ಹಾಗೆ ಆಗಿದ್ದಲ್ಲಿ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಕ್ಕೆ 300 ಕೋಟಿ ರೂ. ಕಮಾಯಿ ಮಾಡಿದ ದಾಖಲೆಗೆ ಭಾಜನವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts