More

    ಅಮೆರಿಕದಲ್ಲಿ ‘ಕಲ್ಕಿ’ ಅಬ್ಬರ.. ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಚಿತ್ರ! ಕಲೆಕ್ಷನ್ಸ್ ಎಷ್ಟು ಗೊತ್ತಾ?

    ವಾಷಿಂಗ್ಟನ್​: ಪ್ರಭಾಸ್‌ ಅಭಿನಯದ ‘ಕಲ್ಕಿ’ ಚಿತ್ರ ಬಿಡುಗಡೆಯಾಗಿ ಸಂಚಲನ ಮೂಡಿಸುತ್ತಿದೆ. ಈ ಚಿತ್ರವು ವಿಮರ್ಶಕರ ಮೆಚ್ಚುಗೆ ಪಡೆಯುತ್ತಿದೆ. ಪ್ರಭಾಸ್ ಜೊತೆಗೆ ನಾಯಕ ನಟರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗುತ್ತಿದ್ದಾರೆ. ಬಿಡುಗಡೆಗೂ ಮುನ್ನವೇ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದ ‘ಕಲ್ಕಿ’ ಚಿತ್ರ ಬಿಡುಗಡೆಯ ನಂತರವೂ ತನ್ನ ಸಾಧನೆಯನ್ನು ಮುಂದುವರೆಸಿದೆ. ಉತ್ತರ ಅಮೆರಿಕಾದಲ್ಲಿ ಸಾರ್ವಕಾಲಿಕ ದಾಖಲೆ ಮಾಡಿ ಗಮನಸೆಳೆದಿದೆ.

    ಇದನ್ನೂ ಓದಿ: ‘ಕುಸಿದ ಮೇಲ್ಛಾವಣಿ ಮೋದಿ ಆಡಳಿತದಲ್ಲಿ ನಿರ್ಮಿಸಿದ್ದಲ್ಲ’: ರಾಂ ಮೋಹನ್​ ನಾಯ್ಡು

    ನಾಗ್ ಅಶ್ವಿನ್ ಈ ಸಿನಿಮಾವನ್ನು (ಕಲ್ಕಿ 2898 ಎಡಿ) ಹಾಲಿವುಡ್ ರೇಂಜ್ ನಲ್ಲಿ ನಿರ್ಮಿಸಿದ್ದಾರೆ. ಅಲ್ಲಿನ ಪ್ರೇಕ್ಷಕರಿಗೂ ಈ ಸಿನಿಮಾ ಖುಷಿ ಕೊಡುತ್ತಿದೆ. ಉತ್ತರ ಅಮೆರಿಕಾದಲ್ಲಿ ಪ್ರೀ-ಸೇಲ್ ಬುಕ್ಕಿಂಗ್‌ನಲ್ಲಿ ಹಲವು ಚಿತ್ರಗಳ ದಾಖಲೆಗಳನ್ನು ಮುರಿದ ‘ಕಲ್ಕಿ’. ಪ್ರೀಮಿಯರ್ ಕಲೆಕ್ಷನ್‌ಗಳಲ್ಲಿ 3.8 ಮಿಲಿಯನ್ ಡಾಲರ್‌ಗಳೊಂದಿಗೆ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಪ್ರೀಮಿಯರ್‌ನಲ್ಲಿ ‘ಆರ್‌ಆರ್‌ಆರ್'(3.46 ಮಿಲಿಯನ್) ಕಲೆಕ್ಷನ್‌ ಅನ್ನು ಹಿಂದಿಕ್ಕಿರುವುದು ವಿಶೇಷ. ‘ಸಲಾರ್’ 2.6ಮಿಲಿಯನ್​ ಗಳಿಸಿತ್ತು.

    ಕಲ್ಕಿ ಪ್ರೀಮಿಯರ್ ಮತ್ತು ಮೊದಲ ದಿನದ ಕಲೆಕ್ಷನ್ ಸೇರಿ ಅಮೆರಿಕಾದಲ್ಲಿ ಒಟ್ಟಾರೆ 5 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಒಂದೇ ದಿನ ಅಮೆರಿಕಾದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತೆಲುಗು ಸಿನಿಮಾಗಳಲ್ಲಿ 5ನೇ ಚಿತ್ರ ಇದಾಗಿದೆ. ಇದು ಅತ್ಯಂತ ವೇಗವಾಗಿ 5 ಮಿಲಿಯನ್ ಡಾಲರ್​ ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆಯನ್ನೂ ಮಾಡಿದೆ. ಈ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಬೆಂಚ್ ಮಾರ್ಕ್ ಸೃಷ್ಟಿಸುವುದು ಖಚಿತ ಎನ್ನುತ್ತಾರೆ ಅಭಿಮಾನಿಗಳು. ಈ ವಾರಾಂತ್ಯದ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.

    ಸಸ್ಯಹಾರಿಗಳೇ ಗಮನಿಸಿ..ಈ ಏಳು ಧಾನ್ಯಗಳಲ್ಲಿದೆ ಸಮೃದ್ಧ ಪ್ರೋಟೀನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts