More

    ಸೈನ್ಸ್​-ಫಿಕ್ಷನ್​ ಚಿತ್ರಕ್ಕೆ ಹೆಚ್ಚಾಯ್ತು ಬೇಡಿಕೆ! ಈ ರಾಜ್ಯಗಳಲ್ಲಿ ಟಿಕೆಟ್ ದರ ಎಷ್ಟು ದುಬಾರಿ? ಹೀಗಿದೆ ವಿವರ

    ಹೈದರಾಬಾದ್​: ಈ ಹಿಂದಿನಿಂದಲೂ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿರುವ ಟಾಲಿವುಡ್​ನ​ ರೆಬೆಲ್ ಸ್ಟಾರ್​ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ, ಸೈನ್ಸ್​ ಫಿಕ್ಷನ್​ ಆಧರಿತ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆಗೆ ಕೇವಲ ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಇನ್ನು ಜೂನ್​ 27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ಕಲ್ಕಿ ಚಿತ್ರದ ಮುಂಗಡ ಬುಕ್ಕಿಂಗ್​ಗಳು ಈಗಾಗಲೇ ತುಂಬಿ ಹೋಗಿವೆ. ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಲಿರುವ ಈ ಸಿನಿಮಾ ಇನ್ನು ಬಿಡುಗಡೆಗೂ ಮುನ್ನವೇ ಚಿತ್ರ ಭಾರೀ ಸದ್ದು ಮಾಡುತ್ತಿದ್ದು, ಈಗಾಗಲೇ ಆಯಾ ರಾಜ್ಯಗಳಲ್ಲಿ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್​ಗಳ ಟಿಕೆಟ್ ದರ ಬಲು ದುಬಾರಿಯಾಗಿದೆ.

    ಇದನ್ನೂ ಓದಿ:ಮಾಜಿ ಸಂಸದ ಅನಂತಕುಮಾರ ಹೆಗಡೆ ಮನೆಯಲ್ಲಿ ಅಗ್ನಿಅವಘಡ 

    ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶಿಸಿರುವ ಸೈನ್ಸ್​-ಫಿಕ್ಷನ್​ ಆಧರಿತ ಕಲ್ಕಿ ಚಿತ್ರದ ಮೇಲೆ ಸಿನಿಪ್ರಿಯರ ಚಿತ್ತ ಮೂಡಿದ್ದು, ಸಿನಿಮಾ ಹೇಗಿದೆ? ಬಿಗ್ ಬಜೆಟ್​ನ ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಲಿದ್ಯಾ? ಈ ಎಲ್ಲಾ ಪ್ರಶ್ನೆಗಳು ಚಿತ್ರರಂಗದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆಲ್ಲಾ ಜೂನ್ 27ರ ನಂತರ ಉತ್ತರ ಸಿಗಲಿದ್ದು, ಸದ್ಯಕ್ಕೆ ಚಿತ್ರಮಂದಿಗರಳಲ್ಲಿ ಟಿಕೆಟ್ ದರ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಮುಂಗಡ ಬುಕ್ಕಿಂಗ್​ನಲ್ಲಿ ಸದ್ದು ಮಾಡಿರುವ ಚಿತ್ರದ ಸಿಂಗಲ್ ಸ್ಕ್ರೀನ್ ದರದಲ್ಲಿ 75 ರೂ. ಹೆಚ್ಚಳ ಕಂಡುಬಂದಿದೆ.

    ಚಿತ್ರದ ಮೊದಲಾರ್ಧದ ರನ್‌ಟೈಮ್ 1 ಗಂಟೆ, 34 ನಿಮಿಷಗಳಿದ್ದು, ದ್ವಿತೀಯಾರ್ಧವು 1 ಗಂಟೆ, 26 ನಿಮಿಷಗಳಿದೆ. ಒಟ್ಟಾರೆ 3 ಗಂಟೆಯ ರನ್​ಟೈಮ್​ ಹೊಂದಿರುವ ಪ್ರಭಾಸ್​ ಚಿತ್ರಕ್ಕೆ ಭಾರೀ ಬೇಡಿಕೆ ಹೆಚ್ಚಿದ ಹಿನ್ನೆಲೆ ಇದೀಗ ಆಂಧ್ರಪ್ರದೇಶ ಸರ್ಕಾರ ಸಿಂಗಲ್​ ಸ್ಕ್ರೀನ್​ಗಳ ಟಿಕೆಟ್​ ದರದಲ್ಲಿ 75 ರೂ. ಹೆಚ್ಚಿಸಿದ್ದು, ಮಲ್ಟಿಪ್ಲೆಕ್ಸ್​ಗಳ ಟಿಕೆಟ್​ಗೆ 125 ರೂ. ಏರಿಕೆ ಮಾಡಲಾಗಿದೆ. ಇನ್ನೂ ಕರ್ನಾಟಕದಲ್ಲಿಯೂ ಇದೇ ಗಾಳಿ ಬೀಸಿದಂತಿದೆ.

    ಇದನ್ನೂ ಓದಿ: ನಿರ್ಮಾಪಕ ಉಮಾಪತಿಗೌಡಗೆ ಬೆದರಿಕೆ ಹಾಕಿದ್ದ ದರ್ಶನ್​ ಅಭಿಮಾನಿ ಅರೆಸ್ಟ್​!

    ರಾಜ್ಯದ ಮಲ್ಟಿಪ್ಲೆಕ್ಸ್​ ಚಿತ್ರಮಂದಿರಗಳಲ್ಲಿಯೂ ಸಹ ‘ಕಲ್ಕಿ 2898 ಎಡಿ’ ಚಿತ್ರ ಬಿಡುಗಡೆಯ ಹಿನ್ನೆಲೆ ಟಿಕೆಟ್ ದರದಲ್ಲಿ ಭಾರೀ ಏರಿಕೆ ಆಗಿರುವುದು ಕಂಡುಬಂದಿದೆ. 500ರೂ., 740 ರೂ.ಯಿಂದ 1000-1200 ರೂ.ವರೆಗೂ ಹೆಚ್ಚಳವಾಗಿದೆ. ಇದರಿಂದ ಸಿನಿಪ್ರಿಯರು ಕಂಗಾಲಾಗಿದ್ದು, ಟಿಕೆಟ್ ಬೆಲೆ ಬಲು ದುಬಾರಿಯಾಗಿದೆ. ಹೀಗಾದರೆ ಸಿನಿಮಾ ನೋಡೋದು ಹೇಗೆ? ಇದರಿಂದ ಚಿತ್ರಮಂದಿರಕ್ಕೆ ಆಗಮಿಸುವ ಪ್ರೇಕ್ಷಕರ ಸಂಖ್ಯೆ ಕೂಡ ಕಡಿತವಾಗುತ್ತದೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

    ಭಾರತದ ಹೆಡ್​ ಕೋಚ್​ ಆಗುವುದಾದರೆ… ಗೌತಮ್ ಗಂಭೀರ್​ ಮುಂದಿಟ್ಟ 5 ಬೇಡಿಕೆಗಳಿಗೆ ದಂಗಾದ ಬಿಸಿಸಿಐ

    ಬಾಂಗ್ಲಾ ಬಗ್ಗುಬಡಿದು, ಸೆಮಿಸ್​ಗೆ ಎಂಟ್ರಿ ಕೊಟ್ಟ ಆಫ್ಘಾನ್​! ಆಸಿಸ್​ ಕನಸು ನುಚ್ಚುನೂರು ಮಾಡಿದ ರಶೀದ್​ ಖಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts