More

    ಇದು 4 ವರ್ಷಗಳ ಶ್ರಮ… ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ‘ಕಲ್ಕಿ’ ಚಿತ್ರ ಸೋರಿಕೆ! ಚಿತ್ರತಂಡ ಕಿಡಿ

    ಹೈದರಾಬಾದ್​: ಟಾಲಿವುಡ್​ ರೆಬೆಲ್ ಸ್ಟಾರ್​ ಪ್ರಭಾಸ್ ಮತ್ತು ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಸೈನ್ಸ್​-ಫಿಕ್ಷನ್​, ಥ್ರಿಲ್ಲರ್ ‘ಕಲ್ಕಿ 2898 AD’ ಇಂದು (ಜೂ. 27) ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭರ್ಜರಿ ಓಪನಿಂಗ್ ಪಡೆದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಎಂದು ಸಂತಸದಲ್ಲಿದ್ದ ಚಿತ್ರತಂಡಕ್ಕೆ ಇದೀಗ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದೆ.

    ಇದನ್ನೂ ಓದಿ: ಬಾಲ ಕಾರ್ಮಿಕರ ರಕ್ಷಣೆ ಪ್ರತಿಯೊಬ್ಬರ ಮೇಲಿದೆ; ನ್ಯಾಯಾಧೀಶೆ ಮೇಘಶ್ರೀ

    ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡ ಬಿಗ್ ಬಜೆಟ್, ಪ್ಯಾನ್ ಇಂಡಿಯಾ ಕಲ್ಕಿ ಸಿನಿಮಾ ಇದೀಗ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ಅದರಲ್ಲೂ ಉತ್ತಮ ಕ್ವಾಲಿಟಿಯಲ್ಲಿ ಚಿತ್ರ ಲೀಕ್ ಆಗಿರುವುದು ಚಿತ್ರತಂಡಕ್ಕೆ ಭಾರೀ ಆಘಾತವನ್ನು ತಂದೊಡ್ಡಿದೆ. ಇದರಿಂದ ಚಿತ್ರ ತಯಾರಕರು ಬಹಳ ಬೇಸರ ವ್ಯಕ್ತಪಡಿಸಿದ್ದು, ಪೈರೆಸಿ ಕಾಟಕ್ಕೆ ಮುಕ್ತಿ ಯಾವಾಗ? ಎಂಬುದನ್ನು ಪೋಸ್ಟ್​ ಹಂಚಿಕೊಳ್ಳುವ ಮೂಲಕ ವಿವರಿಸಿದ್ದಾರೆ.

    ಇದು 4 ವರ್ಷಗಳ ಶ್ರಮ. ಈ ಸಿನಿಮಾ ನಾಗ್​ ಅಶ್ವಿನ್ ಮತ್ತು ಅವರ ತಂಡದ ಬೆವರಿನ ಕಥೆ. ಹಿಂದೆ ತಿರುಗಿ ನೋಡುವಂತದ್ದಲ್ಲ, ಕ್ವಾಲಿಟಿಯಲ್ಲಿ ರಾಜಿಯಾಗುವ ಮಾತಿಲ್ಲ. ಇಂತಹ ಚಿತ್ರವನ್ನು ನಿಮ್ಮ ಮುಂದೆ ತರಲು ಬೆವರು ಮತ್ತು ರಕ್ತವನ್ನೇ ಸುರಿಸಲಾಗಿದೆ. ನಾವೆಲ್ಲರೂ ಒಟ್ಟಾಗಿ ನಿಂತರೆ, ಪೈರೆಸಿಯನ್ನು ತಡೆಯಬಹುದು. ದಯವಿಟ್ಟು ಸಿನಿಮಾ, ಶ್ರಮ ಗೌರವಿಸಿ. ಕಿಡಿಗೇಡಿಗಳಿಗೆ ನಮ್ಮ ಪರಿಶ್ರಮ ಕೊಡುವುದು ಬೇಡ ಎಂದು ಚಿತ್ರತಂಡ ತಮ್ಮ ಅಧಿಕೃತ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ವಿನಂತಿಸಿದೆ,(ಏಜೆನ್ಸೀಸ್).

    ಅಲ್ಲಿದ್ದರೆ ನೀವು ಶೂನ್ಯ! ಟೀಂ ಇಂಡಿಯಾ ಕೋಚ್​ ಆಗಿ ಬನ್ನಿ… ಹರ್ಭಜನ್ ಕೊಟ್ಟ ಮಹತ್ವದ ಸಲಹೆ ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts