More

    4 ದಿನಗಳಲ್ಲಿ 555 ಕೋಟಿ ರೂ.!; 1000 ಕೋಟಿ ಗಳಿಕೆಯತ್ತ ‘ಕಲ್ಕಿ 2898 ಎಡಿ’ ಓಟ

    ಅಶ್ವಿನಿ ನಾಗ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕಲ್ಕಿ 2898 ಎಡಿ’ ವಿಶ್ವಾದ್ಯಂತ ಬಿಡುಗಡೆಗೊಂಡು ಹಲವು ದಾಖಲೆ ಬರೆಯುತ್ತಿದೆ. ನಟ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ಸೇರಿ ಹಲವು ಕಲಾವಿದರು ನಟಿಸಿರುವ ಈ ಚಿತ್ರ ಮೊದಲೇ ದಿನವೇ 191.5 ಕೋಟಿ ರೂ. ಗಳಿಕೆ ಮಾಡಿತ್ತು. ಟಿ-20 ವಿಶ್ವಕಪ್ನ ಫೈನಲ್ ಪಂದ್ಯದ ಮಧ್ಯೆಯೂ ವೀಕೆಂಡ್‌ನಲ್ಲಿ ಹೆಚ್ಚಿನ ಪ್ರೇಕ್ಷಕರು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಈಗ ನಾಲ್ಕು ದಿನ ಕಳೆದಿದ್ದು, ಚಿತ್ರದ ಒಟ್ಟು ಗಳಿಕೆ 555 ಕೋಟಿ ರೂ. ಮುಟ್ಟಿದೆ. ಆ ಮೂಲಕ ಪ್ರಭಾಸ್ ಅಭಿನಯದ ನಾಲ್ಕು ಸಿನಿಮಾಗಳು 500 ಕೋಟಿ ರೂ. ಕ್ಲಬ್ ಸೇರಿರುವುದು ಗಮನಾರ್ಹ. ‘ಬಾಹುಬಲಿ: ದ ಬಿಗಿನಿಂಗ್’ (632 ಕೋಟಿ ರೂ.), ‘ಬಾಹುಬಲಿ: ದ ಕನ್‌ಕ್ಲೂಷನ್’ (1814 ಕೋಟಿ ರೂ.), ಇತ್ತೀಚೆಗೆ ತೆರೆಕಂಡಿದ್ದ ‘ಸಲಾರ್’ (623 ಕೋಟಿ ರೂ.) ಗಳಿಕೆ ಮಾಡಿದ್ದವು. ಇದೀಗ ‘ಕಲ್ಕಿ 2898 ಎಡಿ’ 500 ಕೋಟಿ ಕ್ಲಬ್ ಸೇರಿರುವ ನಾಲ್ಕನೇ ಸಿನಿಮಾವಾಗಿದೆ. -ಏಜೆನ್ಸೀಸ್

    ದೇಶಾದ್ಯಂತ 302.4 ಕೋಟಿ ರೂ.
    ‘ಕಲ್ಕಿ 2898 ಎಡಿ’ ಚಿತ್ರ ಬಿಡುಗಡೆಯಾದ ಮೊದಲ ದಿನವೇ ದೇಶಾದ್ಯಂತ 95.3 ಕೋಟಿ ರೂ.ಗಳಿಕೆ ಮಾಡಿತ್ತು. ಎರಡನೇ ದಿನ 57.6 ಕೋಟಿ ರೂ., ಮೂರನೇ ದಿನ 64.5 ಕೋಟಿ ರೂ. ಹಾಗೂ ನಾಲ್ಕನೇ ದಿನ 85 ಕೋಟಿ ರೂ.ಗಳಿಸುವ ಮೂಲಕ ಈವರೆಗೆ 302.4 ಕೋಟಿ ರೂ. ಹಾಗೂ ಉಳಿದಂತೆ ವಿದೇಶದಲ್ಲಿ 248 ಕೋಟಿ ರೂ.ಗಳಿಸಿದೆ.

    ರಾಜ್ಯದಲ್ಲಿ ಎರಡಂಕಿ ಗಳಿಕೆ
    ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳು ಓಡುತ್ತಿಲ್ಲ, ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿಲ್ಲ, ಥಿಯೇಟರ್‌ಗಳು ಬಂದ್ ಆಗುತ್ತಿವೆ ಎಂದು ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರಮುಖರು ಸಭೆ ಸೇರಿದ್ದರು. ಅದರ ನಡುವೆಯೇ ‘ಕಲ್ಕಿ 2898 ಎಡಿ’ ಕರ್ನಾಟಕದಲ್ಲೂ ಭರ್ಜರಿ ಗಳಿಕೆ ಮಾಡಿಕೊಂಡಿದೆ. ರಾಜ್ಯದಲ್ಲಿ ಮೊದಲ ದಿನವೇ ಚಿತ್ರ 5.5 ಕೋಟಿ ರೂ. ಗಳಿಕೆ ಮಾಡಿತ್ತು. ಇದೀಗ ನಾಲ್ಕು ದಿನಗಳಲ್ಲಿ ಚಿತ್ರದ ಗಳಿಕೆ ಎರಡಂಕಿ ದಾಟಿದ್ದು, ಒಟ್ಟು 17.5 ಕೋಟಿ ರೂ. ಗಳಿಸಿದೆ. ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿದ್ದ ‘ಕಲ್ಕಿ 2898 ಎಡಿ’ ಮೊದಲ ದಿನ 39 ಲಕ್ಷ ರೂ. ಗಳಿಕೆ ಮಾಡಿತ್ತು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts