More

    ಕಲಾ ಸುಜಯ ದಶಕದ ಸಂಭ್ರಮ, ಹುಬ್ಬಳ್ಳಿಯಲ್ಲಿ ಸಾಂಸ್ಕೃತಿಕ ವೈಭವ

    ಹುಬ್ಬಳ್ಳಿ: ಇಲ್ಲಿಯ ಸಾಂಸ್ಕೃತಿಕ ಸಂಸ್ಥೆ ಕಲಾ ಸುಜಯ ಇದರ ದಶಕದ ಸಂಭ್ರಮ ಕಾರ್ಯಕ್ರಮವನ್ನು ಜೂನ್ 30ರಂದು ಸಂಜೆ 5.30ಕ್ಕೆ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ, ವಿದ್ವಾನ್ ಸುಜಯ ಶಾನಭಾಗ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾ ಸುಜಯ ಆರಂಭವಾಗಿ ಹತ್ತು ವರ್ಷ ಕಳೆದಿವೆ. ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಭಿನಯ ಭಾರತಿ ಸಂಸ್ಥೆಯ ಅಧ್ಯಕ್ಷ, ನಾಟಕಕಾರ ಅರವಿಂದ ಕುಲಕರ್ಣಿ ಹಾಗೂ ಹೆಸರಾಂತ ಜಲತರಂಗ ಕಲಾವಿದೆ ಶಶಿಕಲಾ ದಾನಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

    ಕೇರಳದ ಖ್ಯಾತ ಕಥಕಳಿ ಕಲಾವಿದ ಕಲಾಮಂಡಲ ಅರವಿಂದ ಅವರು ಪೂತನ ಮೋಕ್ಷಂ ಎಂಬ ವಿನೂತನ ಕಥಕಳಿ ಪ್ರಸ್ತುತ ಪಡಿಸುವರು.
    ಕೇಂದ್ರ ಸರ್ಕಾರದ ಶಿಷ್ಯವೇತನ ಪಡೆದಿರುವ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ಕಲಾಸುಜಯದ ವಿದ್ಯಾಥಿರ್ಗಳಾದ ಶ್ರೇಷ್ಠಕುಮಾರ, ಕ್ಷಿತಿ ಥಕ್ಕರ್, ಶ್ರೀಯಾ ಪಾಚಲಗ, ತನ್ವಿ ಶಿರೋಳ ಅವರಿಂದ ಕೌತ್ವಂ ಮಾಲಿಕಾ ನೃತ್ಯ ಪ್ರದರ್ಶನ ನಡೆಯಲಿದೆ.

    ವಿದ್ವಾನ್ ಸುಜಯ ಶಾನಭಾಗ ಅವರಿಂದ ಕಿತ್ತೂರು ಚನ್ನಮ್ಮ ಕುರಿತಾದ ವಿಶೇಷ ಪ್ರಸ್ತುತಿ ಇರಲಿದೆ.
    ಟ್ರಸ್ಟಿ ಜಯವಂತ ಶಾನಬಾಗ್ ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts