More

    ಜನಾಂಗೀಯನದ ಸುಂದರ ರೂಪಕ ಕಾಕನಕೋಟೆ – ಡಾ. ಚಿಕ್ಕಣ್ಣ

    ತುಮಕೂರು:
    ಮಾಸ್ತಿ ಅವರ ಕಾಕನಕೋಟೆ ನಾಟಕ ಜನಾಂಗೀಯ ಅಧ್ಯಯನಕ್ಕೆ ಉತ್ತಮ ಉದಾಹರಣೆ ಎಂದು ಜಾನಪದ ವಿದ್ವಾಂಸರಾದ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಅಭಿಪ್ರಾಯಪಟ್ಟರು.
    ಸಿದ್ದಾರ್ಥ ವ್ಯವಹಾರ ನಿರ್ವಹಣಾ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಮತ್ತು ಐಕಿಅಇ -ಆಂತರಿಕ
    ಗುಣಮಟ್ಟ ಭರವಸಾಕೋಶ ಏರ್ಪಡಿಸಿದ್ದ ವಿದ್ಯಾರ್ಥಿ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
    ಕಾಕನಕೋಟೆ ನಾಟಕವನ್ನು ಜನಾಂಗೀಕ ,ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದಾಗ ನಾಟಕಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಮಾಸ್ತಿಯವರು ಕಾಡು ಕುರುಬರ ಬಗ್ಗೆ ಅಧ್ಯಯನ ಮಾಡಿ ಈ ನಾಟಕ ರಚಿಸಿದ್ದು ಚೇತೋಹಾರಿಯಾಗಿ ಮೂಡಿ ಬಂದಿದೆ ಎಂದರು.
    ಈ ನಾಟಕದ ಹಿನ್ನೆಲೆಯಲ್ಲಿ ಕುರುಬ ಜನಾಂಗದ ಆಚಾರ ವಿಚಾರ ನಂಬಿಕೆ ಸಂಪ್ರದಾಯಗಳನ್ನು ತಮ್ಮ ವಿಶೇಷ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
    ವಿದ್ಯಾರ್ಥಿಗಳೇ ನಡೆಸಿ ನಡೆಸುತ್ತಿರುವ ಈ ವಿಚಾರ ಸಂಕಿರಣ ತುಮಕೂರು ಜಿಲ್ಲೆಗೆ ನೂತನವಾಗಿದ್ದು ಇತರರು ಇದನ್ನು ರೂಡಿಸಿಕೊಳ್ಳಲು ಮಾದರಿ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.
    ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಪಾವಗಡ ರೇಣುಕಾ ಪ್ರಸಾದ್, ಅವರು ವಿದ್ಯಾರ್ಥಿಗಳೇ ನಡೆಸಿಕೊಡುತ್ತಿರುವ ಈ ವಿಚಾರ ಸಂಕಿರಣವು ವಿದ್ಯಾರ್ಥಿಗಳ ಅಧ್ಯಯನದ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದೆ. ಭಾಷೆಯ ಕಲಿಕೆ, ವಿಷಯ ಮಂಡನೆ ಮತ್ತು ಆಯೋಜನೆಗೆ ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
    ವಿದ್ಯಾರ್ಥಿ ಗೋಷ್ಠಿಯಲ್ಲಿ ನಾ ಮೆಚ್ಚಿದ ಪಾತ್ರ ನನ್ನ ಮಾತು ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿ ಸಿ ಎ
    ವಿದ್ಯಾರ್ಥಿಗಳಾದ ಹರ್ಷಿತ್, ಲಿಖಿತಾ ಎಂ, ಚಿರಂತ ಎಂ ಯು, ಚಂದನ ಎಂ.ಆರ್, ಅರ್ಪಿತಾ ಬಿ.ವೈ, ಛಾಯ ಕೆ, ದೊರೆಸ್ವಾಮಿ, ಹೇಮಂತ್ ಎನ್, ರಚನಾ, ವಸಂತ ಕುಮಾರ್, ತನುಜಾ, ಮತ್ತು ಲತೇಶ್ ಅವರು ನಾಟಕದಲ್ಲಿ ಬರುವ ಪಾತ್ರಗಳಾದ ಕಾಕಾ, ಕರಣಿಕ, ಹೆಗಡೆ, ಚಿಕ್ಕಯ್ಯ, ಮೊಲ್ಲೆ ಮತ್ತು ಪಾತ್ರಗಳ ಬಗ್ಗೆ ಪ್ರಬಂಧ ಮಂಡಿಸಿ ಪಾತ್ರಗಳ ಹಿನ್ನೆಲೆಯಲ್ಲಿರುವ ಪ್ರೇಮ, ಪ್ರಕೃತಿ ಆರಾಧನೆ, ಕಾಡು ಕುರುಬರ ದೈವ ನಂಬಿಕೆ, ಅವರ ವಿವಾಹ ಕ್ರಮ ಇವುಗಳನ್ನು ಕುರಿತಂತೆ ಆಕರ್ಷಕವಾಗಿ ಚರ್ಚಿಸಿ ಸಭೆಯ ಗಮನ ಸೆಳೆದರು.
    ವಿಜಯವಾಣಿಯ ಯತೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಜಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
    ಕು.ಅನುಷಾ ಟಿಎಸ್ ಸ್ವಾಗತಿಸಿದರು. ನಿಮಿಷ ಸಿಎಸ್ ವಂದಿಸಿದರು. ತೇಜಸ್ವಿನಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts