More

    ಕಬಡ್ಡಿ ಟೀಂ ಬಂತು ದಾರಿ ಬಿಡಿ…;ಪಿಎಂನಿಂದ ಸಿಎಂವರೆಗೂ ರಕ್ಷಣೆಗೆ ಸೈ

    | ಮಂಜುನಾಥ ಕೆ. ಬೆಂಗಳೂರು

    ಶಿಸ್ತಿನ ಸಿಪಾಯಿಗಳು, ಕಟುಮಸ್ತಾದ ದೇಹ, ಸಪಾರಿ ಬಟ್ಟೆ ಕತ್ತಿನಲ್ಲಿ ಐಡಿ ಕಾರ್ಡ್, ಅತೀ ಗಣ್ಯ ವ್ಯಕ್ತಿಗಳ ಬಳಿ ಯಾರೊಬ್ಬರೂ ಸುಳಿಯದಂತೆ ಹದ್ದಿನ ಕಣ್ಣು ಇಡುವ ಚಾಕಚಾಕ್ಯತೆ… ಇದು ಕಬಡ್ಡಿ ಟೀಂನ ವಿಶೇಷತೆಗಳು.

    ಕಬಡ್ಡಿ ಟೀಂ ಅಂತನೇ ಹೆಸರುವಾಸಿಯಾಗಿರುವ 14 ಸದಸ್ಯರು ಇರುವ ಪೊಲೀಸರ ತಂಡ ಅತೀಗಣ್ಯರು ಭಾಗವಹಿಸುವ ಕಾರ್ಯಕ್ರಮದಲ್ಲಿ 2ನೇ ರೋಲ್​ನ ಬಂದೋಬಸ್ತ್ ಭಾಗವಾಗಿ ಕರ್ತವ್ಯ ನಿರ್ವಹಿಸುತ್ತಾರೆ.

    ಕಾಂಬೇಟ್ ತರಬೇತಿ: ಕಬಡ್ಡಿ ತಂಡದವರಿಗೆ ಕಾಂಬೇಟ್ ಎಂಬ ವಿಶೇಷ ತರಬೇತಿ ನೀಡಲಾಗಿದೆ. ಬಂದೋಬಸ್ತ್​ನ ಭಾಗವಾಗಿ ಅತಿ ಹೆಚ್ಚು ಜನರು ಸೇರುವ ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಈ ತಂಡದ ಸದಸ್ಯರು ಶಕ್ತರಾಗಿರುತ್ತಾರೆ. ಯಾವುದೇ ಶಸ್ತ್ರಾಸ್ತ್ರ್ತ್ರಳು ಇಲ್ಲದೆ ಹೋದರೂ ಜನ ಮೈಮೇಲೆ ಬಿದ್ದಂತಹ ಸಂದರ್ಭದಲ್ಲಿ ಅವರನ್ನು ನಿಭಾಯಿಸುವಂತಹ ಚಾಕಚಕ್ಯತೆ ಇವರಿಗಿರುತ್ತದೆ.

    ಪ್ರತಿನಿತ್ಯ ಕಬಡ್ಡಿ ಅಭ್ಯಾಸ: ಕಬಡ್ಡಿ ಟೀಂ ಬೆಂಗಳೂರು ನಗರ ಪೊಲೀಸ್ ಘಟಕವನ್ನು ಪ್ರತಿನಿಧಿಸಿ ರಾಷ್ಟ್ರ ಹಾಗೂ ಹಲವಾರು ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿ, ಪದಕಗಳನ್ನು ಪಡೆದಿದ್ದಾರೆ. ಈಗಾಲೂ ಪ್ರತಿನಿತ್ಯ ಕಬಡ್ಡಿ ಪೂರ್ವಾಭ್ಯಾಸ ಮಾಡುತ್ತಾರೆ. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸ್ಥಳ ಮಹಜರು ವೇಳೆ ಅಭಿಮಾನಿಗಳನ್ನು ನಿಯಂತ್ರಿಸಿದ್ದು ಸಹ ಇದೇ ಕಬಡ್ಡಿ ತಂಡ. ಎಷ್ಟೇ ಜನಜಂಗುಳಿ ಇದ್ದರೂ ತಲೆಕೆಡೆಸಿಕೊಳ್ಳದೆ ಜನರನ್ನು ನಿಯಂತ್ರಿಸಿ ಗಣ್ಯರಿಗೆ ಬೆಂಗಾವಲಾಗಿ ಇರುತ್ತಾರೆ.

    ಕಬಡ್ಡಿ ಟೀಂ ಬಂತು ದಾರಿ ಬಿಡಿ…;ಪಿಎಂನಿಂದ ಸಿಎಂವರೆಗೂ ರಕ್ಷಣೆಗೆ ಸೈ

    ಅತಿಗಣ್ಯ ವ್ಯಕ್ತಿಗಳು ಅಂದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹಮಂತ್ರಿ, ಮುಖ್ಯಮಂತ್ರಿ ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮದಲ್ಲಿ 2ನೇ ರೋಲ್​ನಲ್ಲಿ ಬಂದೋಬಸ್ತ್​ನ ಭಾಗವಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಸಾರ್ವಜನಿಕರ ನಡವಳಿಕೆಗಳ ಮೇಲೆ ಗಮನ ಹರಿಸಿ ವಿವಿಐಪಿ ಅವರ ಸುಗಮ ಸಂಚಾರಕ್ಕೆ ಅವರ ಸುರಕ್ಷತೆಯ ಬಗ್ಗೆ ಅಗತ್ಯ ಕ್ರಮ ವಹಿಸುವದರೊಂದಿಗೆ, ಅಧಿಕೃತ ಅನುಮತಿ ಪತ್ರಗಳನ್ನು ಪರಿಶೀಲಿಸುವುದರೊಂದಿಗೆ ಯಾವುದೇ ವ್ಯಕ್ತಿಗಳು ಅತಿ ಗಣ್ಯ ವ್ಯಕ್ತಿಗಳ ಬಳಿ ಯಾರೂ ಸುಳಿಯದಂತೆ ನೋಡಿಕೊಳ್ಳುತ್ತಾರೆ. ರಾಷ್ಟ್ರಪತಿ, ಪ್ರಧಾನಿ, ಹೋಮ್ ಮಿನಿಸ್ಟರ್ ಬಂದಾಗ, ವಿಶೇಷ ರಕ್ಷಣಾ ದಳ (ಎಸ್​ಪಿಜಿ) 1ನೇ ರೋಲ್​ನಲ್ಲಿ ಬಂದೋಬಸ್ತ್ ಕಾರ್ಯನಿರ್ವಹಿಸುತ್ತದೆ. ಈ ತಂಡದ ಸಲಹೆ ಸೂಚನೆಯ ಮೇರೆಗೆ ಕಬಡ್ಡಿ ಟೀಂ 2 ರೋಲ್​ನಲ್ಲಿ ಕಾರ್ಯನಿರ್ವಹಿಸುತ್ತದೆ.

    ಕಬಡ್ಡಿ ಟೀಂ ಬಂತು ದಾರಿ ಬಿಡಿ…;ಪಿಎಂನಿಂದ ಸಿಎಂವರೆಗೂ ರಕ್ಷಣೆಗೆ ಸೈ

    ಕೋರಿಕೆ ಮೇರೆಗೆ ಕರ್ತವ್ಯ ನಿರ್ವಹಣೆ: ವಿವಿಐಪಿ ಸುರಕ್ಷತೆ ಮಾತ್ರವಲ್ಲದೇ ಬೆಂಗಳೂರು ನಗರದಲ್ಲಿ ನಡೆಯುವಂತಹ ಪ್ರತಿಭಟನೆಗಳು, ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಗಾರರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನಸಂಖ್ಯೆ ಸೇರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಕೋರಿಕೆಯ ಮೇರೆಗೆ ಬಂದೋಬಸ್ತ್​ನ ಭಾಗವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಬೆಂಗಳೂರು ನಗರದಲ್ಲಿ ಪ್ರತಿವರ್ಷ ನಡೆಯುವ ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ ದಿನಾಚರಣೆ, ಗಣೇಶ ಚತುರ್ಥಿ, ದಸರಾ ಇನ್ನಿತರ ಪ್ರಮುಖ ಹಬ್ಬಗಳಲ್ಲಿ ನಡೆಯುವ ಮೆರವಣಿಗೆಗಳಲ್ಲಿ ಸಂಬಂಧಪಟ್ಟ ಡಿಸಿಪಿ ಕೋರಿಕೆಯ ಮೇರೆಗೆ ಭದ್ರತಾ ಕರ್ತವ್ಯ ನಿರ್ವಹಿಸುತ್ತಾರೆ. ಹೋರಾಟದ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಕರವೇ ನಾರಾಯಣ ಗೌಡ ಸೇರಿ ಮತ್ತಿತರರನ್ನು ವಶಕ್ಕೆ ಪಡೆದು, ಅವರನ್ನು ಮಕ್ಕಳಂತೆ ಎತ್ತಿಕೊಂಡು ಹೋಗಿ ಪೊಲೀಸ್ ವಾಹನ ಅಥವಾ ಬಸ್​ಗೆ ಹತ್ತಿಸುವುದು ಕೂಡ ಇವರೇ!

    ಕಬಡ್ಡಿ ಹೆಸರು ಬರಲು ಕಾರಣವೇನು?: ಪೊಲೀಸ್ ಇಲಾಖೆಯಲ್ಲಿ ಕಬಡ್ಡಿ ಟೀಂ 1979ರಲ್ಲಿ ಪ್ರಾರಂಭವಾಯಿತು. ಈ ಬಗ್ಗೆ ಕರ್ನಾಟಕ ರಾಜ್ಯ ಅಮೇಚ್ಚರಿ ಕಬ್ಬಡಿ ಅಸೋಸಿಯೇಷನ್​ನಲ್ಲಿ ನೋಂದಣಿಯಾಗಿದೆ. ಕ್ರೀಡಾ ಕೋಟದಡಿ ಇವರನ್ನು ಆಯ್ಕೆ ಮಾಡಲಾಗಿರುತ್ತದೆ. ಈ ತಂಡದಲ್ಲಿ 12ರಿಂದ 14 ಸದಸ್ಯರಿದ್ದಾರೆ. ಅವರು ಪ್ರತಿನಿತ್ಯ ಸಮಯಾನುಸಾರ ಕಂಠೀರವ ಕ್ರಿಡಾಂಗಣದಲ್ಲಿ ಕಬಡ್ಡಿ ಪೂರ್ವಾಭ್ಯಾಸ ಹಾಗೂ ವ್ಯಾಯಾಮದಲ್ಲಿ ತೊಡಗಿ ದೇಹವನ್ನು ಸದೃಢವಾಗಿ ಇಟ್ಟುಕೊಂಡಿದ್ದಾರೆ.

    ರಾಷ್ಟ್ರಪತಿ, ಪಿಎಂ, ಸಿಎಂ ಸೇರಿ ಇತರ ವಿವಿಐಪಿಗಳ ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಬಡ್ಡಿ ಟೀಂ ಸುರಕ್ಷತೆ ಬಗ್ಗೆ ಅಗತ್ಯ ಕ್ರಮ ವಹಿಸುತ್ತಾರೆ. ಜತೆಗೆ ಬೃಹತ್ ಪ್ರತಿಭಟನೆ, ಬಂದ್​ಗಳು ಆದಾಗ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಭದ್ರತೆಗೆ ನಿಯೋಜಿಸಲಾಗುತ್ತದೆ. ಇವರಿಗೆ ವಿಶೇಷ ತರಬೇತಿಯನ್ನು ನೀಡಲಾಗಿರುತ್ತದೆ.

    | ಸಾಹಿಲ್ ಬಾಗ್ಲಾ ಗುಪ್ತ ವಾರ್ತೆ, ಉಪ ಪೊಲೀಸ್ ಆಯುಕ್ತ

    NEET ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಾಂಶುಪಾಲರ ಬಂಧನ

    ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್‌ಗೆ ಜಾಮೀನು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts