More

    ಪತ್ರಿಕೋದ್ಯಮ ಪವಿತ್ರ ಧರ್ಮ

    ವಿಜಯಪುರ: ಪತ್ರಿಕೋದ್ಯಮ ಒಂದು ಪವಿತ್ರ ಧರ್ಮ. ನಿಸ್ವಾರ್ಥ ಸೇವೆ ಮೂಲಕ ಪತ್ರಿಕೋದ್ಯಮವನ್ನು ಉಳಿಸಿ&ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ್​ ಹೇಳಿದರು.

    ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಇತಿಹಾಸ ಅಧ್ಯಯನ ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ಮಾಧ್ಯಮ ಕ್ಷೇತ್ರ ವಿಶಾಲವಾಗಿ ಬೆಳೆದಿದೆ. ಅದರಲ್ಲೂ ಪತ್ರಿಕೆಗಳ ಪಾತ್ರ ಅನನ್ಯ. ಇಂದು ಪತ್ರಿಕೋದ್ಯಮದಲ್ಲಿ ಸಾಕಷ್ಟು ತಂತ್ರಜ್ಞಾನ ಬೆಳೆದಿದೆ. ಈ ತಂತ್ರಜ್ಞಾನ ಬಳಸಿಕೊಂಡು ತ್ವರಿತವಾಗಿ ಮತ್ತು ನಿಖರವಾಗಿ ಜನರಿಗೆ ಮಾಹಿತಿ ತಲುಪಿಸಬೇಕಿದೆ. ಸಂತಸದ ವಿಷಯವೆಂದರೆ ಇಂದು ಪತ್ರಿಕೆಗಳು ವಿಶ್ವಾಸಾರ್ಹತೆಯಿಂದ ಕೂಡಿರುವುದು ಎಂದರು.

    ಪತ್ರಿಕೆಗಳು ಜನಪರವಾಗಿದ್ದು, ಜನರ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿವೆ. ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುತ್ತಿವೆ.

    ಸರ್ಕಾರದ ಯೋಜನೆಗಳನ್ನು, ನೀತಿಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವಾಗ ಅನೇಕ ಅಡೆತಡೆಗಳು ಬಂದರೂ ಅವುಗಳನ್ನು ಎದುರಿಸಿ ನಿಲ್ಲಬೇಕು ಎಂದರು.

    ಕತಾರ್​ನ ಮಾಧ್ಯಮ ತೆ ಮಾಗೇಶ್ವರಿ ಮಾತನಾಡಿ, ಪತ್ರಿಕೆಗಳು ಕನ್ನಡ ಭಾಷೆಯ ಜೀವಾಳ. ಕನ್ನಡ ಭಾಷೆಯನ್ನು ಮನೆ ಮನೆಗೆ ಒಯ್ಯುವ ಮೂಲಕ ಪ್ರಚಾರ ಮಾಡುತ್ತವೆ. ಇಂದು ನಾವು ಆಚರಿಸುತ್ತಿರುವುದು ಕೇವಲ ಪತ್ರಿಕಾ ದಿನಾಚರಣೆಯಲ್ಲ; ಕನ್ನಡ ಪತ್ರಿಕೋದ್ಯಮದ ಪರಂಪರೆಯನ್ನು ಆಚರಿಸುತ್ತಿದ್ದೇವೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಕೆ. ತುಳಸಿಮಾಲ ಮಾತನಾಡಿ, ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರನ್ನು ಸ್ಮರಿಸೋಣ. ಅವರಿಗೆ ಈ ಸಂದರ್ಭದಲ್ಲಿ ಕೃತತೆ ಸಲ್ಲಿಸೋಣ ಎಂದರು.

    ಡಾ. ಸುರೇಶ್​ ಕೆ.ಪಿ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿಯರಾದ ಸುಷ್ಮಾ ಪವಾರ ಮತ್ತು ಫಿಲೋಮಿನಾ ಅತಿಥಿಗಳನ್ನು ಪರಿಚಯಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಎಸ್​. ಮುಜಾವರ್​ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನ ನಿಗಾರ್​ ಸುಲ್ತಾನಾ ನಿರೂಪಿಸಿದರು.

    ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕಿ ಚಂದ್ರಕಲಾ ಹಳ್ಳಿ, ಗುರುರಾಜ ಬೋಮನಹಳ್ಳಿ, ಪತ್ರಕರ್ತ ಬಸವರಾಜ ಸಂಪಳ್ಳಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts