ಭಾರತಕ್ಕೆ ಬರ್ತಿದ್ದಾರೆ ಡಬ್ಲ್ಯುಡಬ್ಲ್ಯುಇ ತಾರೆ ಜಾನ್​ ಸೀನಾ; ಎಲ್ಲಿ, ಯಾವಾಗ ಸ್ಪರ್ಧೆ? ಇಲ್ಲಿದೆ ಮಾಹಿತಿ…

ನವದೆಹಲಿ: ಡಬ್ಲ್ಯುಡಬ್ಲ್ಯುಇ ಸೂಪರ್​ಸ್ಟಾರ್​ ಜಾನ್​ ಸೀನಾ ಭಾರತದಲ್ಲಿ ಸ್ಪರ್ಧಿಸಲು ಆಗಮಿಸುತ್ತಿದ್ದಾರೆ. ಸೆಪ್ಟೆಂಬರ್​ 6ರಂದು ಹೈದರಾಬಾದ್​ನಲ್ಲಿ ನಡೆಯಲಿರುವ ಡಬ್ಲ್ಯುಡಬ್ಲ್ಯುಇ ಸೂಪರ್​ಸ್ಟಾರ್​ ಸ್ಪೆಕ್ಟಾಕಲ್​ ಇವೆಂಟ್​ನಲ್ಲಿ 16 ಬಾರಿಯ ವಿಶ್ವ ಚಾಂಪಿಯನ್​ ಜಾನ್​ ಸೀನಾ ಕುಸ್ತಿ ಕಣಕ್ಕಿಳಿಯಲಿದ್ದಾರೆ. ಕೂಟದಲ್ಲಿ ಸೀನಾಗೆ ವಿಶ್ವ ಹೆವಿವೇಟ್​ ಚಾಂಪಿಯನ್​ ಸೆತ್​ ರೋಲಿನ್ಸ್​ ಸಾಥ್​ ನೀಡಲಿದ್ದು, ಇವರಿಬ್ಬರು ಜತೆಯಾಗಿ ಲುಡ್​ವಿಗ್​ ಕೈಸರ್​ ಮತ್ತು ಗಿಯೋವನ್ನಿ ವಿನ್ಸಿ ವಿರುದ್ಧ ಸೆಣಸಲಿದ್ದಾರೆ. ಈಗಾಗಲೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಜಾನ್​ ಸೀನಾ, ಭಾರತದಲ್ಲಿ ಮೊದಲ ಬಾರಿಗೆ ಫೈಟ್​ ಮಾಡಲಿದ್ದಾರೆ. 46 … Continue reading ಭಾರತಕ್ಕೆ ಬರ್ತಿದ್ದಾರೆ ಡಬ್ಲ್ಯುಡಬ್ಲ್ಯುಇ ತಾರೆ ಜಾನ್​ ಸೀನಾ; ಎಲ್ಲಿ, ಯಾವಾಗ ಸ್ಪರ್ಧೆ? ಇಲ್ಲಿದೆ ಮಾಹಿತಿ…